Hunsur: ಮಾಜಿ ಶಾಸಕ ಮಂಜುನಾಥ್‌ಗೆ ಬೆಳ್ಳಿ ಗದೆ ನೀಡಿ ಸನ್ಮಾನ
ಸೋತೆನೆಂದು ಸುಮ್ಮನೆ ಕೂರಲ್ಲಾ, ಜನರ ನೋವು ನಲಿವಿನಲ್ಲಿ ಭಾಗಿಯಾಗುವೆ: ಮಾಜಿ ಶಾಸಕ ಮಂಜುನಾಥ್
Team Udayavani, Feb 21, 2024, 3:04 PM IST
ಹುಣಸೂರು: ತಾಲೂಕಿನಲ್ಲಿ ಈ ಹಿಂದಿನ ಸಿದ್ದರಾಮಯ್ಯರ ಸರಕಾರದ ಅವಧಿಯಲ್ಲಿ ಅಭಿವೃದ್ದಿ ಪರ್ವವೇ ನಡೆದಿತ್ತು. ಈ ಬಾರಿ ತಮಗೆ ಅಧಿಕಾರ ಸಿಕ್ಕಿದ್ದರೆ ತಾಲೂಕಿನ ಸಮಗ್ರ ಅಭಿವೃದ್ದಿಯೇ ನಡೆಯುತ್ತಿತ್ತೆಂದು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.
ಇತ್ತೀಚಿನ ಬಜೆಟ್‌ನಲ್ಲಿ ಸರಕಾರ ಮರದೂರು ಏತ ನೀರಾವರಿ ಯೋಜನೆಯನ್ನು ಸೇರಿಸಲು ಮಂಜುನಾಥ ಅವರ ಶ್ರಮವೇ ಕಾರಣವೆಂದು ನೀರು ತುಂಬಿಸುವ ಕೆರೆಗಳ ಭಾಗದ ಗ್ರಾಮಗಳ ಕೃಷಿಕರು, ರೈತ ಮುಖಂಡರು, ಸ್ನೇಹಜೀವಿ ಬಳಗದವರು ಸೇರಿ ತಾಲೂಕಿನ ಮಾದಳ್ಳಿ ಮಠದ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಗ್ರಾಮಸ್ಥರಿಂದ ಬೆಳ್ಳಿಗದೆ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನನ್ನ ಕನಸಿನ ಮರದೂರು ಯೋಜನೆಗೆ ಅನುದಾನ ಬಿಡುಗಡೆ ಮಾಡಿಸಿ ಬಜೆಟ್‌ನಲ್ಲಿ ಸೇರಿಸಿದ್ದೇನೆಂಬ ಹೆಮ್ಮೆ ಇದೆ. ಸಿದ್ದರಾಮಯ್ಯರ ಸರಕಾರದ ಅವಧಿಯಲ್ಲಿ ಹನಗೋಡು ಅಣೆಕಟ್ಟೆ ಆಧುನೀಕರಣ, ಬಿಳಿಕೆರೆ, ಜೀನಹಳ್ಳಿ, ಹಳೇಬೀಡು ಕೆರೆಗಳಿಗೆ ನೀರು ತುಂಬಿಸುವ ಮತ್ತು ತಾಲೂಕಿಗೆ 11 ಏತ ನೀರಾವರಿ ಯೋಜನೆ ತಂದಿದ್ದೇನೆ ಎಂದು ಹೇಳಿದರು.
ಏಷ್ಯಾ ಖಂಡದಲ್ಲೇ ಮೊದಲೆಂಬಂತೆ 501 ಎಕರೆ ವಿಸ್ತೀರ್ಣದ ಕೆರೆಯನ್ನು ಅಭಿವೃದ್ದಿಗೊಳಿಸಿದೆ. ನೂರಾರು ಮಂದಿ ರೈತರಿಗೆ ಸಾಗುವಳಿ ಕೊಡಿಸಿದ್ದೇನೆ, ರಾಜ್ಯದಲ್ಲೇ ತಾಲೂಕು ಮಟ್ಟದಲ್ಲಿ ಪಿ.ಜಿ.ಕೋರ್ಸ್ ತಂದೆ, ಶಾಲಾ-ಕಾಲೇಜುಗಳ ಅಭಿವೃದ್ದಿ, ರಸ್ತೆನಿರ್ಮಾಣ, ವಿದ್ಯುತ್ ಅಭಿವೃಧ್ದಿ, ದೇವಾಲಯ, ಚರ್ಚ್, ಮಸೀದಿ ನಿರ್ಮಾಣ, ಜೀರ್ಣೋದ್ದಾರ ಸೇರಿದಂತೆ ಅಭಿವೃಧ್ದಿ ಪರ್ವವೇ ನಡೆಯಿತು. ಮುಂದೆ ಕಟ್ಟೆ ಮಳಲವಾಡಿ ನಾಲೆಗಳ ಆಧುನೀಕರಣ ಯೋಜನೆ ಮಂಜೂರು ಮಾಡಿಸುವ ಯೋಚನೆ ಸಾಕಾರಗೊಳಿಸಬೇಕಿದೆ ಎಂದರು.
