ಸ್ಪರ್ಧಾತ್ಮಕ ಪರೀಕ್ಷೆಗೂ ಆನ್‌ಲೈನ್ ತರಬೇತಿ
Team Udayavani, Jun 10, 2020, 5:34 AM IST
ಮೈಸೂರು: ಕೆ-ಸೆಟ್ ಅಭ್ಯರ್ಥಿಗಳಿಗೆ ಯಶಸ್ವಿಯಾಗಿ ಆನ್‌ಲೈನ್ ತರಬೇತಿ ನೀಡಿದ ಮುಕ್ತ ವಿಶ್ವವಿದ್ಯಾಲಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಆನ್‌ಲೈನ್ ತರಬೇತಿಗೆ ಚಾಲನೆ ನೀಡಿದೆ. ಮುಕ್ತ ವಿವಿಯ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರದ ವತಿಯಿಂದ ಕೆಎಎಸ್ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಐವತ್ತು ದಿನಗಳ ಆನ್‌ಲೈನ್ ತರಬೇತಿಗೆ ಕೆಎಸ್‌ಒಯು ಸ್ಟುಡೆಂಟ್ ಆ್ಯಪ್ ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲ್ವೆ ಪೊಲೀಸ್ ಮಹಾ ನಿರೀಕ್ಷಕಿ ಡಿ.ರೂಪಾ ಮೌದ್ಗಿಲ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ನಾನು ಐಪಿಎಸ್ ಪರೀಕ್ಷೆ ಬರೆದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಐಎಎಸ್, ಐಪಿಎಸ್ ಬಗ್ಗೆ ತಿಳಿವಳಿಕೆ ಇರಲಿಲ್ಲ. ಆದರೆ ಈಗ ತುಂಬಾ ಬದಲಾಗಿದೆ. ಇಂಥ ಪರೀಕ್ಷೆಗೆ ತರಬೇತಿ ನೀಡಲು ವಿವಿಧ ಸಂಸ್ಥೆಗಳಿವೆ, ಆನ್‌ಲೈನ್ ವೇದಿಕೆಗಳಿವೆ. ಸದುಪಯೋಗ ಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಐಎಎಸ್, ಐಪಿಎಸ್ ಮತ್ತು ಕೆಎಎಸ್ ಮಾಡಬೇಕೆಂಬ ಗುರಿ ಹೊಂದಿರಬೇಕು.
ತಾಳ್ಮೆ, ಆತ್ಮವಿಶ್ವಾಸ ಮುಖ್ಯ. ಸಾಧನೆ, ಗುರಿ ಮುಟ್ಟುವುದು ಸುಲಭವಲ್ಲ. ತಪ್ಪಸ್ಸಿನಂತೆ ಓದಬೇಕು ಎಂದು ಹೇಳಿದರು. ಅಪರ ಪ್ರಾದೇಶಿಕ ಆಯುಕ್ತೆ ಕೆ.ಎಂ.ಗಾಯತ್ರಿ, ಮುಕ್ತ ವಿವಿ ಕುಲಪತಿ ಪ್ರೊ.ವಿದ್ಯಾಶಂಕರ್, ಕುಲಸಚಿವ ಪ್ರೊ. ಲಿಂಗರಾಜ ಗಾಂಧಿ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಸಂಯೋಜಕ ಜೈನಹಳ್ಳಿ ಸತ್ಯನಾರಾಯಣ ಗೌಡ, ಪ್ರವಾಸೋದ್ಯಮ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಡಾ.ಸೆಲ್ವ ಪಿಳ್ಳೆ ಅಯ್ಯಂಗಾರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.