ವಿಶೇಷ ಅಂಚೆ ಲಕೋಟೆ, ಚೀಟಿ ಬಿಡುಗಡೆ
ವ್ಯಂಗ್ಯಚಿತ್ರಕಾರ ಕೆ.ಆರ್.ಲಕ್ಷ್ಮಣ್ ಜನ್ಮ ಶತಮಾನೋತ್ಸವ ಪ್ರಯುಕ್ತ ಅಂಚೆ ಇಲಾಖೆಯಿಂದ ಸ್ಮರಣೆ
Team Udayavani, Oct 25, 2021, 1:04 PM IST
ಮೈಸೂರು: ಭಾರತೀಯ ಅಂಚೆ ಕರ್ನಾಟಕ ವೃತ್ತ ವತಿಯಿಂದ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಅವರ ವ್ಯಂಗ್ಯಚಿತ್ರಗಳನ್ನು ಒಳಗೊಂಡ ವಿಶೇಷ ಅಂಚೆ ಲಕೋಟೆ ಹಾಗೂ 3 ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಲಾಯಿತು.
ನಗರದ ನಜರ್‌ಬಾದ್‌ನಲ್ಲಿರುವ ಅಂಚೆ ತರಬೇತಿ ಕೇಂದ್ರದಲ್ಲಿ ಭಾನುವಾರ ನಡೆದ ಕಾರ್ಯಕ್ರಮ ದಲ್ಲಿ ಮೈಸೂರು ವ್ಯಂಗ್ಯಚಿತ್ರಕಾರರ ಸಂಘದ ಸಂಸ್ಥಾಪಕ ಸದಸ್ಯ ಎಂ.ವಿ. ನಾಗೇಂದ್ರ ಬಾಬು ವಿಶೇಷ ಅಂಚೆ ಲಕೋಟೆ ಹಾಗೂ ಮೂರು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ದೈನಂದಿನ ಜೀವನದ ಸಮಸ್ಯೆ, ಘಟನಾವಳಿಗಳನ್ನು ಇಟು ಕೊಂಡು ವ್ಯಂಗ್ಯಚಿತ್ರ ಮೂಲಕ ವಿಡಂಬನಾತ್ಮಕ ವಾಗಿ ಚಿತ್ರಿಸುತ್ತಿದ್ದ ಲಕ್ಷ್ಮಣ್ ಅವರು, ತಮ್ಮ ಮೂರನೆ ವಯಸ್ಸಿನಿಂದಲೇ ಚಿತ್ರಕಲೆಯಲ್ಲಿ ತೊಡಗಿಸಿ ಕೊಂಡಿದ್ದರು. ಅವರ ಇಷ್ಟು ಪ್ರಸಿದ್ಧಿ ಪಡೆದಿರುವ ಹಿಂದೆ ಸಾಕಷ್ಟು ಪರಿಶ್ರಮವಿದೆ ಎಂದು ಸ್ಮರಿಸಿದರು.
