ಮಳೆ ಆರಂಭವಾದರೂ ಸಜ್ಜಾಗದ ಪಾಲಿಕೆ
Team Udayavani, Jun 15, 2020, 6:09 AM IST
ಮೈಸೂರು: ಈಗಾಗಲೇ ಮುಂಗಾರು ಆರಂಭವಾಗಿದೆ. ಮಳೆ ಸುರಿದು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದರೂ ಪಾಲಿಕೆ ಮಳೆಗಾಲ ಎದುರಿಸಲು ಇನ್ನೂ ಸಮ ರ್ಪಕವಾಗಿ ಸಜ್ಜುಗೊಂಡಿಲ್ಲ. ಕಳೆದೆರೆಡು ವಾರಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಮೈಸೂರಿನ ಹಲವು ಬಡಾವಣೆಗಳ ರಸ್ತೆ ಬದಿಯಲ್ಲಿದ್ದ ಮರಗಳು ಧರೆ ಗುರುಳಿದ್ದವು. ಜೊತೆಗೆ 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ತುಂಡಾಗಿ ಎರಡು ದಿನ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿತ್ತು.
ಇನ್ನೂ ಕೆಲವೆಡೆ ತಗ್ಗು ಪ್ರದೇಶಗಳಲ್ಲಿ ಚರಂಡಿ ಮತ್ತು ರಾಜ ಕಾಲುವೆಗಳಲ್ಲಿ ಹೂಳು ತುಂಬಿದ್ದ ಪರಿಣಾಮ ರಸ್ತೆ ಮತ್ತು ಮನೆಗಳಿಗೆ ನೀರು ನುಗ್ಗಿತ್ತು. ಮೈಸೂರು ನಗರದಲ್ಲಿ ಪ್ರತಿ ವರ್ಷ ಮಳೆಯಿಂದ ದೊಡ್ಡ ಸಮಸ್ಯೆ ಎದುರಾದರೂ ನಗರಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿ ರು ವುದು ಅವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ಎಲ್ಲಿದೆ ಚರಂಡಿ: ನಗರದ ಹಳೆಯ ಬಡಾವಣೆಗಳ ಬಹುಪಾಲು ರಸ್ತೆ ಬದಿ, ಮನೆ ಗಳ ಮುಂದೆ ನಿರ್ಮಿಸಿರುವ ಚರಂಡಿಗಳು ಮಣ್ಣು, ಕಸಕಡ್ಡಿಯಿಂದ ಮುಚ್ಚಿಹೋಗಿದ್ದರೆ, ಇನ್ನೂ ಕೆಲವೆಡೆ ಚರಂಡಿಯೇ ನಿರ್ಮಾಣ ವಾಗಿಲ್ಲ. ಪರಿಣಾಮ ಚರಂಡಿ ಎಲ್ಲಿದೆ ಎಂದು ಹುಡುಕುವಂತಾಗಿದೆ.
ಹೂಳು ತುಂಬಿದ ರಾಜಕಾಲುವೆಗಳು: ಮಳೆ ನೀರು ಮತ್ತು ತ್ಯಾಜ್ಯ ನೀರು ಸರಾಗವಾಗಿ ಹರಿಯುವಂತೆ ನಿರ್ಮಿಸಿರುವ ರಾಜ ಕಾಲುವೆ ಹಾಗೂ ದೊಡ್ಡ ಮೋರಿಗಳಲ್ಲಿ ಹೂಳು ತುಂಬಿ ಕೊಂಡಿದೆ. ಸದಾ ವಾಹನ ದಟ್ಟಣೆಯಿಂದ ಕೂಡಿರುವ ಜೆಎಸ್‌ಎಸ್ ಆಸ್ಪತ್ರೆ ರಸ್ತೆಯಲ್ಲಿರುವ ಮಾರು ಕಟ್ಟೆ ಬಳಿ ಹಾದು ಹೋಗಿರುವ ರಾಜಕಾಲುವೆ, ಬೋಗಾದಿ, ವಿಜಯನಗರ, ಮುನೇಶ್ವರನಗರ, ವಿದ್ಯಾರಣ್ಯಪುರಂ ಬಳಿ ಕಾಲುವೆಗಳಲ್ಲೂ ಇದೆ ಸ್ಥಿತಿ ನಿರ್ಮಾಣವಾಗಿದೆ.
