ವ್ಯಾಪಾರ ವಹಿವಾಟು ಸ್ಥಗಿತ, ಪುನೀತ್‌ಗೆ ನಮನ
Team Udayavani, Oct 30, 2021, 12:18 PM IST
ಮೈಸೂರು: ಚಿತ್ರನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹಠಾತ್ ನಿಧನದಿಂದ ಜನತೆ ಧಿಗ್ಭ್ರಮೆಗೊಂಡಿದ್ದು, ನೆಚ್ಚಿನ ನಟನಿಗೆ ಕಂಬನಿ ಮಿಡಿಯುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ನಗರದ ಪ್ರಮುಖ ವೃತ್ತ, ರಸ್ತೆಯಲ್ಲಿ ಪುನೀತ್ ಅವರ ಭಾವಚಿತ್ರ ಹಾಕಿ, ಹೂಮಾಲೆ ಹಾಕಿ ಸಂತಾಪ ಸೂಚಿಸಲಾಯಿತು.
ನಗರದ ಹೃದಯಭಾಗವಾದ ಕೆ.ಆರ್.ವೃತ್ತದ ಬಳಿಯ ಮತ್ತು ಇತರ ಕೆಲ ಕಡೆ ಅಂಗಡಿಗಳು ಮಧ್ಯಾಹ್ನದ ಬಳಿಕ ಬಾಗಿಲು ಹಾಕಿವೆ. ತಮ್ಮ ವ್ಯಾಪಾರ ವಹಿವಾಟವನ್ನು ಬಂದ್ ಮಾಡುವ ಮೂಲಕ ಅಂಗಡಿ ಮಾಲೀಕರು ಶ್ರದ್ಧಾಂಜಲಿ ಸಲ್ಲಿಸಿದರು.
ಇದನ್ನೂ ಓದಿ:- ‘ಪ್ರೇಮಂ ಪೂಜ್ಯಂ’ ಕೌಂಟ್ ಡೌನ್
ಚಿತ್ರ ಪ್ರದರ್ಶನ ರದ್ದು: ಅಪ್ಪು ನಿಧನರಾದ ಹಿನ್ನೆಲೆ ನಗರದ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನವನ್ನು ರದ್ದು ಪಡಿಸಲಾಯಿತು. ಮಧ್ಯಾಹ್ನ 2.30 ಹಾಗೂ 4.30ರ ಪ್ರದರ್ಶನವನ್ನು ರದ್ದು ಮಾಡಲು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾ ಮಂಡಳಿ ನಿರ್ಧಾರ ತೆಗೆದುಕೊಂಡಿದ್ದು, ಈ ಪ್ರಕಾರ ಮೈಸೂರಿನಲ್ಲೂ ಚಿತ್ರ ಪ್ರದರ್ಶನ ಸ್ಥಗಿತ ಗೊಳಿಸಲಾಯಿತು ಎಂದು ಮಂಡಳಿ ಉಪಾಧ್ಯಕ್ಷ ರಾಜಾರಾಮ್ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.