![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, May 27, 2020, 6:37 AM IST
ಹುಣಸೂರು: ನಾಗರಹೊಳೆ ಅಭಯಾರಣ್ಯ ದಂಚಿನಲ್ಲಿ ಹುಲಿ ಕುರಿ ಮೇಯಿಸುತ್ತಿದ್ದ ವೃದ್ಧನನ್ನು ಹೊತ್ತೂಯ್ದಿದ್ದು, ಮಂಗಳವಾರ ವೃದ್ಧರ ಮುಂಗೈ, ತಲೆ ಪತ್ತೆಯಾಗಿದೆ. ತಾಲೂಕಿನ ಹನಗೋಡು ಸಮೀಪದ ನೇರಳಕುಪ್ಪೆ ಬಿ. ಹಾಡಿ ನಿವಾಸಿ ಜಗದೀಶ್ (65) ಹುಲಿ ದಾಳಿಗೆ ಬಲಿಯಾದ ದುರ್ದೈವಿ. ಸೋಮವಾರ ಸಂಜೆ ಹೊತ್ತೂಯ್ದಿದ್ದ ಹುಲಿ, ವೃದ್ಧನ ತಲೆ, 2 ಮುಂಗೈ ಹೊರತು ಪಡಿಸಿ ದೇಹದ ಉಳಿದ ಭಾಗವನ್ನು ಸಂಪೂರ್ಣ ತಿಂದಿರುವ ಶಂಕೆ ವ್ಯಕ್ತವಾಗಿದೆ.
ನಾಪತ್ತೆಯಾದ ಸ್ಥಳದಿಂದ 100 ಮೀಟರ್ ಅಂತರದಲ್ಲಿ ಜಗದೀಶ್ ತಲೆ, ಮುಂಗೈ ಪತ್ತೆಯಾಗಿದೆ. ಇದರಿಂದ ನೇರಳಕುಪ್ಪೆ ಬಿ.ಹಾಡಿ ಸೇರಿದಂತೆ ಸುತ್ತಮುತ್ತಲಿನ ಹಾಡಿ ಹಾಗೂ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು, ಕುರಿಗಾಹಿಯ ಬಲಿ ಪಡೆದ ವ್ಯಾಘ್ರನನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ. ಹಿನ್ನೆಲೆ: ನೇರಳಕುಪ್ಪೆ ಬಿ.ಹಾಡಿ ನಿವಾಸಿ ಜಗದೀಶ್ ಇಳಿ ವಯಸ್ಸಲ್ಲೂ 10 ಮೇಕೆ (ಆಡು), 4 ಕುರಿ ಸಾಕಿದ್ದು, ನಿತ್ಯ ಹಾಡಿಯಿಂ ದ ಕಾಡಂಚಿನ ಗ್ರಾಮದ ಸುತ್ತಲಿನ ಖಾಲಿ ಜಾಗದಲ್ಲಿ ಮೇಯಿಸಲು ಕರೆದೊ ಯ್ಯು ತ್ತಿದ್ದರು. ಎಂದಿನಂತೆ ಸೋಮವಾರವೂ ಮೇಕೆ, ಕುರಿ ಮೇಯಿಸಲು ಕಾಡಂಚಿಗೆ ಹೋಗಿದ್ದು, ನಾಪತ್ತೆಯಾಗಿದ್ದರು.
ಆದರೆ, ಮೇಕೆ, ಕುರಿಗಳು ಮಾತ್ರ ಮನೆಗೆ ವಾಪಸ್ಸಾಗಿ ದ್ದವು. ಇದರಿಂದ ಗಾಬರಿಗೊಂಡ ವೃದ್ಧ ಜಗದೀಶ್ ಪತ್ನಿ ಗಂಗೆ ಹಾಡಿ ನಿವಾಸಿಗಳಿಗೆ ತಿಳಿಸಿದ್ದರು. ಜಗದೀಶ್‌ರನ್ನು ಹುಡುಕಾಡಲು ತೆರಳಿದ್ದಾಗ ಹಂದಿಹಳ್ಳ ಎಂಬಲ್ಲಿ ವೃದ್ಧ ಜಗದೀಶ್ ರಕ್ತಸಿಕ್ತ ಹರಿದ ಬಟ್ಟೆ, ಛತ್ರಿ ಗೋಚರಿಸಿತ್ತು. ಇದರಿಂದ ಹುಲಿ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ, ಪೊಲೀಸ್ ಸಿಬ್ಬಂದಿ ಆಗಮಿಸಿ ನಾಪತ್ತೆಯಾಗಿದ್ದ ವೃದ್ಧ ಜಗದೀಶ್ ಪತ್ತೆಗಾಗಿ 6 ಸಾಕಾನೆಗಳೊಂದಿಗೆ ಕಾರ್ಯಾಚರಣೆ ಆರಂಭಿಸಿದ್ದರು. ಕತ್ತಲು ಹಾಗೂ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಹಿನ್ನಡೆಯಾಗಿತ್ತು.
