Hunsur: ಹನುಮಂತೋತ್ಸವ ಮೆರವಣಿಗೆ ಕುರಿತ ಪೂರ್ವಬಾವಿ ಸಭೆ
Team Udayavani, Nov 28, 2023, 12:52 PM IST
ಹುಣಸೂರು: ಮುಂಬರುವ ಹನುಮಂತೋತ್ಸವ ಮೆರವಣಿಗೆ ಸಂಬಂಧ ನಗರ ಠಾಣೆ ಪೊಲೀಸರು ಪೂರ್ವಬಾವಿ ಸಭೆ ನಡೆಸಿದರು.
ನಗರ ಠಾಣೆ ಸಭಾಂಗಣದಲ್ಲಿ ಡಿವೈಎಸ್ಪಿ ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ಮುಖಂಡರಿಂದ ಮಾಹಿತಿ ಪಡೆದ ನಂತರ ಮಾತನಾಡಿದ ಡಿವೈಎಸ್ ಪಿ ತಾಲೂಕು ಮತ್ತು ಜಿಲ್ಲಾಡಳಿತದ ನಿಬಂಧನೆಗೊಳಪಟ್ಟು ಹನುಮಂತೋತ್ಸವ ಮೆರವಣಿಗೆ ನಡೆಸಬೇಕು. ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು, ಶಾಂತಿ ಕಾಪಾಡಬೇಕು. ಸಾರ್ಜನಿಕರ ನೆಮ್ಮದಿಗೆ ಭಂಗ ಬರದಂತೆ ಮೆರವಣಿಗೆ ನಡೆಸಬೇಕು ಎಂದರು.
ಬೈಕ್ ಮತ್ತಿತರ ವಾಹನಗಳಲ್ಲಿ ಬಾವುಟ ಕಟ್ಟಿಕೊಂಡು ಓಡಾಡುವುದು ಹಾಗೂ ಬೈಕ್ ರ್ಯಾಲಿ ನಡೆಸಬಾರದು. ಬಂಟಿಂಗ್ಸ್, ಬ್ಯಾನರ್ ಅಳವಡಿಸುವ ಮುನ್ನ ಕಡ್ಡಾಯವಾಗಿ ಅನುಮತಿ ಪಡೆದಿರಬೇಕು. ಮೆರವಣಿಗೆಯಲ್ಲಿ ಸಮಿತಿಯವರು ಗುರುತು ಪತ್ರ ಹೊಂದಿರುವ ಸ್ವಯಂ ಸೇವಕರನ್ನು ನೇಮಿಸಿಕೊಳ್ಳಬೇಕು ಎಂದು ಹೇಳಿದರು.
ಸಣ್ಣಪುಟ್ಟ ವಿಷಯವೆಂದು ಅಲಕ್ಷ್ಯ ಮಾಡದೆ ಸಮಿತಿ ತಕ್ಷಣವೇ ಪೊಲೀಸರ ಗಮನಕ್ಕೆ ತರಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಹನುಮಂತೋತ್ಸವ ಸಮಿತಿ ಅಧ್ಯಕ್ಷ ವೆಂಕಟನಾರಾಯಣ ದಾಸ್, ಪ್ರಧಾನ ಕಾರ್ಯದರ್ಶಿ ಅನಿಲ್ ಶಾಂತಿ ಕಾಪಾಡುವುದು ಪ್ರತಿಯೊಬ್ಬರ ಹೊಣೆಯಾಗಿದ್ದು, ತಾಲೂಕು ಆಡಳಿತ ಸೂಚನೆಯಂತೆ ಅನುಮತಿ ಪಡೆದೇ ಬಂಟಿಗ್ಸ್, ಬ್ಯಾನರ್ ಅಳವಡಿಸುತ್ತೇವೆ, ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದರು.
ಡಿ.24ಕ್ಕೆ ಆಂಜನೇಯ ಸ್ವಾಮಿ ದೇವಾಲಯದಿಂದ ಮೆರವಣಿಗೆಯಲ್ಲಿ ಆಂಜನೇಯ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಮುನೇಶ್ವರ ಕಾವಲ್ ಮೈದಾನದವರೆಗೆ ಮೆರವಣಿಗೆ ಮೂಲಕ ಬಂದು ಪ್ರತಿಷ್ಟಾಪಿಸಲಾಗುವುದು ಎಂದರು.
