ಮೈಸೂರು ಜಿಲ್ಲೆ ಸಂಪೂರ್ಣ ಸ್ತಬ್ಧ
Team Udayavani, May 25, 2020, 6:45 AM IST
ಮೈಸೂರು: 4ನೇ ಹಂತದ ಲಾಕ್‌ಡೌನ್ ಸಡಿಲಿಕೆಯ ನಡುವೆ ಪ್ರತಿ ಭಾನುವಾರ ಸಂಪೂಣ ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಿದ ಹಿನ್ನೆಲೆ ಮೈಸೂರು ಭಾನುವಾರ ಸ್ತಬಟಛಿವಾಗಿತ್ತು. ಶನಿವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 7ರವರೆಗೆ ನಗರದಲ್ಲಿ ಕರ್ಫ್ಯೂ ಜಾರಿಯಾದ ಹಿನ್ನೆಲೆ ಅಗತ್ಯ ವಸ್ತುಗಳ ಮಾರಾಟ ಹೊತರುಪಡಿಸಿದಂತೆ ಉಳಿದ ಎಲ್ಲಾ ವ್ಯಾಪಾರ ವಹಿವಾಟು ಬಂದ್ ಆಗಿದ್ದವು.
ಸರ್ಕಾರ ಭಾನುವಾರ ಕಪ್ಯೂì ಮಾದರಿಯ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ವಾರದಿಂದ ಜನಜಂಗುಳಿಯಿಂ ದ ಕೂಡಿದ್ದ ಅರಮನೆ ನಗರಿ ಮೈಸೂರಿನಲ್ಲಿ ವಾರದ ರಜಾದಿನವಾದ ಭಾನುವಾರ ಬಿಕೋ ಎನ್ನುವ ವಾತಾವರಣ ನಿರ್ಮಾಣವಾಗಿತ್ತು. ನಗರದ ದೇವರಾಜ ಮಾರುಕಟ್ಟೆ ಸೇರಿದಂತೆ ಇತರೆಡೆ ಹೆಚ್ಚು ಮಂದಿ ವ್ಯಾಪಾರಸ್ಥರು, ಜನರು ಸುಳಿಯಲಿಲ್ಲ. ಜೊತೆಗೆ ನಗರದ ವಸ್ತುಪ್ರದರ್ಶನ ಆವರಣದಲ್ಲಿನ ಮಾರುಕಟ್ಟೆಯೂ ಖಾಲಿಯಾಗಿತ್ತು.
ಬೆಳಗ್ಗೆ ಕೇವಲ 1 ಗಂಟೆ ಮಾತ್ರ ವ್ಯಾಪಾರ ವಹಿವಾಟು ನಡೆಯಿತು. 7 ಗಂಟೆ ಆಗುತ್ತಿದ್ದಂತೆಯೇ ಸ್ವಯಂ ಪ್ರೇರಿತರಾಗಿ ಎಲ್ಲಾ ಅಂಗಡಿ, ಮುಂಗಟ್ಟು ಮುಚ್ಚಿ, ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದರು. ಭಾನುವಾರ ಸಾರ್ವಜನಿಕರ ಓಡಾಟ, ವಾಹನ ಸಂಚಾರಕ್ಕೆ ನಿಯಂತ್ರಣ ಹೇರಲಾಗಿತ್ತು. ಅಗತ್ಯ ವಸ್ತುಗಳಅಂಗಡಿ ಹೊರತುಪಡಿಸಿ ಇತರೆ ಅಂಗಡಿಗಳು ಬಂದ್ ಆಗಿದ್ದವು. ದಿನಸಿ ಅಂಗಡಿ, ಹಣ್ಣು, ತರಕಾರಿ ಅಂಗಡಿ, ಔಷಧ ಮತ್ತು ಮಾಂಸದಂಗಡಿಗೆ ವಿನಾಯಿತಿ ನೀಡಲಾಗಿತ್ತು.
ಉಳಿದಂತೆ ಯಾವುದೇ ಅಂಗಡಿ, ಮುಂಗಟ್ಟು ತೆರೆಯ ದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡರು. ನಗರದಲ್ಲಿ ವಾಹನ ಸಂಚಾರ ವಿರಳವಾಗಿತ್ತು. ನಗರದ ಎಲ್ಲಾ ರಸ್ತೆಗಳಲ್ಲು ಪೊಲೀಸರು ತಪಾಸಣೆ ನಡೆಸುವ ಮೂಲಕ ಅನಗತ್ಯವಾಗಿ ಓಡಾದಂತೆ ಎಚ್ಚರಿಸಿದರು. ಸರ್ಕಾರದ ಸೂಚನೆಯಂತೆ ನಗರ ಮತ್ತು ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಲ್ಲಿದ್ದು, ಸೋಮವಾರ ಬೆಳಗ್ಗೆ 7 ಗಂಟೆವರೆಗೂ ಇದೇ ಸ್ಥಿತಿ ಮುಂದುವರಿಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಚಿನ್ನದ ಸರ ಅಪಹರಿಸಿದ್ದ ಇಬ್ಬರು ಆರೋಪಿಗಳ ಬಂಧನ
Congress: ಜಮೀರ್ “ಕರಿಯ’ ಹೇಳಿಕೆ ಕುರಿತು ಶಿಸ್ತು ಸಮಿತಿಗೆ ವರದಿ ಕೊಟ್ಟರೆ ಕ್ರಮ: ಪರಂ
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Ullala Resort: ಮೃತ ಯುವತಿಯ ಕುಟುಂಬಸ್ಥರ ಆಕ್ರಂದನ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.