ಅಪಘಾತ ಆಹ್ವಾನಿಸುವ ರಾಷ್ಟ್ರೀಯ ಹೆದ್ದಾರಿ
ಗುಂಡಿಗಳಿಂದ ಕೂಡಿರುವ ಹೆದ್ದಾರಿಯಲ್ಲಿ ಮಳೆ ಬಂದರೆ ಸಂಚಾರ ಅಸಾಧ್ಯ ಟೋಲ್ ಸಂಗ್ರಹಕ್ಕೆ ಸೀಮಿತವಾದ ಪ್ರಾಧಿಕಾರ
Team Udayavani, Nov 4, 2021, 12:37 PM IST
ನಂಜನಗೂಡು: ಗುಂಡಿಗಳಿಂದ ಕೂಡಿರುವ ರಾಷ್ಟ್ರೀಯ ಹೆದ್ದಾರಿಯು, ಮಳೆ ಬಂದರೆ ರಭಸವಾಗಿ ನೀರು ಹರಿಯುವ ನಾಲೆಯಂತಾಗುತ್ತದೆ. ರಸ್ತೆಯಲ್ಲಿ ನೀರು ಹರಿಯುವುದರಿಂದ ರಸ್ತೆ ಮಧ್ಯದಲ್ಲಿ ಬಿದ್ದಿರುವ ಗುಂಡಿಗಳು ಕಾಣದಂತಾಗಿದೆ. ಹೀಗಾಗಿ ವಾಹನ ಸವಾರರು ಸಂಚರಿಸಲು ಹರಸಾಹಸ ಪಡಬೇಕಿದೆ. ಹಲವು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಸ್ವಲ್ಪ ಆಯ ತಪ್ಪಿದ್ದರೂ ಅಪಘಾತ ಸಂಭವಿಸಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇದೆ.
ನಂಜನಗೂಡು-ಮೈಸೂರು ಮಧ್ಯ ದಲ್ಲಿರುವ ರಾಷ್ಟ್ರೀಯ ಹೆದ್ದಾರಿಯು ಅವ್ಯವಸ್ಥೆಗಳ ಆಗರವಾಗಿದೆ. ಇಲ್ಲಿ ಸಂಚರಿಸುವ ವಾಹನ ಗಳಿಂದ ಟೋಲ್ ಸುಂಕ ದಿಂದ ಕೋಟಿ ಕೋಟಿ ರೂ. ವಸೂಲಿ ಮಾಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು, ವಾಹನ ಸವಾರರಿಗೆ ನೀಡಿರುವ ಕೊಡುಗೆ ಎಂದರೆ ಅದು ಸರಣಿ ಅಪಘಾತ ಹಾಗೂ ಆಸ್ಪತ್ರೆ ವಾಸ ಎಂಬಂತಾಗಿದೆ. ಈ ರೀತಿಯ ಪರಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.
ಮೈಸೂರು ತಾಲೂಕಿನ ಕಡಕೊಳದಿಂದ ತಾಂಡವಪುರ ಹಾಗೂ ಅಲ್ಲಿಂದ ನಂಜನ ಗೂಡು ತಾಲೂಕಿನ ಮಲ್ಲನಮೂಲೆಯವರಿ ಗಿನ ರಸ್ತೆಯಲ್ಲಿ ಪ್ರಯಾಣಿಕರು ಕೈನಲ್ಲಿ ಜೀವ ಹಿಡಿದು ಸಂಚರಿಸಬೇಕಾಗಿದೆ. ಮಳೆ ನೀರು ಹರಿಯದಂತೆ ವೈಜ್ಞಾನಿಕವಾಗಿ ರಸ್ತೆ ನಿರ್ಮಿಸಬೇಕಿದ್ದ ಅಧಿ ಕಾರಿಗಳು ಹಾಘು ಎಂಜಿನಿಯರ್‌ಗಳ ಎಡವಟ್ಟಿನಿಂದಾಗಿ ಇಂದು ಈ ರಸ್ತೆ ಅಫ ಘಾತಗಳ ಸರಮಾಲೆ ಯನ್ನು ಸೃಷ್ಟಿಸುತ್ತಿದೆ.
