ಹುಣಸೂರು: ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಗ್ರಾಮಸ್ಥರ ಸಹಕಾರ ಅಗತ್ಯ

ಪುತ್ಥಳಿ, ಗ್ರಂಥಾಲಯ ನಿರ್ಮಾಣದಿಂದ ಕಟ್ಟೆಮಳಲವಾಡಿ ಜಿಲ್ಲೆಗೆ ಮಾದರಿ: ಶಾಸಕ ಮಂಜುನಾಥ್ ಬಣ್ಣನೆ

Team Udayavani, Sep 11, 2022, 10:00 AM IST

news-1

ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಪುತ್ಥಳಿ ಸ್ಥಾಪನೆ, ಸಾವಿತ್ರಿಬಾಯಿ ಪುಲೆ ಗ್ರಂಥಾಲಯ ಹಾಗೂ ಉದ್ಯಾನವನ ನಿರ್ಮಾಣಕ್ಕೆ ಶಾಸಕದ್ವಯರಾದ ಎಚ್.ಪಿ.ಮಂಜುನಾಥ್ ಹಾಗೂ ಜಿ.ಟಿದೇವೇಗೌಡ ಗುದ್ದಲಿ ಪೂಜೆ ನೆರವೇರಿಸಿದರು.

ತಾಲೂಕಿನ ಕಟ್ಟೆಮಳಲವಾಡಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಷ್ಟಾಪನಾ ಸಮಿತಿಯು ಆಯೋಜಿಸಿದ್ದ ಅಂಬೇಡ್ಕರರ ಪುತ್ಥಳಿ ಪ್ರತಿಷ್ಟಾಪನೆಯ ಗುದ್ದಲಿ ಪೂಜೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬಹುದಿನದ ಕನಸನ್ನು ಗ್ರಾಮಸ್ಥರು ಹಾಗೂ ಸರಕಾರಿ ನೌಕರರು,ಅಧಿಕಾರಿಗಳು, ನಿವೃತ್ತರು ಸೇರಿ ತಾಲೂಕಿಗೆ ಮಾದರಿ ರೀತಿಯಲ್ಲಿ ನನಸಾಗಿಸುತ್ತಿದ್ದೀರೆಂದು ಪ್ರಶಂಸಿಸಿ, ಕಟ್ಟೆಮಳಲವಾಡಿ ಗ್ರಾಮ ನನಗೆ ರಾಜಕೀಯವಾಗಿ ಶಕ್ತಿ ತುಂಬಿದೆ. ಈ ಗ್ರಾಮವನ್ನು ಸಿದ್ದರಾಮಯ್ಯರ ಸರಕಾರದ ಅವಧಿಯಲ್ಲಿ ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿಪಡಿಸಿದ್ದೇನೆಂಬ ಆತ್ಮತೃಪ್ತಿ ಇದೆ ಎಂದರು.

ಇಲ್ಲಿ ಅಂಬೇಡ್ಕರ್ ಭವನ ಇದ್ದುದ್ದರಿಂದ ಮತ್ತೊಂದು ಭವನ ನಿರ್ಮಿಸಲು ಸರಕಾರ ಅನುದಾನ ನೀಡಲ್ಲ. ಆದರೂ ಹೋಬಳಿ ಕೇಂದ್ರವಾದ ಗಾವಡಗೆರೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ 50 ಲಕ್ಷ ರೂ. ಮಂಜೂರಾಗಿದ್ದು, ಅಲ್ಲಿ ನಿವೇಶನ ಕೊರತೆಯಿಂದ ಅನುದಾನ ಬಾಕಿ ಇದ್ದು, ಆ ಅನುದಾನವನ್ನು ಇಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ವರ್ಗಾಯಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ.  ಪ್ರಮುಖ ಸ್ಥಳದಲ್ಲಿ ನಿವೇಶನ ಗುರುತಿಸಿ ಮಂಜೂರು ಮಾಡಿರುವ ಅಂದಿನ ಗ್ರಾ.ಪಂ.ಅಧ್ಯಕ್ಷರಾಗಿದ್ದ ದೇವಯ್ಯನವರ ಕಾಳಜಿಯನ್ನು ಸ್ಮರಿಸಿದರು.

