ಹುಣಸೂರಿನ ವಿವಿದೆಡೆ ಕೊಡವರ ಕೈಲ್ (ಪೊಲ್ದ್) ಮುಹೂರ್ತ ಆಚರಣೆ
Team Udayavani, Sep 5, 2022, 8:56 AM IST
ಹುಣಸೂರು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಾಸವಿರುವ ಕೊಡವರು, ಗೌಡ ಹಾಗೂ ಇತರೆ ಕೊಡವ ಸಮಾಜದವರು ಕೈಲ್ (ಪೊಲ್ದ್) ಮುಹೂರ್ತ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.
ಕೊಡವರ ಪ್ರಮುಖ ಹಬ್ಬಗಳಲ್ಲಿ ಒಂದಾದ ಕೈಲ್ ಮುಹೂರ್ತ ಹಬ್ಬ ಪ್ರಮುಖ ಹಬ್ಬವಾಗಿದ್ದು, ಕೊಡಗಿನಿಂದ ಬಂದು ಈ ಭಾಗದ ವಿವಿಧ ಗ್ರಾಮಗಳಲ್ಲಿ ನೂರಾರು ಕುಟುಂಬಗಳು ನೆಲೆಸಿದ್ದಾರೆ. ಇವರು ಮೂಲತಃ ಕೃಷಿಕರಾದ ಕೊಡಗಿನ ಜನ ತಮ್ಮ ಮನೆಯಲ್ಲಿರುವ ದೀಪ, ದೇವರಪೀಟ, ಆಯುಧಗಳಾದ ಬಂದೂಕು, ಒಡಿಕತ್ತಿ, ಪೀಚೆಕತ್ತಿ ಸೇರಿದಂತೆ ವ್ಯವಸಾಯಕ್ಕೆ ಬಳಸುವ ಪರಿಕರಗಳನ್ನು ಶುಚಿಗೊಳಿಸಿ ಹಬ್ಬದ ದಿನದಂದು ಪೂಜಿಸುವುದೇ ಕೈಲ್ ಮೂಹೂರ್ತ ಹಬ್ಬವಾಗಿದ್ದು, ಇದರೊಂದಿಗೆ ಕೊಡಗಿನ ಸಾಂಪ್ರದಾಯಿಕ ಮಾಂಸಹಾರ (ಪಂದಿಕರಿ, ಕಡಂಬುಟ್ಟು) ಊಟ ವಿಶೇಷವಾಗಿರುತ್ತದೆ.
ಕೈಲ್ ಮೂಹೂರ್ತ ಹಬ್ಬವು ಕೊಡಗಿನಲ್ಲಿ ನಮ್ಮ ಪುರಾತನ ಕಾಲದಿಂದಲೇ ನಡೆದುಕೊಂಡು ಬಂದಿರುವ ಹಬ್ಬವಾಗಿದ್ದು ಪ್ರತಿ ವರ್ಷ ನಮ್ಮ ಸಮುದಾಯದ ಮನೆಗಳಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.