ದೇವರಾಜ ಅರಸು ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅತ್ಯಗತ್ಯ: ಎಚ್.ವಿಶ್ವನಾಥ್
ಅಭಿವೃದ್ದಿಗಾಗಿ ಅಧಿಕಾರ ವಿಕೇಂದ್ರೀಕರಣವಾಗಬೇಕು: ಮಾಜಿ ಶಾಸಕ ಮಂಜುನಾಥ್
Team Udayavani, Jan 24, 2024, 2:14 PM IST
ಹುಣಸೂರು: ಹುಣಸೂರನ್ನು ದೇವರಾಜ ಅರಸು ಜಿಲ್ಲಾ ಕೇಂದ್ರವಾಗಿಸುವ ನಿಟ್ಟಿನಲ್ಲಿ ಅಕ್ಕಪಕ್ಕದ ಶಾಸಕರು ಸೇರಿದಂತೆ ಎಲ್ಲರ ಸಹಕಾರ ಪಡೆದು ಸರಕಾರದ ಮುಂದೆ ಪ್ರಸ್ತಾಪವಿಡುವ ಕುರಿತು ಸಭೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳು ಹಾಗೂ ವಿವಿಧ ಪಕ್ಷಗಳ ಮುಖಂಡರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಒಕ್ಕೋರಲ ನಿರ್ಣಯ ಕೈಗೊಂಡರು.
ನವ ನಿರ್ಮಾಣ ವೇದಿಕೆಯು ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಹುಣಸೂರನ್ನು ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಪೂರ್ವಬಾವಿ ಸಭೆಯಲ್ಲಿ ಎಂ.ಎಲ್.ಸಿ. ಅಡಗೂರು ಎಚ್.ವಿಶ್ವನಾಥ್ ಮಾತನಾಡಿ, ಉಪವಿಭಾಗ ಕೇಂದ್ರವಾದ ಹುಣಸೂರು ಜಿಲ್ಲೆಯಾಗುವ ಎಲ್ಲಾ ಅರ್ಹತೆ ಹೊಂದಿದ್ದು, ಅಕ್ಕ ಪಕ್ಕದ ತಾಲೂಕಿನ ಶಾಸಕರು, ಮಾಜಿ ಶಾಸಕರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಮುಖಂಡರು, ಸಂಘ-ಸಂಸ್ಥೆಗಳವರನ್ನು ವಿಶ್ವಾಸಕ್ಕೆ ಪಡೆಯೋಣ. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟದ ಸಚಿವರನ್ನು ವಿಶ್ವಾಸಕ್ಕೆ ಪಡೆದು ಮುನ್ನಡೆಯೋಣ, ಮುಂದಿನ ದಿನಗಳಲ್ಲಿ. ಗ್ರಾ.ಪಂ.ಮಟ್ಟದಲ್ಲೂ ಸಭೆಗಳನ್ನು ನಡೆಸಿ ಅಭಿಪ್ರಾಯ ಸಂಗ್ರಹಿಸಿ ಬೆಂಬಲ ಕೇಳೋಣವೆಂದರು.
ವಿಕೇಂದ್ರಿಕರಣ ಅತ್ಯಗತ್ಯ:
ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಜನಸಂಖ್ಯೆ ಹೆಚ್ಚಿದಂತೆ ಅಭಿವೃದ್ದಿ ಹಾಗೂ ಆಡಳಿತದ ಹಿತದೃಷ್ಟಿಯಿಂದ ಜಿಲ್ಲೆಗಳ ವಿಕೇಂದ್ರಿಕರಣವಾಗಲೇಬೇಕು. ತಮ್ಮ ಅವಧಿಯಲ್ಲಿ ತಾಲೂಕಿನ 30 ಗ್ರಾ.ಪಂ.ಗಳನ್ನು 40 ಪಂಚಾಯ್ತಿಗಳಿಗೆ ಹೆಚ್ಚಿಸಿದ ಪರಿಣಾಮ ಆಡಳಿತಕ್ಕೆ ಅನೂಕೂಲವಾಗಿದೆ. ಹೆಚ್ಚು ಅನುದಾನ ಬರುತ್ತಿದೆ. ಈ ನಿಟ್ಟಿನಲ್ಲಿ ಹುಣಸೂರು ಜಿಲ್ಲೆಯಾಗುವ ಎಲ್ಲ ಅರ್ಹತೆ ಇದೆ ಎಂದರು.