ಕಳೆದ ಆರು ತಿಂಗಳಿನಿಂದಷ್ಟೆ ಅಭಿವೃದ್ದಿ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಎಂದಿಗೂ ಮಾತು ತಪ್ಪದ ಮಂಜುನಾಥ ಮುಂದೆ ಸಮಿತಿಯೊಂದಿಗೆ ಚರ್ಚಿಸಿ ಸಂಪೂರ್ಣ ಬೆಂಬಲ ನೀಡುವೆನೆಂದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ದೇಶಕ್ಕೆ ಅತ್ಯುತ್ತಮ ಸಂವಿದಾನ ನೀಡಿದ ಅಂಬೇಡ್ಕರರ ಪುತ್ಥಳಿಯ ಸ್ಥಾಪನೆ ಎಲ್ಲರ ಪರಿಶ್ರಮದಿಂದ  ಸ್ಥಾಪಿಸುತ್ತಿರುವುದು ಸ್ವಾಗತಾರ್ಹ, ಇಲ್ಲಿ ಅತ್ಯುತ್ತಮ ಗ್ರಂಥಾಲಯ, ಸಂಶೋಧನಾ ಕೇಂದ್ರ ಆರಂಭವಾಗಲೆಂದು ಆಶಿಸಿ, ಸರ್ವ ಜನಾಂಗವಿರುವ ಇದೊಂದು ಆದರ್ಶ ಗ್ರಾಮವಾಗಿದ್ದು, ಈ ಕಾರ್ಯಕ್ಕೆ ಸಹಕಾರ ನೀಡುವೆನೆಂದರು.

ದಲಿತ ಮುಖಂಡ ಹರಿಹರ ಆನಂದಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಶೋಷಿತರು ಬಹುಸಂಖ್ಯಾತರಾಗಿದ್ದರೂ ಎಡ-ಬಲವೆಂಬ ಹೆಸರಿನಲ್ಲಿ ಒಡೆದು ಹೋಗಿ ಅನಾಯಾಸವಾಗಿ ಪಡೆಯಬಹುದಾದ ಅಧಿಕಾರದಕ್ಕದಾಗಿದೆ. ಮಾನಸಿಕವಾಗಿ ಒಂದಾದಲ್ಲಿ ಮಾತ್ರ ನಮ್ಮತನವನ್ನು ಉಳಿಸಿಕೊಳ್ಳಲು ಸಾಧ್ಯವೆಂದರು.

ಸಮಿತಿಯ ಅಧ್ಯಕ್ಷ ನಾಗರಾಜ ಮಲ್ಲಾಡಿ, ಉಪಾಧ್ಯಕ್ಷ ನಿಂಗರಾಜ ಮಲ್ಲಾಡಿ ಮಾತನಾಡಿ, ಬರುವ ಡಿ.6 ಅಂಬೇಡ್ಕರ್ ಪರಿನಿಬ್ಬಾಣದಿನದಂದು ಪುತ್ಥಳಿ ಸ್ಥಾಪಿಸಲು ಎಲ್ಲರೂ ಸಹಕರಿಸಬೇಕೆಂದು ಕೋರಿದರು.

ಜಿ.ಪಂ. ಮಾಜಿ ಸದಸ್ಯ ಅಚ್ಚುತಾನಂದರವರು ಈ ಕಾರ್ಯಕ್ಕೆ ವೈಯಕ್ತಿಕವಾಗಿ 10 ಲಕ್ಷ ರೂ. ನೀಡುವುದಾಗಿ ಘೋಷಿಸಿದರು.