ಪ್ರಮುಖ ರಸ್ತೆಗಳಿಗಷ್ಟೇ ಆದ್ಯತೆ: ನಗರಪಾಲಿಕೆ ಕೈಗೊಳ್ಳುವ ಬಹುಪಾಲು ಮುಂಜಾಗ್ರತೆ ಕ್ರಮಗಳು ಕೇವಲ ನಗರದ ಪ್ರಮುಖ ರಸ್ತೆ ಮತ್ತು ಬಡಾವಣೆಗಳಿಗೆ ಸೀಮಿತವಾಗಿದೆ. ಉಳಿದ ಬಡಾವಣೆ ಮತ್ತು ರಸ್ತೆಗಳು ಅಭಿವೃದಿಟಛಿ ಮತ್ತು ಮುಂಜಾಗ್ರತೆ ಕ್ರಮಗಳಿಂದ ದೂರ ಉಳಿದಿವೆ ಎಂದು ಪಾಲಿಕೆ ಮಾಜಿ ಸದಸ್ಯರೊಬ್ಬರ ದೂರು.
ನಗರದಲ್ಲಿ ಅಪಾಯ ಸ್ಥಿತಿಯಲ್ಲಿ 300 ಮರ: ನಗರದ ಹಲವು ರಸ್ತೆಗಳಲ್ಲಿ ಒಣಗಿದ ಹಾಗೂ ಬೀಳುವ ಹಂತದಲ್ಲಿ 300ಕ್ಕೂ ಹೆಚ್ಚು ಮರ ಮತ್ತು ಮರದ ಕೊಂಬೆಗಳಿವೆ. ಜೋರು ಗಾಳಿ, ಮಳೆ ಬಂದರೆ ನೆಲಕ್ಕುರುಳಲಿವೆ. ಸಹಸ್ರಾರು ವಾಹನಗಳು ಓಡಾಡುವ ಮುಖ್ಯರಸ್ತೆಯಲ್ಲಿ ಮರಗಳು ಉರುಳಿದರೆ ಜೀವಹಾನಿಯಾಗುವ ಸಾಧ್ಯತೆಗಳಿವೆ. ಇತ್ತೀಚೆಗೆ ಸುರಿದ ಭಾರೀ ಮಳೆಗೆ ಮರಗಳು, ವಿದ್ಯುತ್ ಕಂಬ, ವಾಹನ ಹಾಗೂ ಮನೆಗಳ ಮೇಲೆ ಉರುಳಿ ಬಿದ್ದಿದ್ದವು. ಮತ್ತೆ ಆ ಘಟನೆಗಳು ಮರುಕಳಿಸದಂತೆ ಪಾಲಿಕೆ ಕೂಡಲೇ ಕ್ರಮ ವಹಿಸಬೇಕಿದೆ.
ಅಪಾಯ ಸ್ಥಿತಿಯಲ್ಲಿರುವ 300 ಮರ, ಕೊಂಬೆಗಳನ್ನು ಗುರುತಿಸಲಾಗಿದೆ. ಅವುಗಳ ತೆರವಿಗೆ ಅರಣ್ಯ ಇಲಾಖೆ ಅನುಮತಿ ಕೋರಿದ್ದೇವೆ. ಅನುಮತಿ ಸಿಕ್ಕ ಕೂಡಲೇ ಮರಗಳನ್ನು ತೆರವುಗೊಳಿಸಲಾಗುವುದು.
-ಮಣಿಕಂಠ, ಎಇಇ, ತೋಟಗಾರಿಕಾ ವಿಭಾಗ, ಮಹಾನಗರಪಾಲಿಕೆ
* ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Surathkal: ಈಜಾಡಲು ತೆರಳಿದ್ದ ನಾಲ್ವರ ಪೈಕಿ ಮೂವರು ಸಮುದ್ರಪಾಲು
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Manipal: ಮಣ್ಣಪಳ್ಳ ಕೆರೆಯಲ್ಲಿ ಹೇಳ್ಳೋರಿಲ್ಲ, ಕೇಳ್ಳೋರಿಲ್ಲ!
Mangaluru: ನಿರ್ವಹಣೆ ಇಲ್ಲದೆ ಆಕರ್ಷಣೆ ಕಳೆದುಕೊಂಡ ಜಿಂಕೆ ವನ
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.