ಸಮಿತಿ ರಚನೆಗೆ ಸಲಹೆ:
ಪ್ರಥಮವಾಗಿ ಜಿಲ್ಲೆಗೆ ಸೇರಿಸಬೇಕೆನ್ನುವ ಅಕ್ಕಪಕ್ಕದ ತಾಲೂಕಿನ ಶಾಸಕರ ವಿಶ್ವಾಸದೊಂದಿಗೆ ರೂಪುರೇಷೆ ತಯಾರಾಗಲಿ. ಇದು ಜಿಲ್ಲೆಯಾದಲ್ಲಿ ಆಡಳಿತಕ್ಕೆ ವೇಗ ಸಿಗಲಿದೆ. ಜನರಿಗೆ ಶೀಘ್ರ ನ್ಯಾಯ ದೊರೆಯಲಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾ ಮಂತ್ರಿಯವರೊಂದಿಗೆ ಚರ್ಚಿಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯರಿಗೂ ಮನವಿ ಮಾಡೋಣ, ಕಾರ್ಯ ನಿರ್ವಹಣೆಗಾಗಿ ಮೊದಲು ಸಮಿತಿ ರಚಿಸಿಕೊಳ್ಳೋಣವೆಂದು ಸಲಹೆ ನೀಡಿದರು.
ದೇವರಾಜ ಅರಸು ಜಿಲ್ಲೆಯಾಗಲಿ:
ದೇಶದಲ್ಲೇ ಅತ್ಯುತ್ತಮ ಆಡಳಿತ ನಡೆಸಿ, ಶೋಷಿತರು, ದಲಿತರು, ಬಡವರ ಧ್ವನಿಯಾಗಿ, ಅಕ್ಷರ, ಅನ್ನ, ಭೂಮಿ ಕೊಟ್ಟ ದೇವರಾಜ ಅರಸರು ಪ್ರತಿನಿಧಿಸಿದ್ದ ಹುಣಸೂರನ್ನು ದೇವರಾಜ ಅರಸು ಜಿಲ್ಲೆ ಎಂದು ನಾಮಕರಣ ಮಾಡಬೇಕಿದೆ ಎಂದು ಎಂಎಲ್‌ಸಿ ವಿಶ್ವನಾಥ್‌ರ ಪ್ರಸ್ತಾಪಕ್ಕೆ ಮಾಜಿ ಶಾಸಕ ಮಂಜುನಾಥ್ ಸೇರಿದಂತೆ ಸಭೆ ಹಾಗೂ ಸಂದೇಶ ನೀಡಿದ್ದ ಶಾಸಕ ಹರೀಶ್‌ಗೌಡರು ಬೆಂಬಲ ವ್ಯಕ್ತಪಡಿಸಿದರು.
ಅಭಿವೃದ್ದಿಗಾಗಿ ಜಿಲ್ಲೆಯಾಗಲಿ:
ಹೋರಾಟದ ರುವಾರಿ, ನವನಿರ್ಮಾಣ ವೇದಿಕೆಯ ಹರಿಹರಾನಂದಸ್ವಾಮಿ ಮಾತನಾಡಿ ಪ್ರಜಾಪ್ರಭತ್ವ ದೇಶದ ಸಂವಿದಾನ ರಚನೆ ವೇಳೆಯೇ ಚಿಕ್ಕ ಜಿಲ್ಲೆಗಳಾದಲ್ಲಿ ಅಭಿವೃದ್ದಿಯ ಜೊತೆಗೆ ಜನರಿಗೆ ನ್ಯಾಯ ಒದಗಿಸಲು ಸಾಧ್ಯವೆಂದು ಹೇಳಿದ್ದು, ಸಮಾನತೆ, ಪುರೋಭಿವೃದ್ದಿಗಾಗಿ ರಾಜಕೀಯ ಮೀರಿ, ಪಕ್ಷಬೇಧ ಮರೆತು ಹುಣಸೂ ಜಿಲ್ಲೆಯಾಗಿಸಬೇಕಿದೆ ಎಂದರು. ಸತ್ಯಪೌಂಡೇಶನ್ ಅಧ್ಯಕ್ಷ ಸತ್ಯಪ್ಪ, ಜಿ.ಪಂ.ಮಾಜಿ ಸದಸ್ಯ ನಾಗರಾಜಮಲ್ಲಾಡಿ ಜಿಲೆಯಾದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.