ಬಿ. ಆರ್. ಸಿ. ಸಂತೋಷ್‌ ಕುಮಾರ್ ಶೋಷಿತರ ಬೆಳಕಾಗಿರುವ ಅಂಬೇಡ್ಕರರ ಪುತ್ಥಳಿಯನ್ನು ಸ್ಥಾಪಿಸುವ ಜೊತೆಗೆ ಇಲ್ಲಿ ಸಾವಿತ್ರಿಬಾಯಿ ಬಾಪುಲೆ ಹೆಸರಿನಲ್ಲಿ ಗ್ರಂಥಾಲಯ ಸ್ಥಾಪಿಸಲಾಗುವುದು. ಬುದ್ದನ ಉದ್ಯಾನ ನಿರ್ಮಿಸಲಾಗುವುದೆಂದರೆ ಅಭಿಯೋಜಕ ರಮೇಶ್‌ ಬಾಬು ಗ್ರಂಥಾಲಯಕ್ಕೆ ಅವಶ್ಯವಾದ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡಲಾಗುವುದೆಂದರು.

ಜೆಡಿಎಸ್ ಉಪಾಧ್ಯಕ್ಷ ದೇವರಾಜ ಒಡೆಯರ್, ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ದಲಿತರು ತಮ್ಮೊಳಗಿನ ಈರ್ಷೆ ಬಿಟ್ಟು ಒಂದಾದಲ್ಲಿ ಮಾತ್ರ ಅಧಿಕಾರ ಹಿಡಿಯಲು ಸಾಧ್ಯವೆಂದರು. ಮಾಜಿ ಸಂಸದ ವಿಜಯಶಂಕರ್, ಜೆಡಿಎಸ್ ಅಧ್ಯಕ್ಷ ದೇವರಹಳ್ಳಿಸೋಮಶೇಖರ್, ಹುಡಾ ಅಧ್ಯಕ್ಷ ಗಣೇಶ್‌ ಕುಮಾರಸ್ವಾಮಿ, ನಗರಸಭೆ ಸದಸ್ಯ ದೊಡ್ಡಹೆಜ್ಜೂರು ರಮೇಶ್,ಕೆಂಪನಾಯಕ ಮಾತನಾಡಿದರು.

ಈ ವೇಳೆ ಗ್ರಾ.ಪಂ.ಅಧ್ಯಕ್ಷೆ ಸುಧಾತಗಡಯ್ಯ,ಸದಸ್ಯರು, ತಾ.ಪಂ.ಮಾಜಿ ಅಧ್ಯಕ್ಷೆ ಪದ್ಮಮ್ಮ, ತಾ.ಬಿಜೆಪಿ ಅಧ್ಯಕ್ಷ ನಾಗಣ್ಣ, ಮುಖಂಡರಾದ ನಟರಾಜ್, ತಗಡಯ್ಯ, ದೇವರಾಜ್, ಶ್ರೀಧರ್, ಬಸವಲಿಂಗಯ್ಯ, ಸಂಜು, ಕೃಷ್ಣಶೆಟ್ಟೆ, ಕೇಶವಮೂರ್ತಿ, ಹರೀಶ್, ಪ್ರಪುಲ್ಲಾಮಲ್ಲಾಡಿ ಸೇರಿದಂತೆ ಅನೇಕ ಮುಖಂಡರಿದ್ದರು.

ಟಾಪ್ ನ್ಯೂಸ್

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

Allegation against Amit Shah: Canadian diplomats summoned

Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Hunsur: ಆಟೋ-ಬೈಕ್ ಡಿಕ್ಕಿ; ಸವಾರ ಸಾವು

ED-Raid

MUDA Case: ಜಾರಿ ನಿರ್ದೇಶನಾಲಯದಿಂದ ನೂರಾರು ಪುಟಗಳ ದಾಖಲೆ ವಶ

JDS

By Election: ಜೆಡಿಎಸ್‌ ಸ್ಟಾರ್‌ ಪ್ರಚಾರಕರ ಪಟ್ಟಿ: ಜಿಟಿಡಿ ಹೆಸರು ಔಟ್‌, ಪುತ್ರ ಎಂಟ್ರಿ 

Hunasuru-Women

Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!

Prathap-Simha

Waqf Property: ವಕ್ಫ್ ಆಸ್ತಿ ಅಕ್ಬರ್, ಔರಂಗಜೇಬ್‌ ಬಿಟ್ಟುಹೋದ ಆಸ್ತಿಯಾ?: ಪ್ರತಾಪ್‌ ಸಿಂಹ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.