ಕಡಕೊಳ ಹಾಗೂ ತಾಂಡವಪುರದ ರೇಷ್ಮೆ ಇಲಾಖೆಯ ಬಳಿ ಕಡಕೊಳ ಹಾಗೂ ಅಡಕನಹಳ್ಳಿ ಕೈಗಾರಿಕಾ ಕೇಂದ್ರಗಳ ಪ್ರದೇಶದಿಂದ ಹರಿದು ಬರುವ ಮಳೆ ನೀರು ಹರಿಯಲು ಚರಂಡಿಯೇ ಇಲ್ಲ. ಹೀಗಾಗಿ ಈ ನೀರೆಲ್ಲ ರಸ್ತೆಯೇ ಮೇಲೆ ಹರಿದು ಅಲ್ಲಿದ್ದ ಗುಂಡಿಗಳು ಸೃಷ್ಟಿಯಾಗಿವೆ. ನೀರು ಹರಿಯುವುದರಿಂದ ಈ ಗುಂಡಿಗಳು ಕಾಣದಂತಾಗಿ ಅಪಘಾತಗಳಿಗೆ ಎಡೆ ಮಾಡಿಕೊಟ್ಟಿದೆ. ತಾಂಡವಪುರ ಹಾಗೂ ಬಂಚಳ್ಳಿಹುಂಡಿ ಹಾಗೂ ಮಲ್ಲನಮೂಲೆ ಬಳಿ ಕೂಡ ಇದೇ ಅವ್ಯವಸ್ಥೆ ಇದೆ. ಹೆದ್ದಾರಿಯ ಅದ್ವಾನದಿಂದಾಗಿ ಅನೇಕರು ಕೈ ಕಾಲು ಮುರಿದುಕೊಂಡು ಆಸ್ಪತ್ರೆ ಸೇರುತ್ತಿದ್ದರೂ ಪ್ರಾಧಿಕಾರ ಮಾತ್ರ ಕಣ್ಣಿದ್ದೂ ಕುರುಡನಂತೆ ವರ್ತಿಸುತ್ತಿದೆ.
ಇದನ್ನೂ ಓದಿ;- ಮಾದಪ್ಪನ ಸನ್ನಿಧಿಯಲ್ಲಿ ದೀಪಾವಳಿ ಜಾತ್ರೆ ಸಂಭ್ರಮ
ನಂಜನಗೂಡು ತಾಲೂಕು ಪತ್ರಕರ್ತರ ಸಂಘದ ಹಾಲಿ ಅಧ್ಯಕ್ಷರೂ ಆಗಿರುವ ಮಹದೇವ ಪ್ರಸಾದ್ ಇದೇ ಸ್ಥಳದಲ್ಲಿ ಅಪಘಾತಕ್ಕೀಡಾಗಿ ಕೈ ಮುರಿದು ಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಸಾಕಷ್ಟು ವಾಹನ ಸವಾರರು ಬಿದ್ದು ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿರುವ ನಿದರ್ಶನಗಳು ಇವೆ. ಇಲ್ಲಿ ಅಪಘಾತ ಸಂಭವಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ನೇರ ಕಾರಣ ಎಂದು ವಾಹನ ಸವಾರರು ದೂರಿದ್ದಾರೆ. ಹೆದ್ದಾರಿ ಪ್ರಾಧಿಕಾರದ ಕಚೇರಿಯೂ ಈಗ ಮೈಸೂರಿನಲ್ಲಿ ಇಲ್ಲವಾಗಿದ್ದು, ಅದಕ್ಕೆ ನೈಜ ಸ್ಥಿತಿಯನ್ನು ತಿಳಿಸುವ ಬಗೆ ಹೇಗೆ ಎಂಬುದೇ ವಾಹನ ಸವಾರರ ಯಕ್ಷಪ್ರಶ್ನೆಯಾಗಿದೆ.
ಮತ್ತಷ್ಟು ಮಣ್ಣು ಕುಸಿದರೆ ಸಂಚಾರವೇ ಸ್ಥಗಿತ
ರಾಷ್ಟ್ರೀಯ ಹೆದ್ದಾರಿಯ ಏರಿ (ಧರೆ) ಕಡಕೊಳ ಬಳಿ ಈಗ ಕುಸಿಯಲು ಆರಂಭಿಸಿದೆ. ಅಲ್ಲಿ ಕೆಲವೇ ಮೀಟರ್ ಅಂತರದಲ್ಲಿರುವ ವರುಣಾ ನಾಲೆಯ ಮೇಲ್ಗಾಲುವೆ ಹಾಗೂ ರೈಲಿನ ಮೇಲ್ಸೇತುವೆ ಬಳಿ ಧರೆಯ ಮಣ್ಣು ಕುಸಿಯತೊಡಗಿದ್ದು, ಅಲ್ಲಿನ ಕಲ್ಲು ಮಣ್ಣುಗಳ ರಾಶಿ ಹೆದ್ದಾರಿಗೆ ಬಂದು ಬೀಳತೊಡಿಗಿದೆ. ಈ ಜಾಗದಲ್ಲಿ ಮತ್ತಷ್ಟು ಕುಸಿತವಾದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಕುಸಿತ ಸ್ವಲ್ಪ ಹೆಚ್ಚಾದರೆ ಬೆಂಗಳೂರು ನೀಲಗಿರಿ ರಸ್ತೆಯ (ನಂಜನಗೂಡು-ಮೈಸೂರು ಮಧ್ಯೆ) ಸಂಚಾರವೇ ಸ್ಥಗಿತವಾಗುವ ಸಾಧ್ಯತೆ ಇದೆ.
– ಶ್ರೀಧರ್ ಆರ್.ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.