ಕೋವಿಡ್ 19: ಮೈಸೂರಿಗೆ ಬಿಗ್ ರಿಲೀಫ್
Team Udayavani, May 16, 2020, 5:40 AM IST
ಮೈಸೂರು: ಕಳೆದ 55 ದಿನಗಳಿಂದ ಕೋವಿಡ್ 19 ವೈರಾಣುವಿಗೆ ತತ್ತರಿಸಿದ ಸಾಂಸ್ಕೃತಿಕ ನಗರಿ ಮೈಸೂರು ಶುಕ್ರವಾರ ಸೋಂಕಿನಿಂದ ಮುಕ್ತವಾಗಿದೆ. 90 ಸೋಂಕಿತರೂ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ರಾಜ್ಯದಲ್ಲಿ ಬೆಂಗಳೂರಿನ ಬಳಿಕ ಸೋಂಕು ಹೆಚ್ಚಾಗಿ ಹರಡಿದ್ದು ಮೈಸೂರಿನಲ್ಲಿ. ಹೆಚ್ಚು ಸೋಂಕಿತರ ನ್ನು ಹೊಂದಿದ ಜಿಲ್ಲೆಗಳಲ್ಲಿ ಮೈಸೂರು 2ನೇ ಸ್ಥಾನ ಪಡೆದಿತ್ತು. 90 ಮಂದಿ ಸೋಂಕಿಗೆ ತುತ್ತಾಗಿ, ಸಾವಿರಾರು ಮಂದಿ ಕ್ವಾರಂಟೈನ್‌ನಲ್ಲಿದ್ದರು. ಇದರಿಂದಾಗಿ ಮೈಸೂರು ಕೋವಿಡ್ 19 ಹಾಟ್‌ಸ್ಪಾಟ್ ಆಗಿ ರೆಡ್ ಜೋನ್ ಪಟ್ಟಿಗೆ ಸೇರ್ಪಡೆಯಾಯಿತು.
ಮೈಸೂರು ನಗರ, ನಂಜನ ಗೂಡು ಸೇರಿದಂತೆ ತಾಲೂಕಿನ ಹಲವು ಗ್ರಾಮಗಳು ಸೀಲ್‌ಡೌನ್ ಆದವು. ಸುಮಾರು 2 ತಿಂಗಳ ಸತತ ಹೋರಾಟದ ಬಳಿಕ ಮೈಸೂರು ಸೋಂಕಿ ನಿಂದ ಮುಕ್ತ ವಾ ಗಿ ದೆ. ಸೋಂಕು ತಗುಲಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊನೆಯ ಇಬ್ಬರು ಶುಕ್ರವಾರ ಬಿಡುಗಡೆ ಆಗಿದ್ದಾರೆ. ಸೋಂಕಿತರೆಲ್ಲರೂ ಗುಣಮುಖರಾಗಿದ್ದು, ಜಿಲ್ಲೆ ಸೋಂಕು ಮುಕ್ತವಾಗಿದೆ.
90 ಮಂದಿಯೂ ಗುಣಮುಖ: ಜಿಲ್ಲೆಯಲ್ಲಿ ಮಾ. 21ರಂದು ಮೊದಲ ಪ್ರಕರಣ ದಾಖಲಾಗಿತ್ತು. ದುಬೈನಿಂದ ವಾಪಸ್ಸಾಗಿದ್ದ ಮೈಸೂರಿನ ವಿವೇಕಾನಂದ ನಗರದ ನಿವಾಸಿಗೆ ಸೋಂಕು ದೃಢಪಟ್ಟಿತ್ತು. ಬಳಿಕ ಕೇರಳ ಮೂಲದ ವ್ಯಕ್ತಿಗೆ ಮೈಸೂರಿನಲ್ಲಿ ಕೋವಿಡ್‌ಟೆಸ್ಟ್ ಮಾಡಿದಾಗ 2ನೇ ಪ್ರಕರಣ ದಾಖಲಾಗಿತ್ತು.
ಮೂರನೇ ಪ್ರಕರಣ ಇಡೀ ಮೈಸೂರನ್ನೇ ನಂಜಾಗಿ ಸಿತು. ಜ್ಯುಬಿ ಲಿಂಟ್ ಕಾರ್ಖಾನೆಯ ನೌಕರನಿಗೆ (ಪಿ- 52) ಸೋಂಕು ಕಾಣಿಸಿಕೊಂಡು ಕಾರ್ಖಾನೆಯ 74 ಮಂದಿಗೆ ಸೋಂಕು ಹರಡಿತ್ತು. ತಬ್ಲೀ ಯ 10 ಮಂದಿ, ವಿದೇಶ ಪ್ರವಾಸ ಸಂಬಂಧಿತ 3 ಹಾಗೂ ಎರಡು ಸರಿ ಪ್ರಕರಣ ಸೇರಿ ಒಟ್ಟು 90 ಮಂದಿ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದರು. ಇವರಲ್ಲಿ 88 ಮಂದಿ ಈಗಾ ಗಲೇ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದರು.