ಡಿ.25 ರಂದು ನಾಡ ಕುಸ್ತಿ ಆಯೋಜಿಸಲಾಗುವುದು. ಡಿ.26 ರ ಬೆಳಗ್ಗೆ ನಗರದ ರಂಗನಾಥ ಬಡಾವಣೆಯಲ್ಲಿ ಮೆರವಣಿಗೆಗೆ ಚಾಲನೆ ದೊರೆಯಲಿದ್ದು, ಪ್ರಮುಖ ಬೀದಿಗಳಲ್ಲಿ ಕಲಾತಂಡಗಳು, ಮಂಗಳ ವಾದ್ಯ ಸಹಿತ ಹನುಮಂತ ಉತ್ಸವ ಮೂತಿ 9 ಹಾಗೂ ಬೃಹತ್ ಆಂಜನೇಯ ವಿಗ್ರಹಗಳ ಮೆರವಣಿಗೆ ನಡೆಸಲಾಗುವುದೆಂದು ಮಾಹಿತಿ ನೀಡಿದರು.
ಇನ್ಸ್ ಪೆಕ್ಟರ್ ದೇವೇಂದ್ರ ಮಾತನಾಡಿ, ಪದಾಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ಇದ್ದು, ಸಮಿತಿಯ ಕಾರ್ಯವೈಖರಿ ಬಗ್ಗೆ ಆಗಾಗ್ಗೆ ಮಾಹಿತಿ ನೀಡುತ್ತಿರಬೇಕು. ಮುಂದೆ ಹಿರಿಯ ಅಧಿಕಾರಿಗಳು ಸಭೆ ನಡೆಸಲಿದ್ದು, ಸಮಿತಿಯವರು ಬಾಗವಹಿಸಬೇಕು. ಮೆರವಣಿಗೆ ವೇಳೆ ಪೊಲೀಸರೊಂದಿಗೆ ಗುರುತು ಪತ್ರ ಹೊಂದಿರುವ ಸಮಿತಿಯ ಸ್ವಯಂಸೇವಕರು ಕಣ್ಗಾವಲಾಗಿರಬೇಕು ಎಂದರು.
ಮೆರವಣಿಗೆ ತೆರಳುವ ಮಾರ್ಗದಲ್ಲಿನ ಸಿ.ಸಿ.ಕ್ಯಾಮರಾದ ಜೊತೆಗೆ ಪೊಲೀಸರು ಸಹ ವಿಡಿಯೋ ಮಾಡುತ್ತಾರೆ. ಸಮಿತಿಯವರು ಸಹ ವಿಡಿಯೋ ಮಾಡಿಸಿ. ತಾಲೂಕಿನ ಎಲ್ಲ ಸಮುದಾಯಗಳೂ ಒಟ್ಟಾಗಿ ಆಚರಿಸುವಂತಾಗಬೇಕು ಎಂದ ಅವರು, ಇತರರಿಗೆ ನೋವುಂಟಾಗುವಂತಹ ಘೋಷಣೆಗಳನ್ನು ಕೂಗುವುದು, ಸಾಮಾಜಿಕ ಜಾಲತಾಣಗಳಲ್ಲಿ ಅನ್ಯರ ಭಾವನೆಗೆ ಧಕ್ಕೆ ತರುವಂತ ಪೋಸ್ಟ್ ಹಾಕುವವರ ಬಗ್ಗೆ ನಿಗಾ ಇಡಲಾಗುವುದು. ಅಂತಹವರ ವಿರುದ್ದ ಕ್ರಮವಾಗಲಿದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ನಗರಸಭೆ ಸದಸ್ಯ ವಿವೇಕಾನಂದ, ನಗರಸಭೆ ಮಾಜಿ ಅಧ್ಯಕ್ಷ, ಸಮಿತಿ ಉಪಾಧ್ಯಕ್ಷರೂ ಆದ ಎಚ್.ವೈ.ಮಹದೇವ್, ಚಂದ್ರಶೇಖರ್, ಗಣೇಶ್ ಕುಮಾರಸ್ವಾಮಿ, ಅಪ್ಪಣ್ಣ, ನರಸಿಂಹಮೂರ್ತಿ, ಕಾರ್ಯದರ್ಶಿ ಮಂಜುನಾಥ್, ಧನರಾಜ್, ತಾ.ಪಂ.ಮಾಜಿ ಸದಸ್ಯರಾದ ಗುಂಡರವಿ, ತಟ್ಟೆಕೆರೆ ಶ್ರೀನಿವಾಸ್, ಮುಖಂಡರಾದ ಬಿಳಿಕೆರೆ ಮಧು, ದರ್ಶನ್, ಗುರು ಸೇರಿದಂತೆ ಅನೇಕರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.