ಶಾಸಕರ ಬೆಂಬಲ ಸಂದೇಶ:
ಕಾರ್ಯ ನಿಮಿತ್ತ ಸಭೆಗೆ ಗೈರಾಗಿದ್ದ ಶಾಸಕ ಜಿ.ಡಿ.ಹರೀಶ್‌ಗೌಡರು ತಮ್ಮ ಸಂದೇಶದಲ್ಲಿ ಹುಣಸೂರು ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ತಮ್ಮ ಸಂಪೂರ್ಣ ಬೆಂಬಲವಿದ್ದು, ಸಭೆಯ ತೀರ್ಮಾನಕ್ಕೆ ಬದ್ದ, ತಾವು ನೇತ್ರತ್ವವಹಿಸಲು ಸಿದ್ದವೆಂದು ತಿಳಿಸಿದ್ದರೆ, ಮತ್ತೋರ್ವ ಎಂ.ಎಲ್.ಸಿ. ಡಾ.ತಿಮ್ಮಯ್ಯನವರು ಸಹ ಜಿಲ್ಲೆಯಾಗಿಸುವ ಎಲ್ಲರ ಪ್ರಯತ್ನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಸಂದೇಶದಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಶಿವಕುಮಾರ್, ಗೀತಾ ನಿಂಗರಾಜು, ಸುನಿತಾ ಜಯರಾಮೇ ಗೌಡ, ಎಚ್.ವೈ.ಮಹದೇವ್, ಹುಡಾ ಮಾಜಿ ಅಧ್ಯಕ್ಷ ಗಣೇಶ ಕುಮಾರ ಸ್ವಾಮಿ, ಜೆಡಿಎಸ್‌ನ ತಾಲೂಕು ಅಧ್ಯಕ್ಷ ದೇವರಾಜಒಡೆಯರ್, ವಕೀಲರ ಸಂಘದ ಅಧ್ಯಕ್ಷ ಶಿವಣ್ಣೇಗೌಡ, ಜಿ.ಪಂ.ಮಾಜಿ ಸದಸ್ಯರಾದ ಫಜಲುಲ್ಲಾ, ಕುನ್ನೇಗೌಡ, ಕಟ್ಟನಾಯ್ಕ, ಕಾಂಗ್ರೆಸ್ ಕಾರ್ಯಾಧ್ಯಕ್ಷ ಪುಟ್ಟರಾಜು, ಅರಸು ವೇದಿಕೆ ಅಧ್ಯಕ್ಷ ಬಿಳಿಕೆರೆರಾಜು, ಮುಖಂಡರಾದ ಹಂದನಹಳ್ಳಿ ಸೋಮಶೇಖರ್, ಒಕ್ಕಲಿಗರ ಸಂಘದ ಅಧ್ಯಕ್ಷ ಗಣೇಶ್‌ಗೌಡ ಸೇರಿದಂತೆ ವಿವಿಧ ಪಕ್ಷಗಳ, ಸಂಘ-ಸಂಸ್ಥೆಗಳ ಮುಖಂಡರು ಸೇರಿದಂತೆ ೫೦೦ಕ್ಕೂ ಹೆಚ್ಚು ಮಂದಿ ಬಾಗವಹಿಸಿದ್ದರು.
ಚುನಾವಣೆ ದೃಷ್ಟಿಯಲ್ಲ:
ಹುಣಸೂರನ್ನು ಜಿಲ್ಲೆಯಾಗಿಸುವ ಈ ಸಭೆ ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ಎಂದು ಹುಯಿಲೆಬ್ಬಿಸುವವರಿದ್ದಾರೆ, ಇದಕ್ಕೆ ಅಪಾರ್ಥ ಬೇಡ. ಇದು ಅರಸರ ಗರಡಿಯಲ್ಲಿ ಬೆಳೆದವರ ಆಶಯವೆಂದು ವಿಶ್ವನಾಥ್ ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.