ಮಂಜುನಾಥ್ ಸೋಲು ಬಡವರ ಸೋಲು:
ತಮ್ಮ ಸೋಲಿನ ವಾಖ್ಯಾನ ಮಾಡಿದ ಅವರು ನನ್ನ ಸೋಲು ಬಡವರ ಸೋಲಾಗಿದೆ. ನನ್ನಿಂದ ಸಹಾಯ ಪಡೆದ ಅನೇಕ ಮುಖಂಡರೇ ಮಾರಾಟವಾದರೆಂದು ಬೇಸರ ವ್ಯಕ್ತಪಡಿಸಿ, ಸೋತೆನೆಂದು ಸುಮ್ಮನೆ ಕೂರಲ್ಲಾ, ಕ್ಷೇತ್ರದ ಜನರ ನೋವು ನಲಿವಿನಲ್ಲಿ ಬಾಗಿಯಾಗುವೆ ಎಂದು ಹೇಳಿದರು.
ನೆನೆಗುದಿಗೆ ಬಿದ್ದಿರುವ ಅರಸು, ಅಂಬೆಡ್ಕರ್, ಜಗಜೀವನರಾಂ ಭವನ ಪೂರ್ಣಗೊಳಿಸಲು ಮನವಿ ಮಾಡಿದ್ದೇನೆ. ಸರಕಾರದಿಂದ ಆದಷ್ಟು ಕೆಲಸ ಮಾಡಿಸುವೆನೆಂದು ವಿಶ್ವಾಸ ವ್ಯಕ್ತಪಡಿಸಿ, ಅಭಿವೃದ್ದಿಗೆ ಮತ್ಸರ ಬೇಡ, ಅಭಿವೃದ್ದಿ ಕಾರ್ಯಗಳಿಗೆ ಎಲ್ಲರಿಗೂ ಸಹಕಾರ ನೀಡುವೆನೆಂದು ಹೇಳಿ ಮರದೂರು ಯೋಜನೆಗೆ ಸಹಕಾರ ನೀಡಿರುವ ಮುಖ್ಯಮಂತ್ರಿ, ಡಿಕೆಶಿ, ಉಸ್ತುವಾರಿ ಮಂತ್ರಿಗಳನ್ನು ಎಲ್ಲರೂ ಸೇರಿ ಅಭಿನಂದಿಸೋಣವೆಂದರು.
ಮಾದಹಳ್ಳಿಮಠದ ಸಾಂಬಸದಾಶಿವಸ್ವಾಮೀಜಿ ಮಾತನಾಡಿ, ತಾಲೂಕಿನಲ್ಲಿ ಮಾಜಿ ಶಾಸಕ ಎಚ್.ಪಿ. ಮಂಜುನಾಥರು, ನೀರಾವರಿ, ಶಿಕ್ಷಣ, ರಸ್ತೆ ಸೇರಿದಂತೆ ¸ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ದಿಕೆಲಸ ಮಾಡಿದ್ದಾರೆ. ಮಠದ ಅಭಿವೃದ್ದಿಗೆ ಸಂಪೂರ್ಣ ನೆರವಾಗಿದ್ದು, ಮುಂದಿನ ದಿನಗಳಲ್ಲಿ ಒಳ್ಳೆ ಅವಕಾಶ ಸಿಗಲೆಂದು ಹಾರೈಸಿದರು. ಹಾರಂಗಿಯ ನಿವೃತ್ತ ಇ.ಇ.ಸುರೇಶ್ ನೀರಾವರಿ ಯೋಜನೆಗಳ ಅನುಷ್ಟಾನದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಜಿ.ಪಂ.ಮಾಜಿ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಮುಖಂಡರಾದ ಹರಿಹರಾನಂದ ಸ್ವಾಮಿ, ಯ.ಕೂಸಪ್ಪ, ರಾಜು ಶಿವರಾಜೇ ಗೌಡ, ಕೃಷ್ಣ, ಚಿಕ್ಕಸ್ವಾಮಿ, ಅಣ್ಣಯ್ಯ ನಾಯ್ಕ, ಪುಟ್ಟರಾಜು,ಕುನ್ನೇಗೌಡ, ಪುಟ್ಟಮ್ಮ, ಕಲ್ಕುಣಿಕೆ ರಮೇಶ್, ಬಸವರಾಜು, ಗಾಗೇನಹಳ್ಳಿಕುಮಾರ್, ನಾರಾಯಣ್, ಕುಮಾರ್ ಮಾತನಾಡಿದರು.
ಬಾಬಣ್ಣ, ನಿಂಗಮ್ಮ, ಶಾಂತ ರಮೇಶ್, ಪುಟ್ಟಮ್ಮ ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ ರೈತರು ಬಾಗವಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.