ಮೊಬೈಲ್ ಕ್ಲಿನಿಕ್ ಸೇವೆಗೆ ಚಾಲನೆ
ನಗರ ಪಾಲಿಕೆಯಿಂದ ವಿನೂತನ ಸೇವೆ ಪ್ರಾರಂಭ; ಮೈಸೂರಿನಲ್ಲಿ ಕೋವಿಡ್ ನಿಯಂತ್ರಣ
Team Udayavani, Apr 30, 2020, 3:24 PM IST
ಮೈಸೂರು: ಮೈಸೂರು ಪಾಲಿಕೆಯಿಂದ ಆಯ್ದ ಪ್ರದೇಶಗಳ ಮನೆ ಬಾಗಿಲಿಗೆ ವೈದ್ಯರು ಹೋಗಿ ವೈದ್ಯಕೀಯ ತಪಾಸಣೆ ನಡೆಸುವ ವಿನೂತನ ಕಾರ್ಯಕ್ರಮವಾದ ಕೋವಿಡ್-19
ಮೊಬೈಲ್ ಕ್ಲಿನಿಕ್ ಸೇವೆಗೆ ಬುಧವಾರ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಸಚಿವರು, ಈಗಾಗಲೇ ನಂಜನಗೂಡಿನಲ್ಲಿ ಈ ಮೊಬೈಲ್ ಕ್ಲಿನಿಕ್ ಸೇವೆ ಪ್ರಾರಂಭಿಸಲಾಗಿದೆ. ವೈದ್ಯರು ಕೋವಿಡ್ ಹಾಟ್ ಸ್ಪಾಟ್‌ಗಳಿಗೆ ತೆರಳಿ ಪ್ರತಿಯೊಬ್ಬರನ್ನು ವೈದ್ಯಕೀಯ ತಪಾಸಣೆ ನಡೆಸುತ್ತಿದ್ದಾರೆ. ಅದರಂತೆ ಮೈಸೂರಿನಲ್ಲೂ ಸುಮಾರು 10 ಮೊಬೈಲ್ ಕ್ಲಿನಿಕ್ ಸೇವೆಗೆ ಚಾಲನೆ ನೀಡಿದ್ದು, ಇದು ಪಾಲಿಕೆ ಅಧಿಕಾರಿಗಳು ತಿಳಿ ಸುವ ಪ್ರದೇಶಗಳಿಗೆ ತೆರಳಿ ಅಲ್ಲಿನ ಜನರಿಗೆ ತಪಾಸಣೆ ಮಾಡಲಿದೆ, ಇದರಿಂದ ಜನರಿಗೆ ಉಪಯೋಗವಾಗಲಿದೆ ಎಂದು ಹೇಳಿದರು.
ಕೋವಿಡ್ ಈಗಾಗಲೇ ಮೈಸೂರಿನಲ್ಲಿ ನಿಯಂತ್ರಣಕ್ಕೆ ಬಂದಿದೆ. ಪಾಸಿಟಿವ್ ಇರುವವರು ಗುಣಮುಖರಾಗುತ್ತಿರುವುದು ಮೈಸೂರು ಜನತೆಗೆ ನೆಮ್ಮದಿ ತಂದಿದೆ. ಇದೇ ಪರಿಸ್ಥಿತಿ ಮುಂದುವರಿಯಲು ಈ ಮೊಬೈಲ್ ಕ್ಲಿನಿಕ್ ಸೇವೆ ಇನ್ನೂ ಅನುಕೂಲವಾಗಲಿದೆ. ಜನರ ಬಳಿಯೇ ವೈದ್ಯರು ಹೋಗುವುದರಿಂದ ಅಲ್ಲಿನ ಜನತೆ ತಪಾಸಣೆ ಮಾಡಿಸಿಕೊಂಡು, ಅವರಿಗೆ ಬೇಕಾದ ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಏನಿದೆ ಮೊಬೈಲ್ ಕ್ಲಿನಿಕ್‌ನಲ್ಲಿ: ಮೊಬೈಲ್ ಕ್ಲಿನಿಕ್‌ಗಳಲ್ಲಿ ವೈದ್ಯರು, ಸ್ಟಾಫ್ ನರ್ಸ್, ಡ್ರೈವರ್, ಅಟೆಂಡರ್ ಮಾತ್ರ ಇರುತ್ತಾರೆ. ಪಾಲಿಕೆ ಅಧಿಕಾರಿಗಳು ಸೂಚಿಸಿದ ಪ್ರದೇಶಗಳಿಗೆ ನಿತ್ಯ ತೆರಳಿ, ಆ ಪ್ರದೇಶದ ಸಮುದಾಯ ಭವನ, ಶಾಲೆ, ಅಂಗನವಾಡಿ ಹೀಗೆ ಇನ್ನಿತರ ಯಾವುದೇ ಸಾರ್ವಜನಿಕ ಕಟ್ಟಡದಲ್ಲಿ ಆರೋಗ್ಯ ತಪಾಸಣೆ ಹಮ್ಮಿಕೊಂಡು, ಅಲ್ಲಿನ ಜನತೆಗೆ ಜ್ವರ, ಬಿಪಿ, ಶುಗರ್, ಸ್ಕ್ರೀನಿಂಗ್ ಸೇರಿದಂತೆ ಮೊದಲಾದ ತಪಾಸಣೆ ನಡೆಸಿ, ಅಗತ್ಯ ಔಷಧಗಳನ್ನು ಉಚಿತವಾಗಿ ನೀಡಲಾಗುತ್ತದೆ. ನೂತನ ಆರೋಗ್ಯ ಕಾರ್ಯಕ್ರಮಕ್ಕಾಗಿ ವಿದ್ಯಾವಿಕಾಸ್ ಶಿಕ್ಷಣ ಸಂಸ್ಥೆ, ಜೈನ್ ಸಮಾಜ, ಗೋಪಾಲಗೌಡ ಶಾಂತವೇರಿ ಆಸ್ಪತ್ರೆಯ ವಾಹನಗಳು, ನಾರಾಯಣ ಹೃದಯಾಲಯ ಆಸ್ಪತ್ರೆಯ ಶುಷೂಕಿಯರು, ಜಿಲ್ಲಾ ಆರೋಗ್ಯ ಇಲಾಖೆಯ ವೈದ್ಯರು, ಅರೆ ವೈದ್ಯರು ಮತ್ತು ವೈಶಾಲಿ ಹೆರಿಗೆ ಆಸ್ಪತ್ರೆಯ ಡಾಕ್ಟರ್‌ಗಳು ಈ ಸೇವೆಯಲ್ಲಿ ತೊಡಗಿದ್ದಾರೆ.
ಬುಧವಾರ ಮಂಡಕಳ್ಳಿ, ರಮಾಬಾಯಿ ನಗರ, ಗುಂಡುರಾವ್ ನಗರ, ಗೋಕುಲಂ 2ನೇ ಹಂತ, ಗಿರಿಬೋವಿಪಾಳ್ಯ, ಬಸವನಗುಡಿ, ಹೈವೇ ಸರ್ಕಲ್ ಸ್ಥಳ ಗಳಿಗೆ ತೆರಳಿ ಆರೋಗ್ಯ
ತಪಾಸಣೆ ನಡೆಸಲಾಯಿತು. ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಪಾಲಿಕೆ ಆರೋಗ್ಯಾ ಧಿಕಾರಿ ಡಾ.ನಾಗರಾಜು ಮಾತನಾಡಿದರು. ಮೇಯರ್ ತಸ್ನೀಂ, ಶಾಸಕರಾದ ಎಸ್. ಎ. ರಾಮದಾಸ್, ಎಲ್. ನಾಗೇಂದ್ರ, ಡೀಸಿ ಅಭಿ ರಾಮ್ ಜಿ.ಶಂಕರ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.