![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Apr 20, 2020, 6:17 PM IST
ಸಾಂದರ್ಭಿಕ ಚಿತ್ರ
ಹುಣಸೂರು: ಆನೆಗಳ ಶಿಬಿರಗಳು, ಮಾವುತರು-ಕವಾಡಿಗಳು ಇರುವ ನಾಗರಹೊಳೆ ಉದ್ಯಾನವನದಲ್ಲಿ ಕೋವಿಡ್ ತಪ್ಪಿಸಲು ದಾನಿಗಳ ಸಹಕಾರದಲ್ಲಿ ಪ್ರಾಯೋಗಿಕವಾಗಿ ಸಿಟ್ರೋ ಬಯೋಶೀಲ್ಡ್ ಆರ್ಗಾನಿಕ್ ಔಷಧ ಬಳಕೆ ಮಾಡಲು ಮುಂದಾಗಿದೆ.
ವಿಶ್ವದ ಕೆಲ ವನ್ಯಧಾಮಗಳಲ್ಲಿ ಕೋವಿಡ್ ಅಟ್ಟಹಾಸ ಮೆರೆಯುತ್ತಿದ್ದು, ಮನುಷ್ಯರಿಂದ ಪ್ರಾಣಿಗಳಿಗೂ ಹರಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಿಟ್ರೋ ಬಯೋಶೀಲ್ಡ್ ಎಂಬ ಪರಿಸರ ಸ್ನೇಹಿ ಕ್ರಿಮಿ ನಾಶಕವನ್ನು ನಾಗರಹೊಳೆ ಉದ್ಯಾನದಲ್ಲಿ ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಕೋವಿಡ್ ತಪ್ಪಿಸಲು ಸೋಡಿಯಂ ಹೈಪೋ ಕ್ಲೋರೈಡ್ ಎಂಬ ರಾಸಾಯನಿಕ ಕ್ರಿಮಿನಾಶಕದಿಂದ ಪರಿಸರ, ಜೀವಿಗಳಿಗೆ ಅಡ್ಡ ಪರಿಣಾಮವಿದೆ. ರಾಸಾಯನಿಕ ಕ್ರಿಮಿನಾಶಕವನ್ನು ಆನೆಗಳ ಶಿಬಿರದಲ್ಲಿ ಬಳಸುವುದರಿಂದ ತೊಂದರೆ ಕಾಣಿಸಿಕೊಳ್ಳುವ ಹಿನ್ನೆಲೆಯಲ್ಲಿ ನಾಗರಹೊಳೆ ಉದ್ಯಾನದಲ್ಲಿ ಪರಿಸರ ಸ್ನೇಹಿ ಆರ್ಗಾನಿಕ್ ಔಷಧ ಬಳಕೆಗೆ ದಾನಿಗಳ ನೆರವಿನಿಂದಿಗೆ ಮುಖ್ಯಸ್ಥರು ಮುಂದಾಗಿದ್ದಾರೆ.
ತ.ನಾಡಿನ ಕಂಪನಿ ಸಹಕಾರ: ತ.ನಾಡಿನ ಚೆನ್ನೈ ಮೂಲದ ಸುಗ್ರೋಧನ್ ಎಂಬ ಬಯೋ ಕಂಪನಿ ಪರಿಚಯಿಸಿರುವ ಸಿಟ್ರೋ ಬಯೋಶೀಲ್ಡ್ ಆರ್ಗಾನಿಕ್ ಕ್ರಿಮಿನಾಶಕವನ್ನು ಸಿಎಸ್‌ಆರ್ ಫಂಡ್ ಮೂಲಕ ಉಚಿತವಾಗಿ ನಾಗರಹೊಳೆ ಆನೆ ಶಿಬಿರದಲ್ಲಿ ಬಳಸಲಾಗುತ್ತಿದೆ. ದಿನಕ್ಕೆ 2 ಬಾರಿ ಸಿಂಪಡಿಸಲಾಗುತ್ತಿದೆ.
ಆರ್ಗಾನಿಕ್ ಕ್ರಿಮಿನಾಶಕ ಬಳಕೆಯಿಂದ ತೊಂದರೆ ಇಲ್ಲ. ಮಾವುತರು- ಕವಾಡಿಗಳಿ ಗೂ ಉಚಿತವಾಗಿ ಕಿಟ್ ವಿತರಿಸಲಾಗಿದೆ. ಈ ಕ್ರಿಮಿನಾಶಕವನ್ನು ಎಲ್ಲೆಡೆ ಬಳಸಬಹುದು.
● ಡಾ.ಕಾರ್ತಿಕ್ ನಾರಾಯಣ್, ಬಯೋ ಕಂಪನಿಯ ಮುಖ್ಯಸ್ಥ
ನಾಗರಹೊಳೆಯಲ್ಲಿ ಪರಿಸರ ಸ್ನೇಹಿ ಕ್ರಿಮಿನಾಶಕ ಬಳಸಲು ಮುಂದಾಗಿದ್ದು, ಉದ್ಯಾನದ ಆನೆ ಶಿಬಿರ ಸೇರಿದಂತೆ ಎಲ್ಲೆಡೆ ಕ್ರಿಮಿನಾಶಕ ಬಳಸಲಾಗುವುದು. ಬಳಕೆ ಬಗ್ಗೆ ತರಬೇತಿ
ನೀಡಲಾಗಿದೆ.
● ಮಹೇಶ್‌ಕುಮಾರ್, ಮುಖ್ಯಸ್ಥ, ನಾಗರಹೊಳೆ ಉದ್ಯಾನವನ
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.