ಸಿಬ್ಬಂದಿಗೆ ಸೋಂಕು ಹಿನ್ನಲೆ ಮೈಸೂರು ಮನಪಾ ಸೀಲ್ ಡೌನ್: ಆಯುಕ್ತರಿಗೂ ಹೋಮ್ ಕ್ವಾರಂಟೈನ್
Team Udayavani, Jul 7, 2020, 12:12 PM IST
ಮೈಸೂರು: ಮಹಾನಗರ ಪಾಲಿಕೆ ಸಿಬ್ಬಂದಿಗೂ ಕೋವಿಡ್-19 ಸೋಂಕು ತಗುಲಿದ ಕಾರಣ ಒಂದು ದಿನ ಪಾಲಿಕೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಮಂಗಳವಾರ ಪಾಲಿಕೆ ಹೆಲ್ತ್ ಸೆಕ್ಷನ್ ಸಿಬ್ಬಂದಿಗೆ ಸೋಂಕು ದೃಢಪಟ್ಟ ಹಿನ್ನೆಲೆ ಪಾಲಿಕೆಯ ಆರೋಗ್ಯ ವಿಭಾಗ ಸೇರಿ ಎರಡು ದಿನ ಇಡೀ ಪಾಲಿಕೆಯೇ ಸೀಲ್ ಡೌನ್ ಮಾಡಲಾಗಿದ್ದು, ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಾಗುತ್ತಿದೆ.
ಘಟನೆ ಹಿನೆಲೆ ಪಾಲಿಕೆ ಸಿಬ್ಬಂದಿಯಲ್ಲಿ ಸೋಂಕು ಆತಂಕ ಹೆಚ್ಚಾಗಿದ್ದು, ಸೋಂಕಿತ ಸಿಬ್ಬಂದಿ ಜತೆಗೆ ನಿಕಟ ಸಂಪರ್ಕದಲ್ಲಿದ್ದವರಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ.
ಪಾಸಿಟಿವ್ ಬಂದ ಪಾಲಿಕೆ ಸಿಬ್ಬಂದಿಯಿಂದ ಆಯುಕ್ತರ ಭೇಟಿಯಾಗಿರುವ ಕಾರಣ ಆಯುಕ್ತರನ್ನು ಹೋಮ್ ಕ್ವಾರೈಂಟೈನ್ ಮಾಡಲಾಗಿದೆ.
ಸ್ಯಾನಿಟೈಸ್ ಮಾಡಿದ ಬಳಿಕ ಎರಡು ದಿನ ಪಾಲಿಕೆ ಸೀಲ್‌ಡೌನ್ ಆಗಿಲಿದ್ದು 30 ಮಂದಿಯ ಸ್ವಾಬ್ ಟೆಸ್ಟ್ ಮಾಡಿಸಲಾಗಿದೆ. ನಾಳೆ ಅಥವಾ ನಾಳಿದ್ದು ಅವರ ವರದಿ ಬರಲಿದೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.