ಇದನ್ನೂ ಓದಿ:- ಬಡವರ, ನಿರ್ಗತಿಕರ ನೊಂದವರ ಸೇವೆಯಲ್ಲಿ ಪ್ರತಿಯೊಬ್ಬರ ಸಹಕಾರ ಮುಖ್ಯ: ಸಂಗಮೇಶ ನಿರಾಣಿ
ಭಾರತ ರತ್ನ ಪ್ರಶಸ್ತಿ ನೀಡಿ: ಇಂದು ದೇಶದ ಪ್ರಮುಖ ಕಾದಂಬರಿಗಳಲ್ಲಿ ಗುರುತಿಸಿಕೊಂಡಿ ರುವ ಆರ್.ಕೆ. ನಾರಾಯಣ್ ಅವರ ಮಾಲ್ಗುಡಿ ಡೇಸ್ ಕಾದಂಬರಿ ಹೆಚ್ಚು ಜನಪ್ರಿಯವಾಗಲು ಲಕ್ಷ್ಮಣ್ ಚಿತ್ರಗಳು ಪ್ರಮುಖ ಕಾರಣ ಎಂದು ಹೇಳಿದರೆ ತಪ್ಪಾಗಲಾರದು. ತಮ್ಮದೇ ಶೈಲಿಯ ಚಿತ್ರ ರಚನೆ ಮೂಲಕ ಜಗತ್ತಿನ ಪ್ರಖ್ಯಾತ ವ್ಯಂಗ್ಯ ಚಿತ್ರಕಾರರಾಗಿ ಗುರುತಿಸಿಕೊಂಡಿರುವ ಆರ್.ಕೆ. ಲಕ್ಷ್ಮಣ್ ಅವರಿಗೆ ಭಾರತ ಸರ್ಕಾರ ಮುಂದೆಯಾದರೂ ಭಾರತ ರತ್ನ ಪ್ರಶಸ್ತಿ ನೀಡಬೇಕು. ಇದಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಲಿ ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಆರ್.ಕೆ. ಲಕ್ಷ್ಮಣ್ ಅವರ ಜನ್ಮಶತಮಾತೊÕವದ ಅಂಗವಾಗಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮೂವರು ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ನಂತರದ ವ್ಯಂಗ್ಯಚಿತ್ರಕಾರ ಹಾಗೂ ಪತ್ರಕರ್ತ ದೊಡ್ಡಹುಂಡಿ ರಾಜಣ್ಣ ವ್ಯಂಗ್ಯಚಿತ್ರ ರಚನೆಯ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕರ್ನಾಟಕ ವೃತ್ತದ ಪ್ರಧಾನ ಅಂಚೆ ಅಧೀಕ್ಷಕಿ ಶಾರದಾ ಸಂಪತ್, ಅಂಚೆ ತರಬೇತಿ ಕೇಂದ್ರದ ನಿರ್ದೇಶಕ ಎಂ.ಬಿ. ಗಜಬಾಯ್ ಮತ್ತಿತರರು ಇದ್ದರು.
ಜನಜೀವನ ಅವಲೋಕಿಸಿ ಚಿತ್ರ ರಚಿಸುತ್ತಿದ್ದ ಲಕ್ಷ್ಮಣ್-
ಮೈಸೂರಿನ ದೇವರಾಜ ಮಾರುಕಟ್ಟೆ, ರೈಲ್ವೆ ನಿಲ್ದಾಣ, ನಗರ ಬಸ್ ನಿಲ್ದಾಣ ಸೇರಿದಂತೆ ಜನನಿ ಬಿಡ ಸ್ಥಳಗಳಿಗೆ ಭೇಟಿಕೊಟ್ಟು ಅಲ್ಲಿನ ಜನಜೀವನ ಅವಲೋಕಿಸಿ ವ್ಯಂಗ್ಯಚಿತ್ರ ಬರೆಯುತ್ತಿದ್ದರು. ಆಳುವ ಸರ್ಕಾರಗಳಿಗೆ ಜನರ ಬವಣೆಗಳನ್ನು ತಮ್ಮ ಶೈಲಿಯಲ್ಲಿ ವಿವರಿಸುತ್ತಿದ್ದರು. ಅವರಿಗೆ ಮೈಸೂರಿನ ಕುಕ್ಕರಹಳ್ಳಿ ಕೆರೆ ಇಷ್ಟವಾದ ಸ್ಥಳವಾ ಗಿತ್ತು. ಅಲ್ಲಿನ ಸೂರ್ಯೋದಯ ನೋಡಲು ನಿತ್ಯ ಕೆರೆಗೆ ಭೇಟಿ ಕೊಡುತ್ತಿದ್ದರು ಎಂದು ಮೈಸೂರು ವ್ಯಂಗ್ಯಚಿತ್ರಕಾರರ ಸಂಘದ ಸಂಸ್ಥಾಪಕ ಸದಸ್ಯ ಎಂ.ವಿ. ನಾಗೇಂದ್ರ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.