ಮೈಸೂರು: ಮತ್ತೆ 22 ಮಂದಿಗೆ ಸೋಂಕು
Team Udayavani, Jun 26, 2020, 5:54 AM IST
ಮೈಸೂರು: ಜಿಲ್ಲೆಯಲ್ಲಿ ಗುರುವಾರ 8 ತಿಂಗಳ ಮಗು ಸೇರಿ 22 ಮಂದಿಗೆ ಸೋಂಕು ದೃಢಪಟ್ಟಿದ್ದರೆ, ಕೋವಿಡ್ 19ಗೆ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಕಳೆದೊಂದು ವಾರದಲ್ಲಿ ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಸಾಗಿದ್ದು, ಪ್ರತಿದಿನವೂ ಹೊಸ ಪ್ರಕರಣ ದಾಖಲಾಗುತ್ತಲೇ ಇದೆ.
ಗುರುವಾರ ಪತ್ತೆಯಾದ ಪ್ರಕರಣಗಳಲ್ಲಿ 13 ಮಂದಿಗೆ ಸೋಂಕಿನ ಲಕ್ಷಣಗಳಿದ್ದರೆ, ಉಳಿದ 12 ಮಂದಿಗೆ ಸೋಂಕಿನ ಲಕ್ಷಣಗಳಿರಲಿಲ್ಲ. ಸೋಂಕಿತರಲ್ಲಿ ಬಹುತೇಕರು ಬೆಂಗಳೂರಿನಿಂದ ವಾಪಸಾದವರಾಗಿದ್ದಾರೆ. ಹೊಸ 22 ಪ್ರಕರಣಗಳಿಂದಾಗಿ ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ 220ಕ್ಕೇರಿದೆ. ಜೊತೆಗೆ 5 ಮಂದಿ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ 83ಕ್ಕೇರಿದೆ. ಇದುವರೆಗೆ 137 ಮಂದಿ ಗುಣಮುಖರಾಗಿದ್ದಾರೆ.
8 ತಿಂಗಳ ಮಗುವಿಗೂ ಸೋಂಕು: ಪಿ 9560 ಪ್ರಾಥಮಿಕ ಸಂಪರ್ಕ ಹೊಂದಿದ್ದ ನಜರ್‌ಬಾದ್‌ನ ಪಾಪರಾಂ ರಸ್ತೆಯ 7 ವರ್ಷದ ಬಾಲಕನಿಗೆ ಪಾಸಿಟಿವ್ ಆಗಿದೆ. ಪಿ 9758 ಪ್ರಾಥಮಿಕ ಸಂಪರ್ಕದಿಂದಾಗಿ ದಟ್ಟಗಳ್ಳಿಯ 8 ತಿಂಗಳ ಮಗುವಿಗೂ ಸೋಂಕು ದೃಢಪಟ್ಟಿದೆ. ನಂಜನಗೂಡಿನ 62 ವರ್ಷದ ಪುರುಷನಿಗೆ ಜ್ವರ, ಉಸಿರಾಟದ ಸಮಸ್ಯೆಯಿಂದಾಗಿ ಸೋಂಕು ಪತ್ತೆಯಾಗಿದೆ.
ಉದಯಗಿರಿಯ 48 ವರ್ಷದ ಮಹಿಳೆ ಬೆಂಗಳೂರಿನ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ವೀರನಗೆರೆಯ 28 ವರ್ಷದ ಯುವಕನಿಗೆ ಸೋಂಕು ತಗುಲಿದ್ದು, ಈತನ ಟ್ರಾವೆಲ್ ಹಿಸ್ಟರಿ ಕಲೆಹಾಕಲಾಗುತ್ತಿದೆ. ತಿ.ನರಸೀಪುರ ಬಳಿಯ ಕುರುಬೂರು ಗ್ರಾಮದ 45 ವರ್ಷದ ಪುರುಷ ಹಾಗೂ ರಾಜೀವ್‌ನಗರದ 38 ವರ್ಷದ ಪುರುಷರು ಬೆಂಗಳೂರಿನಿಂದ ವಾಪಸಾಗಿದ್ದು, ಈ ಇಬ್ಬರಿಗೂ ಸೋಂಕು ದೃಢಪಟ್ಟಿದೆ.
ನಂಜನಗೂಡಿನವರೇ ಅಧಿಕ: ನಂಜನಗೂಡು ಠಾಣೆಯ 41 ವರ್ಷದ ಮುಖ್ಯಪೇದೆ, 45, 24 ಹಾಗೂ 22 ವರ್ಷದ ಪುರುಷರಿಗೆ ಹಾಗೂ 24 ವರ್ಷದ ಮಹಿಳೆಗೆ ಸೋಂಕು ಹರಡಿದೆ. ಚಾಮರಾಜನಗರಕ್ಕೆ ತೆರಳಿದ್ದ 21 ವರ್ಷದ ಯುವತಿ, ಬನ್ನೂರಿನ 28 ವರ್ಷದ ಮಹಿಳೆ, ದೇವರಾಜ ಮೊಹಲ್ಲಾದ 1 ವರ್ಷದ ಗಂಡು ಮಗು,
ನಂಜನಗೂಡಿನ ನೀಲಕಂಠನಗರದ 47 ವರ್ಷದ ಪುರುಷ, ರಾಮಸ್ವಾಮಿ ಲೇಔಟ್‌ನ 31 ಹಾಗೂ 32 ವರ್ಷದ ಪುರುಷರಿಗೆ ಸೋಂಕು ಪತ್ತೆಯಾಗಿದೆ. ಮೈಸೂರಿನ ದೇವೇಗೌಡ ವೃತ್ತದ 38 ವರ್ಷದ ಪುರುಷ, ಪಿರಿಯಾಪಟ್ಟಣದ ರಾವಂದೂರಿನ 25 ವರ್ಷದ ಪುರುಷ, ವಿಶ್ವೇಶ್ವರನಗರ 87 ವರ್ಷದ ಪುರುಷ, ಜಾಕಿ ಕ್ವಾಟ್ರಸ್‌ನ 21 ವರ್ಷದ ಯುವಕ ಕೋವಿಡ್ 19 ಸೋಂಕಿಗೆ ತುತ್ತಾಗಿದ್ದಾರೆ.
ಜಿಲ್ಲೆಯಲ್ಲಿ ಮೊದಲ ಬಲಿ
ಮೈಸೂರು/ಕೆ.ಆರ್‌ನಗರ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನಿಂದ ಕೆ.ಆರ್.ನಗರದ 87 ವರ್ಷದ ವೃದ್ಧರೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿ¨ªಾರೆ. ಇದು ಕೋವಿಡ್-19ರ ಸೋಂಕಿಗೆ ಜಿಲ್ಲೆಯಲ್ಲಿ ಸಂಭವಿಸಿದ ಮೊದಲ ಸಾವಾಗಿದೆ. ಈ ಮೊದಲು ಸೋಂಕಿನಿಂದ ಗುಣಮುಖರಾದ ವ್ಯಕ್ತಿಯೊಬ್ಬರು ಮೇ ತಿಂಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದ ಸ್ವಲ್ಪ ದಿನಗಳ ಬಳಿಕ ಮೃತಪಟ್ಟಿದ್ದರು. ಕೆ.ಆರ್ .ನಗರದ ಈ ವ್ಯಕ್ತಿ ಮೂರು ದಿನಗಳ ಹಿಂದೆ ಉಸಿರಾಟದ ತೊಂದರೆಯಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.