ಮೈಮುಲ್ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ
Team Udayavani, May 16, 2020, 5:35 AM IST
ಮೈಸೂರು: ಜಿಲ್ಲಾ ಸಹಕಾರಿ ಹಾಲು ಉತ್ಪಾ ದಕರ ಸಂಘಗಳ ಒಕ್ಕೂಟದ ಹಲವು ಹುದ್ದೆ ಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಕುರಿತು ಆರೋಪ ಮಾಡಿ ರುವ ಮಾಜಿ ಸಚಿವ ಸಾ.ರಾ.ಮಹೇಶ್, ಅಕ್ರಮಕ್ಕೆ ಸಂಬಂಧಿಸಿದ ಮೂರು ಆಡಿಯೋ ಸಂಭಾಷಣೆ ಬಿಡುಗಡೆ ಮಾಡಿದರು. ನಗರದ ತಮ್ಮ ಕಚೇರಿ ಆವ ರಣದಲ್ಲಿ ಶುಕ್ರ ವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ,
ಮೈಮುಲ್‌ನಲ್ಲಿ ನಡೆದಿರುವ ದಾಖಲೆಗಳು ನಮಗೆ ಲಭ್ಯವಾ ಗಿದ್ದು, ಎಲ್ಲವನ್ನು ಹಂತಹಂತವಾಗಿ ಬಿಡುಗಡೆ ಮಾಡಲಾಗು ವುದು. ಕಳೆದ 3 ದಿನದ ಹಿಂದೆ ಮೈಮುಲ್ ನೇಮಕಾತಿ ಕುರಿತು ಹಲವು ಆರೋಪ ಮಾಡಿದ್ದ ಸಾ.ರಾ.ಮಹೇಶ್, ಶುಕ್ರವಾರವೂ ಅದಕ್ಕೆ ಪುಷ್ಟಿ ನೀಡುವ ಆಡಿಯೋ ಸಂಭಾಷಣೆ ಬಿಡುಗಡೆ ಮಾಡುವ ಮೂಲಕ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿದರು.
ಪ್ರಕ್ರಿಯೆ ರದ್ದುಗೊಳಿಸಿ: ಮೈಮುಲ್ ನಾಮ ನಿರ್ದೇಶಿತ ನಿರ್ದೇಶಕ ಹಾಗೂ ಸಿಎಂ ಯಡಿ ಯೂರಪ್ಪ ಅವರ ಸಂಬಂಧಿ ಎಸ್.ಸಿ. ಅಶೋಕ್ ಅವರ ಹೆಸರು ಆಡಿಯೋದಲ್ಲಿದೆ. ಇವರಿಗೆ ಹಣ ಕೊಟ್ಟಿದ್ದಾರೆ ಎಂದು ಆಡಿಯೋ ದಲ್ಲಿ ಹೇಳಲಾಗಿದೆ. ಹೀಗಾಗಿ, ಇಡೀ ಪ್ರಕ್ರಿಯೆ ಯನ್ನು ರದ್ದುಗೊಳಿಸಿ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಆಡಳಿತ ಮಂಡಳಿಯಲ್ಲಿ ನಡೆದಿರುವ ಮ್ಯಾಚ್ ಫಿಕ್ಸಿಂಗ್‌ನಂತೆ ಒಂದು ವೇಳೆ ಇದೇ ಸ್ವರೂಪದಲ್ಲೇ ನೇಮಕಾತಿ ಪ್ರಕ್ರಿಯೆ ನಡೆದರೆ ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ನೇತೃತ್ವದಲ್ಲಿ ಮೇ 19ರಂದು ಮೈಮುಲ್ ಎದುರು ಬೃಹತ್ ಪ್ರತಿಭಟನೆ ನಡೆಸಲಾಗು ವುದು ಎಂದರು.
ಲಾಭದಾಯಕ ಹುದ್ದೆ: ಡೇರಿ ಅಧ್ಯಕ್ಷ ಎಸ್.ಸಿದ್ದೇ ಗೌಡರ ಅಕ್ಕನ ಮಗ ಹಾಗೂ ತಂಗಿ ಮಗನಿಗೆ ಸಂದ ರ್ಶನ ಮಾಡುತ್ತಿದ್ದಾರೆ. ಹಲವು ಹುದ್ದೆಗೆ ಈಗಾಗಲೇ ಹಣದ ವ್ಯವ ಹಾರ ಕುದುರಿಸಲಾಗಿದೆ. ಲಾಭದಾಯಕ ಹುದ್ದೆಯನ್ನು ತಮ್ಮ ಕುಟುಂಬದವರಿಗೆ ಕೊಡ ಬಹುದಾ ಎಂದು ಪ್ರಶ್ನಿಸಿದರು. ಅವ್ಯವಹಾರ ನಡೆದಿದೆ ಎನ್ನುವುದಕ್ಕೆ ಲಾಕ್‌ಡೌನ್ ನಡುವೆ ತರಾತುರಿಯಲ್ಲಿ ಸಂದರ್ಶನ ನಡೆಸುತ್ತಿರುವು ದೊಂದೇ ಸಾಕ್ಷಿ. ಈ ಕುರಿತು ಸರ್ಕಾರ ಸಮಗ್ರ ತನಿಖೆ ನಡೆಯಬೇಕು.
