Hunsur: ದಸರಾ ಮುನ್ನುಡಿ- ಗಣಪಯಣದ ಸ್ಥಳ ಪರಿಶೀಲಿಸಿದ ಡಿಸಿಎಫ್ ಪ್ರಭು
Team Udayavani, Aug 16, 2024, 11:15 AM IST
ಹುಣಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಮುನ್ನುಡಿಯಾದ ಗಜಪಯಣ ನಡೆಯಲಿರುವ ನಾಗರಹೊಳೆ ಉದ್ಯಾನದ ಹೆಬ್ಬಾಗಿಲು ವೀರನಹೊಸಹಳ್ಳಿಯಲ್ಲಿ ಆ.21 ರ ಗಜಪಯಣದ ಕಾರ್ಯಕ್ರಮಕ್ಕಾಗಿ ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಭು ನೇತೃತ್ವದ ತಂಡ ವೀರನಹೊಸಹಳ್ಳಿಯಲ್ಲಿ ಸ್ಥಳ ಪರಿಶೀಲನೆ ನಡೆಸಿದರು.
ಎಂದಿನಂತೆ ಮುಖ್ಯದ್ವಾರದ ಬಳಿಯಿಂದ ಆರಂಭಗೊಳ್ಳುವ ಗಜಪಯಣದ ಸ್ಥಳ ಹಾಗೂ ಸಮಾರಂಭ ನಡೆಯುವ ಖಾಸಗಿ ಜಮೀನನ್ನು ಪರಿಶೀಲಿಸಿದ ಡಿಸಿಎಫ್, ಸ್ಥಳೀಯ ಅರಣ್ಯಾಧಿಕಾರಿಗಳಿಂದ ಮಾಹಿತಿ ಪಡೆದು ಅದೇ ಸ್ಥಳದಲ್ಲಿ ಪೆಂಡಾಲ್ ನಿರ್ಮಿಸುವುದು, ಮುಖ್ಯದ್ವಾರ ಹಾಗೂ ನಾಗರಹೊಳೆ ರಸ್ತೆಯ ಪ್ರಮುಖ ಸ್ಥಳಗಳಲ್ಲಿ ಸ್ವಾಗತ ಕಮಾನು ನಿರ್ಮಿಸಲು ಪರಿಶೀಲನೆ ನಡೆಸಿ, ಕಾರ್ಯಕ್ರಮಕ್ಕೆ ಚ್ಯುತಿ ಬರದಂತೆ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜರ್ಮನ್ ಟೆಂಟ್ ನಿರ್ಮಾಣ:
ಮಳೆ ಹಿನ್ನೆಲೆ ಸಮಾರಂಭ ನಡೆಯುವ ವೇದಿಕೆ ಹಾಗೂ ಸಾರ್ವಜನಿಕರು ಕುಳಿತುಕೊಳ್ಳುವ ಇಡೀ ಸಭಾಂಗಣಕ್ಕೆ ಜರ್ಮನ್ ಟೆಂಟ್ ನಿರ್ಮಿಸಲಾಗುವುದು. ಶುಕ್ರವಾರದಿಂದಲೇ ಸಿದ್ದತೆ ಕಾರ್ಯ ಕಾಮಗಾರಿ ಆರಂಭವಾಗಲಿದೆ. ಉಳಿದಂತೆ ರಾಜಮಹಾರಾಜರ ಕಾಲದಿಂದ ನಡೆದು ಬಂದಿರುವ ಪೂಜೆ ಮತ್ತಿತರ ಕಾರ್ಯಕ್ರಮಗಳು ಎಂದಿನಂತಿರಲಿವೆ ಎಂದು ಡಿಸಿಎಫ್ ಪ್ರಭು “ಉದಯವಾಣಿ”ಗೆ ಮಾಹಿತಿ ನೀಡಿದರು.
ಈ ವೇಳೆ ವೀರನ ಹೊಸಹಳ್ಳಿ ಆರ್.ಎಫ್.ಓ.ಅಭಿಷೇಕ್, ಮೈಸೂರು ವನ್ಯಜೀವಿ ವಿಭಾಗದ ಆರ್.ಎಫ್.ಓ.ಸಂತೋಷ್‌ಕುಮಾರ್, ಮೈಸೂರು ವೃತ್ತದ ಮುಖ್ಯ ಪಶುವೈದ್ಯಾಧಿಕಾರಿ ಡಾ.ಮುಜೀಬ್‌ರೆಹಮಾನ್ ಹಾಗೂ ಸಿಬ್ಬಂದಿಗಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್
MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Waqf Issue: ಶ್ರೀರಂಗಪಟ್ಟಣದ ಸರಕಾರಿ ಶಾಲೆ ಮೇಲೂ ವಕ್ಫ್ ವಕ್ರದೃಷ್ಟಿ!
MUST WATCH
ಹೊಸ ಸೇರ್ಪಡೆ
WPL Auction: ಎಲ್ಲಾ ಆರು ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಇಲ್ಲಿದೆ
Udupi: ಮುನಿಯಾಲ್ ಅಯುರ್ವೇದ ಕಾಲೇಜಿಗೆ ರಾಷ್ಟ್ರ ಮಟ್ಟದಲ್ಲಿ “ಎ’ ಗ್ರೇಡ್
ಜೀವನ ಪರ್ಯಂತ ವೀಲ್ ಚೇರ್‌ನಲ್ಲೇ ಇರುವ ಪುತ್ರನಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ ಖ್ಯಾತ ನಟ
WPL 2025: ಆರ್ ಸಿಬಿ ಆಟಗಾರರ ರಿಟೆನ್ಶನ್ ಪಟ್ಟಿ ಬಿಡುಗಡೆ; ಪ್ರಮುಖ ಆಟಗಾರ್ತಿ ಔಟ್
Madras: ಮರಿಕೋತಿಗೆ ಚಿಕಿತ್ಸೆ ನೀಡಿದ್ದ ಪಶುವೈದ್ಯರು ಮತ್ತೆ ಭೇಟಿ ಮಾಡಬಹುದು: ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.