ಮೈಸೂರು :ಆಕರ್ಷಕ ಕಲಾಕೃತಿಗಳನ್ನು ಒಳಗೊಂಡ 3 ಆನೆದಂತ ವಶ
Team Udayavani, Dec 25, 2020, 3:59 PM IST
ಮೈಸೂರು: ಆನೆ ದಂತದಲ್ಲಿ ಕಲಾಕೃತಿ ಕೆತ್ತನೆ ಮಾಡಿ ಮಾರಾಟಕ್ಕೆ ಮುಂದಾಗಿದ್ದ ಆರೋಪಿಗಳನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಗುರುವಾರ ಬಂಧಿಸಿದ್ದಾರೆ.
ನಾಯ್ಡು ನಗರದ ನಿವಾಸಿಗಳಾದ ಮನೋಹರ್ (40), ಸುಮಂತ್ (26) ಹಾಗೂ ಕೊಡಗು ಜಿಲ್ಲೆಯ ಸೋಮವಾರಪೇಟೆ ನಿವಾಸಿ ಶಿವದಾಸ್ (55) ಬಂಧಿತರು. ಆರೋಪಿಗಳಿಂದ ಕಲಾಕೃತಿಗಳನ್ನು ಒಳಗೊಂಡಿರುವ ಎರಡು ಬೃಹತ್ ಹಾಗೂ ಒಂದು ಸಣ್ಣ ಆನೆ ದಂತ ಮತ್ತು ಕೃತ್ಯಕ್ಕೆ ಬಳಕೆ ಮಾಡಿದ ಆಲ್ಟೋ ಕಾರ್, ಬೈಕ್ ವಶಕ್ಕೆ ಪಡೆಯಲಾಗಿದೆ. ವಿಗ್ರಹ ರೀತಿ ಇರುವ ಕೆತ್ತನೆಯ ಆನೆ ದಂತವನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಸಂದರ್ಭ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಮಾಲು ಸಹಿತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:ನೆನಪಿನ ಶಕ್ತಿಯ ಮೂಲಕ ದಾಖಲೆ ಬರೆದ ತಾನೀಶ್
ಎರಡು ಬೃಹತ್ ದಂತಗಳಲ್ಲಿ ವಿವಿಧ ವಿಗ್ರಹ ರೀತಿ ಆಕರ್ಷಕ ಕಲಾಕೃತಿಗಳನ್ನು ಕೆತ್ತಲಾಗಿದ್ದು, ಮತ್ತೊಂದು ಸಣ್ಣ ದಂತದಲ್ಲಿ ಕೊಳಲು ನುಡಿಸುತ್ತಿರುವ ಕೃಷ್ಣನ ಕಲಾಕೃತಿಯನ್ನು ಕೆತ್ತನೆ ಮಾಡಲಾಗಿದೆ. ಎರಡೂ ದಂತಗಳು ಒಂದೂವರೆ ಅಡಿ ಎತ್ತರವಾಗಿದ್ದು, ಮತ್ತೊಂದು ದಂತ ಒಂದು ಅಡಿ ಎತ್ತರವಿದೆ. ದಂತದ ಕೆತ್ತನೆ ಅತ್ಯಂತ ಆಕರ್ಷಕವಾಗಿದೆ. ನುರಿತ ಕಲಾವಿದರೆ ಈ ಕೆತ್ತನೆಯನ್ನು ಮಾಡಿದ್ದಾರೆ ಎಂಬ ಖಚಿತ ಮಾಹಿತಿಯಿದ್ದು, ಕಲಾವಿದರ ಶೋಧಕ್ಕೆ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಲೆ ಬೀಸಿದ್ದಾರೆ. ಇದು ಅತ್ಯಂತ ಹಳೆಯದಾದ ಆನೆ ದಂತವಾಗಿದ್ದು, ಹಲವಾರು ವರ್ಷಗಳಿಂದ ಮನೆಯಲ್ಲಿಯೇ ಇತ್ತು ಎಂದು ಆರೋಪಿಗಳು ಪ್ರಾಥಮಿಕ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರಿ ದಳದ ಡಿಸಿಎಫ್ ಎ.ಟಿ.ಪೂವಯ್ಯ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರ್‌ಎಫ್ ಎಸ್.ವಿವೇಕ್, ಡಿಆರ್‌ಎಫ್‌ಒ ಗಳಾದ ಸುಂದರ್, ಪ್ರಮೋದ್, ಲಕ್ಷ್ಮೀಶ್, ಸ್ನೇಹ, ಮೇಘನ, ನಾಗರಾಜ್, ಸಿಬ್ಬಂದಿ ಚೆನ್ನಬಸಪ್ಪ, ಮಹಂತೇಶ್, ಶರಣಪ್ಪ, ಗೋವಿಂದು, ವಿರೂಪಾಕ್ಷ, ರವಿಕುಮಾರ್, ರವಿನಂದನ್ ಚಾಲಕರಾದ ಪುಟ್ಟಸ್ವಾಮಿ, ಮಧು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.