ಅಧಿಕಾರಿಗಳ ವಿರುದ್ಧ ಸಿಇಒ ಗರಂ

Team Udayavani, Jun 18, 2020, 5:24 AM IST

adhikari-ceo

ಮೈಸೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಜೂ.25ರಿಂದ ಜು.6ರವರೆಗೆ ನಡೆಯಲಿದ್ದು, ಇದಕ್ಕೆ ಸಂಬಂಧಿಸಿದಂತೆ 19ರಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳ ಸಭೆ ಏರ್ಪಡಿಸಿರುವುದಾಗಿ ಎಂದು ಸಾರ್ವಜನಿಕ  ಶಿಕ್ಷಣಾಧಿಕಾರಿ ಪಾಂಡುರಂಗ ತಿಳಿಸಿದರು. ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಡೆದ ಜಿಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಕೊರೊನಾದಿಂದಾಗಿ 849 ಮಂದಿ ವಿದ್ಯಾರ್ಥಿಗಳು ಬೇರೆ ಜಿಲ್ಲೆಯ  ವಿವಿಧ ತಾಲೂಕುಗಳಲ್ಲಿಯೇ ಪರೀಕ್ಷೆ ಬರೆಯಲಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಮುನ್ನೆಚರಿಕೆಯಾಗಿ ಮಾಸ್ಕ್, ಸ್ಯಾನಿಟೈಸರ್‌, ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಲಾಗಿದೆ. ಒಂದು ಕೊಠಡಿಯಲ್ಲಿ 18ರಿಂದ 20  ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಅನಾರೋಗ್ಯ ಸಮಸ್ಯೆ ಇದ್ದವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಗುವುದು ಎಂದು ಹೇಳಿದರು. ಜಿಲ್ಲೆಯಲ್ಲಿ ಒಟ್ಟು 39,822 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 139  ಪರೀಕ್ಷಾ ಕೇಂದ್ರಗಳ ಜೊತೆಗೆ ಹೆಚ್ಚುವರಿಯಾಗಿ 12 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಶಾಲೆಗಳು ದುರಸ್ತಿಯಾಗಿಲ್ಲವೇಕೆ?: ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಮಳೆಯಿಂದಾಗಿ ಹಾಳಾದ 418 ಶಾಲೆಗಳಿಗೆ ಸರಕಾರ ದುರಸ್ತಿಗಾಗಿ ತಲಾ 2 ಲಕ್ಷ ರೂ. ಬಿಡುಗಡೆ ಮಾಡಿದೆ. ಅವುಗಳಲ್ಲಿ ಕೇವಲ 125 ಮುಕ್ತಾಯಗೊಂಡಿವೆ ಎಂಬ ಅಧಿಕಾರಿಗಳು ಮಾಹಿತಿಗೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಪ್ರಶಾಂತ್‌ಕುಮಾರ್‌ ಮಿಶ್ರಾ, ಅನುದಾನ ಬಿಡುಗಡೆಯಾಗಿದ್ದರೂ ಕೆಲಸ ಪೂರ್ಣಗೊಳಿಸಿಲ್ಲ. ಮತ್ತೆ ಮಳೆ ಆರಂಭವಾಗಿದೆ. ಪರೀಕ್ಷೆಗಳು ಆರಂಭವಾದರೆ ಹೇಗೆ ನಡೆಸುವುದು ಎಂದು ತರಾಟೆಗೆ ತೆಗೆದುಕೊಂಡರು.

ಹೂ ಬೆಳೆಗಾರರಿಗೆ ಪರಿಹಾರ: ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರುದ್ರೇಶ್‌ ಮಾತನಾಡಿ, ಜಿಲ್ಲೆಯಲ್ಲಿ 1650 ಹೂ ಬೆಳೆಗಾರರು ಕೋವಿಡ್‌ ಸಂದರ್ಭದಲ್ಲಿ ನಷ್ಟ ಅನುಭವಿಸಿರುವ ಬಗ್ಗೆ ಪಟ್ಟಿ ತಯಾರಿಸಿದ್ದು, ಇದಕ್ಕಾಗಿ 64 ಲಕ್ಷ  ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ 20 ಲಕ್ಷವನ್ನು ಮೊದಲ ಹಂತದಲ್ಲಿ ಪರಿಹಾರ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಪ್ರಗತಿ ಮಾಹಿತಿ ನೀಡಿದರು. ಜಿಪಂ ಅಧ್ಯಕ್ಷೆ ಪರಿಮಳ,  ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್‌, ಮುಖ್ಯ ಯೋಜನಾಧಿ ಕಾರಿ ಪದ್ಮಕುಮಾರ್‌ ಪಾಂಡೆ ಇತರರಿದ್ದರು.

