ನಿರ್ವಹಣೆ ಕೊರತೆಯಿಂದ ಪಾಳುಬಿದ್ದ ನೆಹರು ಪಾರ್ಕ್
ಪಟ್ಟಣದ ಹೃದಯ ಭಾಗ ಹಳೇ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಉದ್ಯಾನವನ
Team Udayavani, Oct 20, 2022, 4:20 PM IST
ಗುಂಡ್ಲುಪೇಟೆ: ಪಟ್ಟಣದ ಹೃದಯ ಭಾಗ ಹಳೇ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತ್ತಿರುವ ನೆಹರು ಪಾರ್ಕ್ ನಿರ್ವಹಣೆ ಕೊರತೆಯಿಂದ ಪಾಳುಬಿದ್ದಿದ್ದು, ಪಾರ್ಕ್ ತುಂಬಾ ಗಿಡಗಂಟಿ ಗಳು ಬೆಳೆದು ವಿಷ ಜಂತುಗಳ ಆವಾಸಸ್ಥಾನವಾಗಿ ಮಾರ್ಪಾಡಾಗಿದೆ.
ಪಟ್ಟಣ ಪುರಸಭೆ ಆಡಳಿತ ಪ್ರತಿ ವರ್ಷದ ಬಜೆಟ್‌ನಲ್ಲಿ ಪಾರ್ಕ್ ನಿರ್ವಹಣೆಗೆ ಇಂತಿಷ್ಟು ಹಣ ಎಂದು ಮೀಸಲಿಡುತ್ತಿದ್ದರೂ ಸಹ ನೆಹರು ಪಾರ್ಕ್ ನಿರ್ವಹಣೆ ಮಾಡುವಲ್ಲಿ ಪುರಸಭೆ ಆಡಳಿತ ವರ್ಗ ಹಾಗೂ ಅಧಿಕಾರಿಗಳು ವರ್ಗದವರು ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಿದ್ದಲ್ಲಿ ಪಾರ್ಕ್ ನಿರ್ವಹಣೆಗೆಂದು ಮೀಸಲಿರಿ ಸಿದ ಹಣ ಏನಾಯಿತು ಎಂದು ಪಟ್ಟಣದ ನಿವಾಸಿಗಳು ಪ್ರಶ್ನಿಸಿದ್ದಾರೆ.
ಸದಾ ಬಾಗಿಲು ಮುಚ್ಚಿರುವ ಪಾರ್ಕ್: ಪಟ್ಟಣದ ಜನದಟ್ಟಣೆ ಪ್ರದೇಶವಾದ ಹಳೇ ಬಸ್ ನಿಲ್ದಾಣದಲ್ಲಿ ನೆಹರು ಪಾರ್ಕ್ ಇದ್ದು, ಪ್ರತಿನಿತ್ಯ ನೂರಾರು ಜನರು ಆಗಮಿಸುತ್ತಾರೆ. ಬಸ್‌ಗಾಗಿ ಕಾಯುವ ಕೆಲ ಮಂದಿ ವಿಶ್ರಾಂತಿಗಾಗಿ ಪಾರ್ಕ್ ಗೆ ತೆರಳು ಮನಸ್ಸು ಮಾಡಿ ದ್ದರೂ ಸಹ ಪಾರ್ಕ್ ಬಾಗಿಲು ಸದಾ ಮುಚ್ಚಿ ರುವ ಕಾರಣ ಪಾರ್ಕ್ ಒಳಗೆ ತೆರಳಲು ಸಾಧ್ಯವಾಗುತ್ತಿಲ್ಲ. ಇದ ರಿಂದ ಪಾರ್ಕ್ ಇದ್ದರೂ ಸಹ ಜನರ ಬಳಕೆಗೆ ಸಿಗದಂತಾಗಿದೆ.