ಇದೀಗ ಶುಕ್ರವಾರ ಇಬ್ಬರು ಗುಣಮುಖವಾಗಿ ಆಸ್ಪತ್ರೆಯಿಂದ ಡಿಸಾcರ್ಜ್ ಆಗಿದ್ದು 90 ಮಂದಿಯೂ ಗುಣಮುಖ ರಾದಂತಾ ಗಿದೆ. ನಂಜನಗೂಡಿನ ಔಷಧ ತಯಾರಿಕಾ ಜ್ಯುಬಿಲಿಯಂಟ್ ಕಾರ್ಖಾನೆಯಲ್ಲೇ 74 ಮಂದಿ ಸೋಂಕಿತ ರಾಗಿದ್ದರು. ಇದೀಗ ನಂಜನಗೂಡೂ ಮುಕ್ತವಾಗಿದೆ. ಎಲ್ಲರೂ ಗುಣಮುಖರಾಗಿದ್ದಾರೆ. ಬಹುತೇಕ ಮೈಸೂರು, ನಂಜನಗೂಡಿನಲ್ಲಿ ಸೀಲ್‌ಡೌನ್ ತೆಗೆಯ ಲಾಗಿದೆ. ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.
ಜಿಲ್ಲಾಡಳಿತದ ಅವಿರತ ಶ್ರಮ: ಮಾ.21ರಂದು ಮೊದಲ ಸೋಂಕು ಕಾಣಿಸಿಕೊಂಡ ಬಳಿಕ ಸಮರೋ ಪಾದಿಯಲ್ಲಿ ಕೋವಿಡ್ 19 ವಿರುದಟಛಿ ಹೋರಾಡಿದ ಜಿಲ್ಲಾ ಡಳಿತ, ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಕೋವಿಡ್ 19 ವಾರಿಯರ್ಸ್‌ಗಳ ಅವಿರತ ಶ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಅಧಿಕಾರಿ ಗಳನ್ನು ಶ್ಲಾಘಿಸಿದ್ದಾರೆ.
ಮೈಸೂರು ಜಿಲ್ಲೆ ಕೋವಿಡ್ 19ದಿಂದ ಮುಕ್ತವಾಗಿದೆ. ಅದಕ್ಕೆ ಮುಖ್ಯಮಂತ್ರಿಗಳ ಮಾರ್ಗದರ್ಶನ, ಸಮಸ್ತ ಆಡಳಿತ ವರ್ಗ, ವೈದ್ಯಕೀಯ, ಮಾಧ್ಯಮ ಹಾಗೂ ಸಹಕಾರ ನೀಡಿದ ಸಾರ್ವಜನಿಕರು, ನಾಡಿನ ಜನತೆಗೆ ಅಭಿನಂದನೆಗಳು. ರಾಜ್ಯದಲ್ಲೇ ಅತಿಹೆಚ್ಚು ಪಾಸಿಟಿವ್ ಪ್ರಕರಣವುಳ್ಳ ಜಿಲ್ಲೆ ಎಂಬ ಹಣೆಪಟ್ಟಿಯಿಂದ ಹೊರಬಂದು ಶೂನ್ಯಕ್ಕೆ ಇಳಿಕೆಯಾಗುವುದು ಕಡಿಮೆ ಸಾಧನೆಯಲ್ಲ. ಹಾಗಾಗಿ ನಾನು ಚಪ್ಪಾಳೆ ಮೂಲಕ ಹೃದಯತುಂಬಿ ಅಭಿನಂದನೆ ಸಲ್ಲಿಸುತ್ತೇನೆ.
-ಸೋಮಶೇಖರ್, ಜಿಲ್ಲಾ ಉಸ್ತುವಾರಿ ಸಚಿವ
ಮೈಸೂರು ಜಿಲ್ಲೆ ಕೋವಿಡ್ 19 ಸೋಂಕಿನಿಂದ ಮುಕ್ತವಾಗಿದೆ. ಸೋಂಕಿತರೆಲ್ಲರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದಾರೆ. ಸಾರ್ವಜನಿಕರು ಸಂಭ್ರಮದೊಂ ದಿಗೆ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಸಂತಸದಲ್ಲಿ ಮೈಮರೆಯಬಾರದು. ಮುಂಜಾ ಗ್ರತೆಗಳನ್ನು ಅನುಸರಿಸಬೇಕು. ಕೋವಿಡ್ ಹೋರಾಟದಲ್ಲಿ ಅವಿರತವಾಗಿ ಶ್ರಮಿಸಿದ ಜಿಲ್ಲೆಯ ಎಲ್ಲಾ ಅಧಿಕಾರಿಗಳು, ಜಿಲ್ಲಾಡಳಿತಕ್ಕೆ ಸಹಕಾರ ನೀಡಿದ ಸಾರ್ವಜನಿಕರಿಗೆ ಧನ್ಯವಾದ.
-ಅಭಿರಾಂ ಜಿ.ಶಂಕರ್, ಜಿಲ್ಲಾಧಿಕಾರಿ
* ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.