Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
ಕಳೆದ 15 ದಿನಗಳಿಂದ ಕೃಷಿ ನಾಶಪಡಿಸುತ್ತಿದ್ದ ಕಾಡಾನೆ
Team Udayavani, Jan 5, 2025, 2:49 PM IST
ಹುಣಸೂರು: ಮೇವನ್ನರಸಿ ನಿತ್ಯ ಕಾಡಿನಿಂದ ಹೊರ ಬಂದು ದಾಂಧಲೆ ನಡೆಸಿ ಬೆಳಗಾಗುವಷ್ಟರಲ್ಲಿ ಕಾಡು ಸೇರುತ್ತಿದ್ದ ಈ ಸಲಗ, ನಾಗರಹೊಳೆ ಉದ್ಯಾನದಂಚಿನ ವೀರನಹೊಸಹಳ್ಳಿ ವಲಯದ ಮುದಗನೂರು ಚಿಕ್ಕಹೆಜ್ಜೂರು, ದೊಡ್ಡಹೆಜ್ಜೂರು, ಕೊಳವಿಗೆ ಸುತ್ತ ಮುತ್ತಲ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಭತ್ತ, ರಾಗಿ ಫಸಲನ್ನು ತಿಂದು ತುಳಿದು ನಾಶಪಡಿಸುತ್ತಿತ್ತು.
ಈ ಬಗ್ಗೆ ರೈತರು ಅರಣ್ಯ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿರಲಿಲ್ಲ.
ಎಂದಿನಂತೆ ಜ.4ರ ಶನಿವಾರ ರಾತ್ರಿ ಕಾಡಿನಿಂದ ಹೊರಬಂದು ಹೊಟ್ಟೆ ತುಂಬಿಸಿಕೊಂಡ ಸಲಗ ಜ.5ರ ಭಾನುವಾರ ಮುಂಜಾನೆ ಅರಣ್ಯಕ್ಕೆ ಮರಳುವ ವೇಳೆ ಅರಸುಹೊಸಕಟ್ಟೆಯ ಕೆರೆಯಲ್ಲಿ ಅಳವಡಿಸಿದ್ದ ಸಿಮೆಂಟ್ ಕಂಬದ ಬ್ಯಾರಿಕೇಡ್ ದಾಟಲಾರದೆ ಸಿಲುಕಿ ಕೆಲಹೊತ್ತು ಘೀಳಿಡುತ್ತಾ ದಾಟಲು ಹರಸಾಹಸ ಪಟ್ಟಿದೆ.
ಆನೆ ಘೀಳಿಡುತ್ತಿದ್ದ ಸದ್ದು ಕೇಳಿದ ಕಾಡಂಚಿನ ಸುತ್ತಮುತ್ತಲ ರೈತರು ಕೆರೆ ಬಳಿಗೆ ಧಾವಿಸಿದ್ದಾರೆ. ಆನೆಯನ್ನು ಕಂಡು ಇದೇ ಆನೆ ನಮ್ಮ ಬೆಳೆ ಹಾಳು ಮಾಡಿದ್ದು ಎಂದು ಹಿಡಿ ಶಾಪ ಹಾಕುತ್ತಾ ಪುಕ್ಕಟೆ ಮನರಂಜನೆ ಪಡೆದು ಬಳಿಕ ಅರಣ್ಯ ಸಿಬ್ಬಂದಿಗಳಿಗೆ ಆನೆಯನ್ನು ಬ್ಯಾರಿಕೇಡ್ ನಿಂದ ಹೊರಗೆ ದಾಟಿಸುವ ಬಗ್ಗೆ ಉಚಿತ ಸಲಹೆ ನೀಡುತ್ತಿದ್ದಾರೆ.
ಇನ್ನೂ ಕೆಲವರು ಮೂಕ ಪ್ರಾಣಿಯ ಸ್ಥಿತಿ ಕಂಡು ಮರುಗಿದರು.
ಕೊನೆಗೆ ಜೆಸಿಬಿ ತಂದು ಆನೆಯ ಹಿಂಬಾಗದಿಂದ ಮೇಲೆತ್ತಿ ಸಿಮೆಂಟ್ ಕಂಬ ಅಲ್ಲಾಡಿಸಿ ಸಲಗನನ್ನು ಕಾಡು ಸೇರಿಸುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.