ಪಾರ್ಕ್‌ನಲ್ಲಿ ಸೂಕ್ತ ಆಸಗಳ ವ್ಯವಸ್ಥೆ ಇಲ್ಲ: ಪಾರ್ಕ್ ನಿರ್ಮಾಣವಾಗಿ ಸುಮಾರು 20 ವರ್ಷ ಕಳೆದಿದ್ದರೂ ಸಹ ಇಲ್ಲಿಯ ತನಕ ಪಾರ್ಕ್ ನಲ್ಲಿ ಸೂಕ್ತ ಆಸನಗಳ ವ್ಯವಸ್ಥೆಯನ್ನು ಪುರಸಭೆ ಅಧಿಕಾರಿಗಳು ಕಲ್ಪಿಸಿಲ್ಲ. ಇದು ಪುರಸಭೆ ಆಡಳಿತದ ವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಸ್ಥಳೀಯ ಮಾದಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಕೆಟ್ಟು ನಿಂತ ಗಡಿಯಾರ: ಕಳೆದ ಕೆಲ ವರ್ಷದ ಹಿಂದೆ ಪಾರ್ಕ್‌ನಲ್ಲಿ ನಿರ್ಮಾಣ ಮಾಡಲಾದ ದೊಡ್ಡ ಗಡಿ ಯಾರ ಹಲವು ತಿಂಗಳಿಂದ ನಿರ್ವಹಣೆ ಕೊರತೆಯಿಂದ ಕೆಟ್ಟು ನಿಂತಿದೆ. ಈ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದರೆ ಮಳೆ, ಗಾಳಿ, ಬಿಸಿಲು ಎಂಬಿತ್ಯಾದಿ ಸಬೂಬು ಹೇಳಿ ಗಡಿಯಾರ ದುರಸ್ತಿ ಮಾಡದೆ ಅಧಿ ಕಾರಿಗಳು ಕಾಲ ಕಳೆಯುತ್ತಿದ್ದಾರೆ ಎಂದು ವಾರ್ಡ್ ನಿವಾಸಿಗರು ದೂರಿದರು.
ಕೆಟ್ಟು ನಿಂತ ಕುಡಿಯುವ ನೀರಿನ ಘಟಕ
ಸುಮಾರು 15 ವರ್ಷಗಳ ಹಿಂದೆ ರಾಜಸ್ಥಾನಿ ಸಮಾಜದವರು ಸಾರ್ವಜನಿಕರಿಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಪಾರ್ಕ್ ಎಡಭಾಗದಲ್ಲಿ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿ ಪುರಸಭೆಗೆ ಹಸ್ತಾಂತರ ಮಾಡಿದ್ದರು. ಆದರೆ ನಿರ್ವಹಣೆ ಕೊರತೆಯಿಂದ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದ್ದು, ಜನರು ಸುತ್ತಮುತ್ತಲಿನ ಹೋಟೆಲ್‌ಗಳಿಗೆ ತೆರಳಿ ನೀರು ಕುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶೀಘ್ರವಾಗಿ ನೀರಿನ ಘಟಕ ದುರಸ್ತಿ ಪಡಿಸಿ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಟೋ ಚಾಲಕ ಶ್ರೀನಿವಾಸ್ ಮನವಿ ಮಾಡಿದರು.
ನೆಹರು ಪಾರ್ಕ್‌ನಲ್ಲಿ ಬೆಳೆದು ನಿಂತಿರುವ ಗಿಡಗಳನ್ನು ತೆರವುಗೊಳಿಸಿ, ಸೂಕ್ತ ಆಸನಗಳ ವ್ಯವಸ್ಥೆ ಕಲ್ಪಿಸುವ ಜೊತೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗುವುದು. ಕುಡಿಯುವ ನೀರಿನ ಘಟಕವನ್ನೂ ದುರಸ್ತಿಗೊಳಿಸಲು ಕ್ರಮ ವಹಿಸಲಾಗುವುದು. ● ಹೇಮಂತ್ ರಾಜ್, ಮುಖ್ಯಾಧಿಕಾರಿ, ಪುರಸಭೆ
ಪಾರ್ಕ್ ನಿರ್ವಹಣೆ ಸೇರಿದಂತೆ ಇನ್ನಿತರ ಹಲವು ಸಮಸ್ಯೆಗಳ ಕುರಿತು ಮುಖ್ಯಾಧಿಕಾರಿ ಗಮನಕ್ಕೆ ತಂದರೂ ಸಹ ಅವರು ಆಡಳಿತ ಪಕ್ಷದ ಕೈಗೊಂಬೆಯಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಮುಖ್ಯಾಧಿಕಾರಿ ಬೇಜವಾಬ್ದಾರಿತನದಿಂದ ಪಟ್ಟಣದ ಅಭಿವೃದ್ಧಿ ಕುಂಠಿತವಾಗುತ್ತಿದೆ. ● ಎನ್.ಕುಮಾರ್, ಪುರಸಭೆ ಸದಸ್ಯ
● ಬಸವರಾಜು ಎಸ್.ಹಂಗಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.