ಅಕ್ರಮ ಪ್ರಯಾಣಕ್ಕೆ ವಿರೋಧ
Team Udayavani, May 18, 2020, 5:56 AM IST
ಎಚ್.ಡಿ.ಕೋಟೆ: ಗೂಡ್ಸ್ ವಾಹನದಲ್ಲಿ ಕೇರಳ ಮೂಲದ 24 ಮಂದಿ ಕೂಲಿ ಕಾರ್ಮಿಕರನ್ನು ರಾಜ್ಯದಿಂದ ಕೇರಳಕ್ಕೆ ತರಕಾರಿ ಸಾಗಣೆ ನೆಪದಲ್ಲಿ ಹೋಗುತ್ತಿದ್ದಾಗ ಗ್ರಾಪಂ ಅಧ್ಯಕ್ಷರ ತಂಡ ವಿರೋಧ ವ್ಯಕ್ತಪಡಿ, ವಾಪಸ್ ಕಳಿಸಿದರು.
ತಾಲೂಕಿನ ಗಡಿಭಾಗದ ಡಿ.ಬಿ.ಕುಪ್ಪೆ ಗ್ರಾಪಂ ಅಧ್ಯಕ್ಷ ತಿರುಪತಿ ಮತ್ತು ತಂಡ ಪಂಚಾಯ್ತಿ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ಇಲ್ಲ ಅನ್ನುವ ನಾಮಫಲಕವಿದ್ದ ಗೂಡ್ಸ್ ವಾಹನದಲ್ಲಿದ್ದ ಕೇರಳದ ಕಾರ್ಮಿಕನ್ನು ಕೆಳಗಿಳಿಸಿ, ಕೆಲವೇ ದೂರ ಕಾಲುನಡಿಗೆಯಲ್ಲಿ ಬಂದು ಕರ್ನಾಟಕ ರಾಜ್ಯದ ಗಡಿ ದಾಟುತ್ತಿದ್ದಂತೆಯೇ ಕೇರಳ ರಾಜ್ಯದಲ್ಲಿ ಅವರನ್ನು ಅವರ ಸ್ವಗ್ರಾಮಕ್ಕೆ ಕರೆದೊಯ್ಯುವ ಸಮಗ್ರ ಮಾಹಿತಿ ಪಡೆದುಕೊಂಡರು.
ತಾಲೂಕಿನ ಹಂಪಾಪುರದಲ್ಲಿ ಕೆಲಸ ಮಾಡುತ್ತಿದ್ದ ಕೇರಳಿಗರನ್ನು ಸ್ವಗ್ರಾಮಕ್ಕೆ ಹೋಗಲು ಸರ್ಕಾರದ ಅನುಮತಿ ಪಡೆಯದೇ ಗೂಡ್ಸ್ ವಾಹನದಲ್ಲಿ ತರಕಾರಿ ಇದೆ ಎಂದು ಸುಳ್ಳು ನೆಪಹೇಳಿ ಅವರನ್ನು ಕರೆತರುವಾಗ, ಅಂತರಸಂತೆ ಗ್ರಾಮದ ಚೆಕ್‌ಪೋಸ್ಟ್ ಮತ್ತು ಉದೂºರು ಗ್ರಾಮದ ಅರಣ್ಯ ಇಲಾಖೆ ಚೆಕ್‌ಪೋಸ್ಟ್ ಕ್ರಮಿಸಿ ಬಂದದ್ದು ಹೇಗೆ ಅನ್ನುವ ಅನುಮಾನ ಕಾಡುತ್ತಿದೆ. ಕೊರೊನಾ ತಡೆಗೆ ಚೆಕ್‌ಪೋಸ್ಟ್‌ಗಳು ತಪಾಸಣೆ ನಡೆಸಬೇಕು ಅನ್ನುವ ಆದೇಶವಿದೆ. ಆದರೂ ತಾಲೂಕಿನ 2 ಚೆಕ್‌ಪೋಸ್ಟ್‌ಗಳು ವಾಹನದ ತಪಾಸಣೆ ನಡೆಸಿಲ್ಲ.
ರಾಜ್ಯದಿಂದ ಮತ್ತೂಂದು ರಾಜ್ಯಕ್ಕೆ ಹೋಗಲು ಸೇವಾಸಿಂಧು ಯೋಜನೆಯಡಿ ಅನುಮತಿ ಪಡೆಯದೇ 24 ಮಂದಿ ಕಾರ್ಮಿಕರು ಗೂಡ್ಸ್ ವಾಹನದಲ್ಲಿ ಪ್ರಯಾಣಿಸಿದರೂ ಪೊಲೀಸ್, ಅರಣ್ಯ ಇಲಾಖೆ ಚೆಕ್‌ಪೋಸ್ಟ್‌ಗಳ ಅಧಿಕಾರಿಗಳು ತಪಾಸಣೆ ನಡೆಸದೇ ಇರುವುದು ಎಷ್ಟು ಸರಿ ಎಂದು ಗ್ರಾಪಂ ಅಧ್ಯಕ್ಷರೇ ತೀವ್ರ ವಿರೋಧ ವ್ಯಕ್ತಪಡಿಸಿ, ವಾಹನ ಕೇರಳಕ್ಕೆ ಹೋಗಲು ಬಿಡದೆ ಕಾರ್ಮಿಕರನ್ನು ಹಂಪಾಪುರಕ್ಕೆ ಕಳುಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಆಕಸ್ಮಿಕ ವಿದ್ಯುತ್ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ
Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ
Mysuru: ಕೆಆರ್‌ಎಸ್ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್
Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ
Hunsur: ಹುತಾತ್ಮ ಧಿವಿನ್ ಅಂತಿಮ ದರ್ಶನ ಪಡೆದ ಗ್ರಾಮಸ್ಥರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.