ಈ ಬಗ್ಗೆ ಸರ್ಕಾರ ಪರಿ ಗಣಿಸದಿದ್ದಲ್ಲಿ ಮುಂದಿನ ಹೋರಾಟದ ಬಗ್ಗೆ ಚಿಂತನೆ ಮಾಡುತ್ತೇವೆ ಎಂದು ಹೇಳಿದರು. ಭ್ರಷ್ಟಾಚಾರದಲ್ಲಿ ಸಿಎಂ ಯಡಿಯೂರಪ್ಪ ಅವರ ಸಂಬಂಧಿ ಎಸ್.ಸಿ.ಅಶೋಕ್ ನೇರ ವಾಗಿ ಭಾಗಿಯಾಗಿದ್ದಾರೆಯೇ ಎಂಬ ಪ್ರಶ್ನೆಗೆ ಈ ಕುರಿತು ನಾನೇನೂ ಹೇಳುವುದಿಲ್ಲ. ಆಡಿಯೋ ಬಿಡುಗಡೆ ಮಾಡಿದ್ದೇನೆ. ತನಿಖೆ ನಡೆಸಿದರೆ ಸತ್ಯಾಂಶ ಹೊರಬೀಳುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಎಂ. ಅಶ್ವಿನ್‌ಕುಮಾರ್, ಮೈಮುಲ್ ನಿರ್ದೇಶಕ ಸೋಮಶೇಖರ್ ಇದ್ದರು.
ಆಡಿಯೋ ಸಂಭಾಷಣೆಯಲ್ಲಿ ಇರೋದೇನು?: ಮಹಿಳೆ ಮತ್ತು ತುಮಕೂರು ಡೇರಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರ ನಡುವಿನ ಸಂಭಾಷಣೆ ಆಡಿಯೋದಲಿದ್ದು, ವ್ಯಕ್ತಿಯು ಮೈಮುಲ್ ನಿರ್ದೇಶಕ ಎಸ್.ಸಿ.ಅಶೋಕ್ ಅವರಿಗೆ ಮಾರ್ಕೆಟಿಂಗ್ ಅಧಿಕಾರಿ ಹುದ್ದೆಗಾಗಿ 40 ಲಕ್ಷ ಹಣವನ್ನು ಮಂಗಳೂರು ಡೇರಿಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ನೀಡಿದ್ದಾರೆ ಎಂದು ತಿಳಿಸುತ್ತಾರೆ.
ಪದೇ ಪದೇ ದೂರವಾಣಿ ಸಂಭಾಷಣೆಯಲ್ಲಿ ತೊಡಗಿದ್ದ ವ್ಯಕ್ತಿಯು ಮಹಿಳೆಗೆ ರೆಕಾರ್ಡ್ ಮಾಡಿಕೊಳ್ಳಬೇಡ ಎಂದು ಮನವಿ ಮಾಡುತ್ತಾರೆ. ಈಗಾಗಲೇ ಸಾ.ರಾ.ಮಹೇಶ್‌ಗೆ ಮಾಜಿ ಸಚಿವ ಎಚ್. ವಿಶ್ವನಾಥ್ ಬೆಂಬಲ ನೀಡಿದ್ದಾರೆ ಎಂದೂ ವ್ಯಕ್ತಿ ಸಂಭಾಷಣೆ ವೇಳೆ ಹೇಳುತ್ತಾರೆ. ಮಹಿಳಾ ಅಭ್ಯರ್ಥಿಯೊಬ್ಬರು ಈಗಾಗಲೇ 18 ಲಕ್ಷ ಹಣ ನೀಡಿದ್ದು, ಇದಲ್ಲದೆ ಇನ್ನೂ 3ರಿಂದ 4 ಲಕ್ಷ ಹಣ ನೀಡುವ ಕುರಿತು ಮಾಡಿರುವ ಪ್ರಸ್ತಾಪ ಮತ್ತೂಂದು ಆಡಿಯೋದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.