ಮೈಸೂರು: 51 ಮಂದಿಗೆ ಸೋಂಕು
Team Udayavani, Jul 2, 2020, 5:21 AM IST
ಮೈಸೂರು: ಜಿಲ್ಲೆಯಲ್ಲಿ ಮೊದಲ ಬಾರಿಗೆ 51 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 321ಕ್ಕೇರಿದೆ. ಈವರೆಗೂ ಜಿಲ್ಲೆಯಲ್ಲಿ ಪ್ರತಿದಿನ ಹೊಸ ಪ್ರಕರಣ ದಾಖಲಾದರೂ 30ರ ಗಡಿ ದಾಟಿರಲಿಲ್ಲ. ಆದರೆ ಬುಧವಾರ ಒಂದೇ ದಿನ 51 ಮಂದಿಗೆ ಪಾಸಿಟಿವ್ ಆಗಿರುವುದು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿಸಿದೆ. 13 ಮಂದಿ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಗುಣಮುಖರಾದವರ ಸಂಖ್ಯೆ 191ಕ್ಕೇರಿದೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 127ಕ್ಕೆ ಏರಿಕೆಯಾಗಿದ್ದು, ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಸೋಂಕಿನ ಪ್ರಕರಣಗಳಿಂದಾಗಿ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.
21 ಕೆಎಸ್‌ಆರ್‌ಪಿ ಸಿಬ್ಬಂದಿ: ಬುಧವಾರ ದಾಖಲಾದ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 20, ಬೆಂಗಳೂರಿನ ಪ್ರವಾಸದ ಹಿನ್ನೆಲೆ ಹೊಂದಿರುವ 21 ಕೆಎಸ್‌ಆರ್‌ಪಿ ಪೊಲೀಸ್ ಸಿಬ್ಬಂದಿ, ಅಂತಾರಾಜ್ಯ ಪ್ರವಾಸದ ಹಿನ್ನೆಲೆ ಹೊಂದಿರುವ ಓರ್ವ, ಅಂತರಜಿಲ್ಲಾ ಪ್ರವಾಸ ಮಾಡಿದ್ದ ಮೂವರು ಹಾಗೂ 6 ಐಎಲ್‌ಐ ಪ್ರಕರಣಗಳಾಗಿವೆ. ಸೋಂಕಿತರಲ್ಲಿ ಕೆಎಎಸ್ ಅಧಿಕಾರಿಯ ಮಗಳು ಹಾಗೂ 2 ವರ್ಷದ ಮಗುವೂ ಸೇರಿದೆ.
ಸೋಂಕಿತರೆಲ್ಲರೂ ಕ್ವಾರಂಟೈನ್‌ನಲ್ಲಿದ್ದರು. ಹೀಗಾಗಿ ಹೆಚ್ಚಿನ ಆತಂಕ ಪಡುವ ಅಗತ್ಯ ಇಲ್ಲ. ಎನ್.ಆರ್.ಮೊಹಲ್ಲಾದ ಕೆಸರೆಯ ಕೆಇಬಿ ವಸತಿಗೃಹ, ಪಿರಿಯಾಪಟ್ಟಣದ ಜ್ಯೋತಿನಗರದಲ್ಲಿ 2, ವಿಶ್ವೇಶ್ವರನಗರ ತಪೋವನ ಅಪಾರ್ಟ್‌ಮೆಂಟ್‌ನಲ್ಲಿ 6, ಯಾದವಗಿರಿ 1ನೇ ಮುಖ್ಯ ರಸ್ತೆ, ಕ್ರಿಶ್ಚಿಯನ್ ಕಾಲನಿ ಎರಡನೇ ಹಂತ, ರಜನಿ ನಗರ್, ಕುವೆಂಪುನಗರ 1ನೇ ಕ್ರಾಸ್, ರಾಜೀವ್‌ನಗರದ ಎಂಎಂಸಿ ಪದವಿಪೂರ್ವ ಪುರುಷರ ಹಾಸ್ಟೆಲ್‌ನಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.
ಕೋವಿಡ್ ಆಸ್ಪತ್ರೆಗೆ ದಾಖಲು: ನಂಜನಗೂಡು ತಾಲೂಕಿನ ಹುರ ಗ್ರಾಮದಲ್ಲಿ 3, ಚಾಮಲಾಪುರದಹುಂಡಿಯಲ್ಲಿ 5, ದೇವರಸನಹಳ್ಳಿ 1, ದೇವಿನಕೇರಿ ಗ್ರಾಮದಲ್ಲಿ 1 ಹುಣಸೂರಿನ ದಳಲಕೊಪ್ಪಲು, ಕೆ.ಆರ್.ನಗರದ ಸಾಲಿಗ್ರಾಮ ಮತ್ತು ವಾಸು ಲೇಔಟ್ ಹಾಗೂ ಮೈಸೂರಿನ ರಾಮಕೃಷ್ಣನಗರದಲ್ಲಿ ತಲಾ ಒಂದು ಪಾಸಿಟಿವ್ ಪ್ರಕರಣ ದಾಖಲಾಗಿದೆ. ಪಶ್ಚಿಮ ಬಂಗಾಳದಿಂದ ವಾಪಸ್ಸಾಗಿದ್ದ ಹೆಬ್ಟಾಳದ ಬಸವನಗುಡಿಯ ವ್ಯಕ್ತಿಗೂ ಸೋಂಕು ತಗುಲಿದೆ. ಸೋಂಕಿತರೆಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಈವರೆಗೆ 12622 ಮಂದಿಯನ್ನು ಕ್ವಾರಂಟೈನ್ ಮಾಡಿದ್ದು, 9603 ಮಂದಿ ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ. 2772 ಮಂದಿ 14 ದಿನಗಳ ಕ್ವಾರಂಟೈನ್ ನಲ್ಲಿದ್ದರೆ, 120 ಮಂದಿ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದಾರೆ. 127 ಸಕ್ರಿಯ ಪ್ರಕರಣಗಳಲ್ಲಿ 126 ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ, ಓರ್ವ ಸೋಂಕಿತ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 20531 ಸ್ಯಾಂಪಲ್ ಗಳನ್ನು ಪರೀಕ್ಷೆ ಮಾಡಿದ್ದು, 20210 ನೆಗೆಟಿವ್ ಬಂದಿದೆ. 321 ಪಾಸಿಟೀವ್ ಆಗಿದ್ದು, 191 ಮಂದಿ ಗುಣಮುಖರಾಗಿದ್ದಾರೆ. ಮೂವರು ಮೃತಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belthangady: ಕ್ರಿಸ್ಮಸ್ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.