Nanjangud: ವಲಸೆ ಪಕ್ಷಿಗಳನ್ನು ಬೇಟೆಯಾಡುತ್ತಿದ್ದ ಅರೋಪಿಗಳ ಬಂಧನ
Team Udayavani, Dec 20, 2023, 3:07 PM IST
ನಂಜನಗೂಡು: ತಾಲೂಕಿನ ಹದಿನಾರು ಗ್ರಾಮದ ಹದಿನಾರು ಕೆರೆ ಹಾಗೂ ಕಾಲುವೆ ಬಳಿ ಪಕ್ಷಿಗಳನ್ನು ಬೇಟೆಯಾಡುತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂದಿಸಿದ್ದಾರೆ.
ಅಂಥೋನಿ ಸೇವಿಯರ್ ಹಾಗೂ ರೋಹಿತ್ ಎ ಅವರನ್ನು ಬಂಧಿಸಿ ಬೇಟೆಯಾಡಿದ ಗ್ರೇಟರ್ ಕಾಕಲ್, ರೆಡ್ ನೆಪಿಯರ್ ಐಬಿಸ್ ಹಾಗೂ ಇತರೆ ಒಟ್ಟು ಏಳು ಪಕ್ಷಿಗಳ ಕಳೆಬರಹ, ಒಂದು ಸ್ಕೂಟರ್ (ಆಕ್ಸಸ್), ಒಂದು ಏರ್ ಗನ್ ವಶಪಡಿಸಿ ಆರೋಪಿಗಳನ್ನು ನಂಜನಗೂಡು ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಗ್ರಾಮಸ್ಥರು ನೀಡಿದ ಖಚಿತ ಮಾಹಿತಿ ಮೇರೆಗೆ ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಬಸವರಾಜ ಕೆ.ಎನ್. ಹಾಗೂ ಹೆಚ್ ಡಿ ಕೋಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮೀಕಾಂತ್ ಅವರ ಮಾರ್ಗದರ್ಶನದಲ್ಲಿ ನಂಜನಗೂಡು ಪ್ರಾದೇಶಿಕ ವಲಯದ ವಲಯ ಅರಣ್ಯಾಧಿಕಾರಿ ನಿತಿನ್ ಕುಮಾರ್ ಎಂ.ಸಿ. ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ಮದನ್ ಕುಮಾರ್ ಎಂ.ಜಿ., ಗಸ್ತು ಅರಣ್ಯ ಪಾಲಕರಾದ ಶರತ್ ಕುಮಾರ್ ಎಸ್.ಜೆ., ವೈಶಾಕ್ ಪಿ.ಎಲ್., ಸುನಿಲ್, ಮಂಜುನಾಥ್, ನಾಗಣ್ಣ ಸಿಬ್ಬಂದಿಗಳೊಂದಿಗೆ ಕಾರ್ಯಚರಣೆ ನಡೆಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.