ರುಂಡ, ಮುಂಗೈ ಪತ್ತೆ: ಅರಣ್ಯ ಸಿಬ್ಬಂದಿ ಸಾಕಾನೆಗಳಾದ ಬಲರಾಮ, ಗಣೇಶ, ಚಂದ್ರ, ಭೀಮ, ವಿಜಯಲಕ್ಷ್ಮೀ ಆನೆಯೊಂದಿಗೆ ಕಾರ್ಯಾಚರಣೆ ಆರಂಭಿಸಿದರು. ಛತ್ರಿ, ಬಟ್ಟೆ, ಚಪ್ಪಲಿ ದೊರೆತ ಸ್ಥಳ ಆಧರಿಸಿ ವಿವಿಧ ದೃಷ್ಟಿಕೋನದಲ್ಲಿ ಕಾರ್ಯಾಚರಣೆ ನಡೆಸಿ ದರೂ ನಾಪತ್ತೆಯಾಗಿದ್ದ ವೃದ್ಧರ ಬಗ್ಗೆ ಮಾಹಿತಿ ದೊರೆಯಲಿಲ್ಲ. ಇದರಿಂದ ಅಸಮಾ ದಾನಗೊಂಡ ಹಾಡಿ ನಿವಾಸಿಗಳು ಶೋಧನಾ ಕಾರ್ಯದಲ್ಲಿ ಪಾಲ್ಗೊಳ್ಳಲು ಮುಂದಾದರು. ಈ ವೇಳೆ ಪೊದೆಯಲ್ಲಿ ಜಗದೀಶ್ ತಲೆ, ಮುಂಗೈ ಮಾತ್ರ ಸಿಕ್ಕಿದೆ. ವಿಷಯ ತಿಳಿದ ಅರಣ್ಯ, ಪೊಲೀಸ್ ಸಿಬ್ಬಂದಿ ಸ್ಥಳವನ್ನು ಮಹಜರು ಮಾಡಿದ್ದಾರೆ. ಅಲ್ಲದೇ, ದೇಹದ ಇನ್ನಿತರ ಅಂಗಾಂಗ ಸಿಗಬಹು ದೆಂದು ಶೋಧ ಕಾರ್ಯ ಮುಂದುವರಿಸಿ ದರೂ ಫಲ ನೀಡಲಿಲ್ಲ. ಹನಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿ ಕಾರಿ ಡಾ. ಜೋಗೇಂದ್ರನಾಥ್ ಅವರನ್ನು ಕರೆಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಶಾಸಕರಿಂದ ನೆರವು: ಶಾಸಕ ಎಚ್.ಪಿ. ಮಂಜು ನಾಥ್ ಮೃತರ ಪತ್ನಿ, ಹಾಡಿ ನಿವಾಸಿ ಗಳಿಗೆ ಸಾಂತ್ವನ ಹೇಳಿದರು. ಬಳಿಕ ಅಂತ್ಯಕ್ರಿಯೆಗೆ 10 ಸಾವಿರ ರೂ. ನೆರವು ನೀಡಿದರು. ಮೈಸೂರು ವೃತ್ತದ ಸಿಸಿಎಫ್ ಟಿ.ಹೀರಾಲಾಲ್, ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಮಹೇಶ್‌ಕುಮಾರ್, ಉಪವಿಭಾಗಾ ಧಿಕಾರಿ ವೀಣಾ, ತಹಶೀಲ್ದಾರ್ ಬಸವರಾಜು, ವೈಲ್ಡ್‌ಲೈಫ್ ವಾರ್ಡನ್ ಕೃತಿಕಾ ಆಲನಹಳ್ಳಿ, ಡಿವೈಎಸ್ಪಿ ಸುಂದರರಾಜ್, ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಸಿ.ಪೂವಯ್ಯ, ಎಸಿಎಫ್ ಪ್ರಸನ್ನಕುಮಾರ್, ಸಬ್‌ಇನ್ಸ್ ಪೆಕ್ಟರ್ ಶಿವಪ್ರಕಾಶ್, ಆರ್‌ಎಫ್ಒ ಹನು ಮಂತರಾಜು, ರವೀಂದ್ರ ಇದ್ದರು.
ದೃಷ್ಟಿ ಹೀನ ಪತ್ನಿಗೆ ಆಧಾರವಾಗಿದ್ದರು: ಹುಲಿ ದಾಳಿಗೆ ತುತ್ತಾದ ಜಗದೀಶ್ ನೇರಳೆಕುಪ್ಪೆ ಬಿ. ಹಾಡಿಯಲ್ಲಿ ಪತ್ನಿ ಗಂಗೆಯೊಂದಿಗೆ ವಾಸಿಸುತ್ತಿದ್ದರು. ಕಳೆದ 5 ವರ್ಷದ ಹಿಂದೆ ಪತ್ನಿ ಗಂಗೆ ಅವರಿಗೆ 2 ಕಣ್ಣುಗಳ ದೃಷ್ಟಿ ಕಳೆದುಕೊಂಡಿದ್ದಾರೆ. ಇದರಿಂದ ವೃದ್ದ್ಯಾಪ್ಯದಲ್ಲೂ ಪತ್ನಿಗೆ ಊರುಗೋಲಾಗಿ ಜಗದೀಶ್ ಜೀವನ ಸಾಗಿಸುತ್ತಿದ್ದರು. ಆದರೆ, ಪತಿ ಹುಲಿ ದಾಳಿಗೆ ತುತ್ತಾಗಿರುವುದರಿಂದ ಅವರ ಪತ್ನಿ ಏಕಾಂಗಿಯಾಗಿದ್ದಾರೆ.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
You seem to have an Ad Blocker on.
To continue reading, please turn it off or whitelist Udayavani.