Hunsur: ಆನೆ ನಡೆದದ್ದೇ ದಾರಿ! ಆನೆ ದಾಳಿಗೆ ಬೈಕ್ ಜಖಂ, ಕಾಂಪೌಂಡ್ ಗೆ ಹಾನಿ
Team Udayavani, May 7, 2024, 2:23 PM IST
ಹುಣಸೂರು: ನಾಗರಹೊಳೆ ಉದ್ಯಾನದ ವೀರನ ಹೊಸಹಳ್ಳಿ ವಲಯದಂಚಿನ ಹೊಸಹಳ್ಳಿ ಗ್ರಾಮದೊಳಕ್ಕೆ ಎಂಟ್ರಿ ಕೊಟ್ಟ ಆನೆ ಜನರೇ ಕಾಡಿನತ್ತ ಅಟ್ಟಿರುವ ಘಟನೆ ನಡೆದಿದೆ.
ವೀರನಹೊಸಹಳ್ಳಿ ವಲಯದಂಚಿನ ಹೊಸಹಳ್ಳಿ ಗೇಟ್ ಬಳಿಯ ರೈಲ್ವೆ ಕಂಬಿ ತಡೆಗೋಡೆ ದಾಟಿ ಬಂದಿರುವ ಆನೆ ರಾತ್ರಿಯಿಡೀ ಹೊಸಹಳ್ಳಿ ಗ್ರಾಮದ ಸುತ್ತಮುತ್ತಲಿನಲ್ಲಿ ಬೆಳೆದಿರುವ ಜನೀನಿನಲ್ಲಿ ಬೆಳೆದ ಫಸಲುಗಳನ್ನು ತಿಂದಿದೆ.
ಮುಂಜಾನೆ ಮರಳಿ ಕಾಡಿಗೆ ಹೋಗುವ ವೇಳೆ ಬೆಳಗಾಗಿದ್ದರಿಂದ ಜಮೀನು ಕೆಲಸಕ್ಕೆ ತೆರಳುತ್ತಿದ್ದ ರೈತರಿಗೆ ಆನೆ ಕಾಣಿಸಿದ್ದು, ತಕ್ಷಣವೇ ಕೂಗಾಟ ನಡೆಸಿ ಜನರು ಜಮಾಯಿಸಿದ್ದಾರೆ.
ಆನೆ ಕಂಡು ನಾಯಿಗಳು ಬೊಗಳಲಾರಂಭಿಸಿವೆ. ಜನರ ಕೂಗಾಟ, ನಾಯಿ ಬೊಗಳುವಿಕೆಯಿಂದ ದಿಕ್ಕಾಪಾಲಾಗಿ ಓಡಾಡಿದೆ. ಮನೆ ಬಳಿ ಸಂಗ್ರಹಿಸಿದ್ದ ಹುಲ್ಲಿನ ಮೆದೆಗಳನ್ನು ಎಳೆದು ಹಾಕಿದೆ. ಅಷ್ಟರಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಗೂ ಮಾಹಿತಿ ನೀಡಿದ್ದಾರೆ.
ಈ ವೇಳೆ ಆನೆ ಸೀದಾ ಹೊಸಹಳ್ಳಿ ಗ್ರಾಮದೊಳಗೆ ನುಗ್ಗಿದೆ. ಗ್ರಾಮದ ಯುವಕರು ಡಬ್ಬ ಮತ್ತು ಇತರ ವಸ್ತುಗಳಿಂದ ಜೋರಾಗಿ ಶಬ್ದ ಮಾಡುತ್ತಾ ಟಾಚ್೯ ಲೈಟ್ ಬಿಟ್ಟು ಕೂಗಾಟ ನಡೆಸಿದ್ದಾರೆ. ಆನೆಯು ಗ್ರಾಮದ ಬೀದಿಗಳಲ್ಲಿ ಅತ್ತಿಂದಿತ್ತ ಓಡಾಡಿದೆ.
ಕೋಪಗೊಂಡ ಜನರು ಕಲ್ಲುಗಳಿಂದ ಹೊಡೆಯುತ್ತಿದ್ದಂತೆ ಕಲ್ಲಿನೇಟು ತಪ್ಪಿಸಿಕೊಳ್ಳುವ ಭರದಲ್ಲಿ ಗ್ರಾಮದಲ್ಲಿ ಸಿಕ್ಕಸಿಕ್ಕ ಕಡೆ ನುಗ್ಗಿದೆ. ಈ ವೇಳೆ ಮನೆ ಬಳಿ ನಿಲ್ಲಿಸಿದ್ದ ಬೈಕ್ ಅನ್ನು ಜಖಂಗೊಳಿಸಿದೆ. ಮನೆಯ ಕಾಂಪೌಂಡ್ ಹಾನಿ ಮಾಡಿದೆ.
ಕಲ್ಲಿನೇಟಿನಿಂದ ವಿಚಲಿತವಾಗಿದ್ದ ಆನೆ ಕೊನೆಗೆ ಗ್ರಾಮದೊಳಗಿಂದ ಮತ್ತೆ ಜಮೀನಿನ ಮೂಲಕ ತೆರಳಿ ಎದ್ದೆನೋ ಬಿದ್ದೆನೊ ಎಂಬಂತೆ ಓಡಿ ಕಾಡು ಸೇರಿಕೊಂಡಿದೆ.
ಅರಣ್ಯ ಸಿಬ್ಬಂದಿಗಳು ಬರುವಷ್ಟರಲ್ಲಿ ಅವಾಂತರ ಸೃಷ್ಟಿಸಿದ್ದ ಆನೆ ಕಾಡು ಸೇರಿತು. ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Perth test: ಜೈಸ್ವಾಲ್-ರಾಹುಲ್ ಅಜೇಯ ಆಟ; ಪರ್ತ್ ನಲ್ಲಿ ಭಾರತದ ಮೇಲಾಟ
Mother: ಅಮ್ಮನ ಜೀವನವೇ ಆದರ್ಶ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.