ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಳ್ಳಿ
Team Udayavani, Jun 22, 2020, 5:52 AM IST
ಹುಣಸೂರು: ಪ್ರತಿಯೊಬ್ಬರೂ ಗಿಡ, ಮರ ಬೆಳೆಸಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಳ್ಳಬೇಕು ಎಂದು ಶಾಸಕ ಮಂಜುನಾಥ್ ಸೂಚಿಸಿದರು. ನಗರದ ರಾಷ್ಟ್ರೀಯ ಹೆದ್ದಾರಿ ಬದಿಯ ಕಲೆºಟ್ಟದ ಸಾಲುಮರದ ತಿಮ್ಮಕ್ಕ ವೃಕ್ಷೊàದ್ಯಾನದಲ್ಲಿ ಸಸಿ ನೆಟ್ಟು ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಸರ ಸಂರಕ್ಷಿಸುವ ದೃಷ್ಟಿಯಿಂದ ಹಣ್ಣು ಇತರೆ ಜಾತಿಯ ಸಸಿ ಬೆಳೆಸಬೇಕು. ಇಲ್ಲಿಗೆ ಎಲ್ಲ ಪಕ್ಷಿಗಳು ಬರುವಂತೆ ಪರಿಸರ ಪೂರಕ ವಾತಾವರಣ ನಿರ್ಮಿಸಬೇಕು. ಶಾಲಾ ಮಕ್ಕಳನ್ನು ಇಲ್ಲಿಗೆ ಕರೆತಂದು ಎಲ್ಲ ಜಾತಿಯ ಮರಗಳನ್ನು ಹಾಗೂ ಪ್ರಾಣಿ, ಪಕ್ಷಿಗಳ ಬಗ್ಗೆ ಪರಿಚಯಿಸಿ ಪರಿಸರ ಪಾಠ ಮಾಡುವ ಅಗತ್ಯವಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಚಿಂತಿಸಬೇಕೆಂದರು.
ಬಿದಿರು ವನ: ಗುರುಪುರ ಬಳಿ ಇರುವ ಅರಣ್ಯ ಇಲಾಖೆಯ 80 ಎಕರೆ ಪ್ರದೇಶವನ್ನು ಈ ಹಿಂದೆ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರಕ್ಕೆ ಹೊಗೆ ಸೊಪ್ಪು ಸಂಶೋಧನೆಗಾಗಿ ಗುತ್ತಿಗೆಗೆ ನೀಡಿದ್ದು, ಈಗ ಈ ಪ್ರದೇಶವನ್ನು ಅರಣ್ಯ ಇಲಾಖೆಗೆ ವಾಪಸ್ ಪಡೆದು ಅಲ್ಲಿ ಬಿದಿರು ವನ ನಿರ್ಮಿಸಿ ತಾಲೂಕಿನ ಮೇದ ಜನಾಂಗಕ್ಕೆ ಅನುಕೂಲ ಕಲ್ಪಿಸುವಂತೆ ಸೂಚಿಸಿದರು.
ಪ್ರೋತ್ಸಾಹ ಧನ ಹೆಚ್ಚಳ: ಡಿಸಿಎಫ್ ಪೂವಯ್ಯ ಕೃಷಿ ಪ್ರೋತ್ಸಾಹ ಯೋಜನೆಯಡಿ 100 ರೂ.ಗಳಿದ್ದ ಪ್ರೋತ್ಸಾಹ ಧನವನ್ನು ಸರ್ಕಾರ 125 ರೂ.ಗಳಿಗೆ ಹೆಚ್ಚಿಸಿದ್ದು, ಹೆಸರು ನೋಂದಾಯಿಸಿಕೊಂಡು ಸಸಿ ನೆಡುವ ರೈತರಿಗೆ ಮೊದಲನೇ ವರ್ಷ 35 ರೂ., ಎರಡನೇ ವರ್ಷ 40 ರೂ., ಮೂರನೇ ವರ್ಷ 50 ರೂ.ಗಳಂತೆ ಬದುಕುಳಿಯುವ ಸಸಿಗಳಿಗೆ ಸಹಾಯ ಧನ ಸಿಗಲಿದೆ ಎಂದು ಆರ್‌ಎಫ್‌ಒ ಸಂದೀಪ್ ಹೇಳಿದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಸವರಾಜು, ಡಿವೈಎಸ್ಪಿ ಸುಂದರ್‌ರಾಜ್, ಎಸಿಎಫ್ ಸೋಮಯ್ಯ, ಆರ್‌ಎಫ್ ಒಗಳಾದ ಅನನ್ಯಕುಮಾರ್, ಸಂದೀಪ್, ಜಗದೀಶ್ ಮೊದಲಾದವರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.