ಟಾಪ್ ನ್ಯೂಸ್

Surathkal: ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ: ಮೂವರು ಆರೋಪಿಗಳು ಪರಾರಿ

Surathkal: ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ: ಮೂವರು ಆರೋಪಿಗಳು ಪರಾರಿ

Kharajola

MUDA Scam; ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಸಂಸದ ಕಾರಜೋಳ

Dravid–gavskar

Indian Cricket; ರಾಹುಲ್‌ ದ್ರಾವಿಡ್‌ಗೆ ಭಾರತ ರತ್ನ ಕೊಡಿ: ಗವಾಸ್ಕರ್‌

rain 21

Heavy Rain; ಉತ್ತರ ಕನ್ನಡ ಜಿಲ್ಲೆಯ 5 ತಾಲೂಕುಗಳಲ್ಲಿ ಜುಲೈ 8 ರಂದು ಪಿಯುಸಿವರೆಗೆ ರಜೆ

Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ

Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ

1-wqwewewq

T20 ಸರಣಿ ಸಮಬಲ: ಜಿಂಬಾಬ್ವೆ ವಿರುದ್ಧ 100 ರನ್ ಗಳ ಅಮೋಘ ಜಯ ಸಾಧಿಸಿದ ಭಾರತ

renukaacharya

Lok Sabha Elections; ಪಕ್ಷ ವಿರೋಧಿ ಚಟುವಟಿಕೆ ನಡೆಸಿಯೇ ಇಲ್ಲ: ರೇಣುಕಾಚಾರ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

23

“140ಕ್ಕೂ ಹೆಚ್ಚು ಮುಡಾ ಕಡತ ಕದ್ದೊಯ್ದ ಅಧಿಕಾರಿಗಳು’ʼ: ಶಾಸಕ ಟಿ.ಎಸ್‌. ಶ್ರೀವತ್ಸ

Hunasuru

Dengue: ಹುಣಸೂರು ಆಸ್ಪತ್ರೆಯಲ್ಲಿ 10 ಹಾಸಿಗೆಯ ಪ್ರತ್ಯೇಕ ವಾರ್ಡ್ ಮೀಸಲು

MUDA; ಯಾಕೆ ಬೀದಿಯಲ್ಲಿ ಮಾನ ಮರ್ಯಾದೆ ಕಳೆದುಕೊಳ್ತೀರಿ..: ಸಿದ್ದುಗೆ ವಿಶ್ವನಾಥ್ ಕಿವಿಮಾತು

MUDA; ಯಾಕೆ ಬೀದಿಯಲ್ಲಿ ಮಾನ ಮರ್ಯಾದೆ ಕಳೆದುಕೊಳ್ತೀರಿ..: ಸಿದ್ದುಗೆ ವಿಶ್ವನಾಥ್ ಕಿವಿಮಾತು

Mysore; ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲು: ಎಚ್ ಡಿಕೆ ಸ್ಫೋಟಕ ಹೇಳಿಕೆ

Mysore; ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲು: ಎಚ್ ಡಿಕೆ ಸ್ಫೋಟಕ ಹೇಳಿಕೆ

Dengue-nagendra

Hunasuru: ಡೆಂಗ್ಯೂಗೆ ಆರೋಗ್ಯಾಧಿಕಾರಿಯೇ ಮೃತ್ಯು!

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Surathkal: ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ: ಮೂವರು ಆರೋಪಿಗಳು ಪರಾರಿ

Surathkal: ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ: ಮೂವರು ಆರೋಪಿಗಳು ಪರಾರಿ

Kharajola

MUDA Scam; ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಸಂಸದ ಕಾರಜೋಳ

Dravid–gavskar

Indian Cricket; ರಾಹುಲ್‌ ದ್ರಾವಿಡ್‌ಗೆ ಭಾರತ ರತ್ನ ಕೊಡಿ: ಗವಾಸ್ಕರ್‌

rain 21

Heavy Rain; ಉತ್ತರ ಕನ್ನಡ ಜಿಲ್ಲೆಯ 5 ತಾಲೂಕುಗಳಲ್ಲಿ ಜುಲೈ 8 ರಂದು ಪಿಯುಸಿವರೆಗೆ ರಜೆ

Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ

Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.