ಕ್ಷಮೆ ಕೋರಲು ಅರಣ್ಯಾಧಿಕಾರಿಗೆ ಆಗ್ರಹ
Team Udayavani, Jun 5, 2020, 5:38 AM IST
ಪಿರಿಯಾಪಟ್ಟಣ: ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರಿಗೆ ಅಗೌರವ ತೋರಿಸಿದ್ದಾರೆಂದು ಆರೋಪಿಸಿ ಅರಣ್ಯಾಧಿಕಾರಿ ಪೆಮ್ಮಯ್ಯ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸದಸ್ಯ ಮಹದೇವ್ ಮಾತನಾಡಿ, ಅರಣ್ಯ ಇಲಾಖೆ ಸಿಬ್ಬಂದಿ ಲಾಕ್ಡೌನ್ ನೆಪದಲ್ಲಿ ಸಾಮಿಲ್ ಮಾಲೀಕರಿಗೆ ಕಿರುಕುಳ ನೀಡುತ್ತಿದ್ದಾರೆ.
ನಾನು ಮರ ತುಂಡು ಮಾಡಿಸಲು ಹೋಗಿದ್ದಾಗ ನನ್ನ ಬಳಿಯೇ ಪೆಮ್ಮಯ್ಯ ಹಾಗೂ ಮತ್ತೂಬ್ಬ ಸಿಬ್ಬಂದಿ 1 ಸಾವಿರ ರೂ. ಲಂಚ ಪಡೆದಿದ್ದಾರೆ ಎಂದು ಆರೋಪಿಸಿದರು. ಈ ವೇಳೆ ಅರಣ್ಯಾಧಿಕಾರಿ ಪೆಮ್ಮಯ್ಯ, “ನಾನು ಹಣ ಪಡೆದಿಲ್ಲ, ನಿಮ್ಮ ದಾಖಲೆ ಇದ್ದರೆ ಸಾಬೀತು ಪಡಿಸಿ’ ಎಂದು ಸವಾಲು ಹಾಕಿದರು. ಇದರಿಂದ ಆಕ್ರೋಶಗೊಂಡ ಬಹು ತೇಕ ಸದಸ್ಯರು ತಾಪಂ ಸದಸ್ಯರ ಬಳಿ ನೀವು ಮಾತನಾಡುವ ರೀತಿ ಇದಲ್ಲ. ಕ್ಷಮೆ ಕೋರಬೇಕೆಂದು ಪಟ್ಟು ಹಿಡಿದರು.
ಸದಸ್ಯರ ಬಿಗಿ ಪಟ್ಟಿಗೆ ಮಣಿದ ಪೆಮ್ಮಯ್ಯ ಕ್ಷಮೆಕೋರಿದರು. ಸಾಮಾನ್ಯ ಸಭೆಗೆ ಗೈರಾಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಇಒ ಶ್ರುತಿಗೆ, ಅಧ್ಯಕ್ಷೆ ನಿರೂಪಾ ತಾಕೀತು ಮಾಡಿ ದರು. ಉಪಾಧ್ಯಕ್ಷೆ ಜಯಮ್ಮ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಂಗಸ್ವಾಮಿ, ಸದಸ್ಯರಾದ ಸುಮತಿ, ಈರಯ್ಯ, ಕುಂಜಪ್ಪ ಕಾರ್ನಾಡ್, ಮೋಹನ್ ರಾಜ್, ಶಿವಮ್ಮ, ಮಾನು, ಶ್ರೀನಿವಾಸ್, ಪಂಕಜ, ಮಲ್ಲಿಕಾರ್ಜುನ, ಪುಷ್ಪಲತಾ, ಶೋಭಾ, ಸುಮಿತ್ರಾ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.