ಹಸುಗಳ ಬಲಿ ಪಡೆಯುತ್ತಿದ್ದ ಚಿರತೆ ಸೆರೆ
ಕೊಟ್ಟಿಗೆಗೆ ನುಗ್ಗಿ ನಾಯಿ, ಆಡು ಕುರಿ ಭಕ್ಷಿಸುತ್ತಿದ್ದ ವನ್ಯಜೀವಿ ಈ ಭಾಗದಲ್ಲಿರುವ ಇನ್ನೂ 2 ಚಿರತೆ ಸೆರೆಗೆ ಆಗ್ರಹ
Team Udayavani, Nov 11, 2021, 12:08 PM IST
ಹುಣಸೂರು: ಹಲವಾರು ದಿನಗಳಿಂದ ಹನಗೋಡು ಭಾಗದ ರೈತರು-ಸಾರ್ವಜನಿಕರನ್ನು ಭಯಭೀತರನ್ನಾಗಿ ಸಿದ್ದ ಚಿರತೆಯು ಕೊನೆಗೂ ಬೋನಿನಲ್ಲಿ ಬಂಧಿಯಾಗಿದೆ. ತಾಲೂಕಿನ ಹನಗೋಡು ಹೋಬಳಿಯ ವಡ್ಡಂಬಾಳು ಗ್ರಾಮದ ಸಿದ್ದರಾಜು ಜಮೀನಿನಲ್ಲಿ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿನಲ್ಲಿ ಆರು ವರ್ಷದ ಗಂಡು ಚಿರತೆಯು ಸೆರೆ ಸಿಕ್ಕಿದೆ.
ಬುಧವಾರ ಬೆಳಗ್ಗೆ ಜಮೀನಿನ ಮಾಲಿಕ ಸಿದ್ದರಾಜು ಅವರು ಪ್ರಾದೇಶಿಕ ಅರಣ್ಯ ಇಲಾಖೆಯ ಆರ್ ಎಫ್‌ಒ ನಂದಕುಮಾರ್‌ಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಸಿಕ್ಕ ಚಿರತೆಯನ್ನು ನಾಗರಹೊಳೆ ಉದ್ಯಾನದ ಕಲ್ಲಹಳ್ಳ ಅರಣ್ಯದಲ್ಲಿ ಬಂಧ ಮುಕ್ತಗೊಳಿಸಿದರು. ಕಳೆದ 5-6 ತಿಂಗಳುಗಳಿಂದ ಚಿರತೆಯು ಲಕ್ಷ್ಮಣತೀರ್ಥ ನದಿ ದಂಡೆ ಹಾಗೂ ಕಬ್ಬಿನಗದ್ದೆಯ ಆಸುಪಾಸು ಸೇರಿದಂತೆ ಅಕ್ಕಪಕ್ಕದ ಜಮೀನುಗಳಲ್ಲಿ ಮೇಯಲು ಬಿಟ್ಟ ಜಾನುವಾರುಗಳನ್ನು ತಿಂದು ಹಾಕುತ್ತಿತ್ತು.
ಇದನ್ನೂ ಓದಿ:-ಮದಕರಿ ನಾಯಕನಿಗೆ ವಿಷ ಹಾಕಿಕೊಂದ ಟಿಪ್ಪುಜಯಂತಿ ಮಾಡಿದ್ದು ಸಿದ್ದರಾಮಯ್ಯ ಸಾಧನೆ:ಪ್ರತಾಪ್ ಸಿಂಹ
ಇದಲ್ಲದೇ ಗ್ರಾಮದೊಳಗೂ ನುಗ್ಗಿ ಕೊಟ್ಟಿಗೆಯಲ್ಲಿರುವ ಸಾಕುನಾಯಿ, ಆಡು-ಕುರಿಗಳ ಮೇಲೆ ದಾಳಿ ನಡೆಸಿ ಜನರನ್ನು ಭಯಭೀತರನ್ನಾಗಿಸಿತ್ತು. ಅರಣ್ಯ ಇಲಾಖೆಯವರು ಹತ್ತಾರು ಬಾರಿ ಜಾಗ ಬದಲಾಯಿಸಿ ಬೋನ್ ಇರಿಸಿದ್ದರೂ ಚಿರತೆ ಬೋನಿನಲ್ಲಿ ಸೆರೆಯಾಗದೆ ಚಳ್ಳೆ ಹಣ್ಣು ತಿನ್ನಿಸಿ ಬೇಟೆಯಾಡಿ ಹೊಟ್ಟೆ ತುಂಬಿಸಿಕೊಂಡು ಓಡಾಡುತ್ತಿತ್ತು.
ಇನ್ನೂ 2 ಚಿರತೆ ಇವೆ: ವಡ್ಡಂಬಾಳು ಸೇರಿದಂತೆ ಅಕ್ಕಪಕ್ಕದ ಜಮೀನುಗಳಲ್ಲಿ ಹಲವಾರು ಬಾರಿ ಬೋನ್ ಇರಿಸಲಾಗಿತ್ತಾದರೂ ಬೋನಿಗೆ ಚಿರತೆ ಬೀಳುತ್ತಿಲ್ಲ, ಮತ್ತೆ ಸ್ಥಳವನ್ನು ಬದಲಾಯಿಸುತ್ತಿತ್ತು. ಇದೀಗ ಒಂದು ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಇದಲ್ಲದೆ ಇನ್ನೂ ಎರಡು ಚಿರತೆಗಳಿದ್ದು, ಅವುಗಳನ್ನೂ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಚಿರತೆಗೆ ಕಣ್ಣಿನ ಶಸ್ತ್ರಚಿಕಿತ್ಸೆ
ಬೋನ್‌ನಲ್ಲಿ ಬಂಧಿಯಾಗಿರುವ ಚಿರತೆಯ ಬಲಗಣ್ಣಿನ ಮೇಲೆ ಗುಳ್ಳೆಯಾಗಿದ್ದು, ಅರಣ್ಯ ಇಲಾಖೆ ಪಶು ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಇನ್ನೆರಡು ದಿನಗಳ ನಂತರವಷ್ಟೆ ಕಾಡಿಗೆ ಬಿಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ತಾಲೂಕಿನ ಹೆಗ್ಗಂದೂರಿನಲ್ಲಿ ಸೆರೆ ಸಿಕ್ಕ ಚಿರತೆಯ ಬಲಗಣ್ಣಿನ ಮೇಲೆ ಗುಳ್ಳೆಯಾಗಿದ್ದರೆ, ಮತ್ತೂಂದೆಡೆ ಕಾಲಿಗೂ ಗಾಯಗಳಾಗಿದೆ. ಕಾಡಿನೊಳಗೆ ಬಿಟ್ಟಲ್ಲಿ ಬೇಟೆಯಾಡಲು ಸಾಧ್ಯವಾಗದೆ ನಿತ್ರಾಣ ಗೊಳ್ಳಲಿದೆ. ಹೀಗಾಗಿ ಪಶುವೈದ್ಯ ಡಾ.ರಮೇಶ್ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿ ಗುಳ್ಳೆಯನ್ನು ತೆಗೆದಿದ್ದಾರೆ. ಇನ್ನೆಡು ದಿನಗಳ ಕಾಲ ನಿಗಾ ಇಡಲಾಗುವುದು, ಬಳಿಕ ಕಾಡಿಗೆ ಬಿಡಲಾಗುವುದೆಂದು ಪ್ರಾದೇಶಿಕ ಅರಣ್ಯ ವಿಭಾಗದ ಆರ್‌ಎಫ್‌ಒ ನಂದಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.