ಶುಲ್ಕ ಹೆಚ್ಚಿಸದಂತೆ ಖಾಸಗಿ ಶಿಕ್ಷಣ ಸಂಸ್ಥೆ ಶಾಲೆಗಳ ನಿರ್ಧಾರ
Team Udayavani, Jun 12, 2020, 5:40 AM IST
ಮೈಸೂರು: ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಖಾಸಗಿ ಶಾಲೆಗಳು ಈ ವರ್ಷದ ಶಾಲಾ ಶುಲ್ಕ ವನ್ನು ಹೆಚ್ಚಿಸದಂತೆ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ನಿರ್ಧರಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಶಾಲೆ ವಿದ್ಯಾರ್ಥಿಗಳ ಹಿತಕಾಯುವ ಹಾಗೂ ಶಿಕ್ಷಣ ಇಲಾ ಖೆಯ ಮೇಲಿನ ಒತ್ತಡ ತಗ್ಗಿಸುವ ಉದ್ದೇ ಶದಿಂದ ಒಕ್ಕೂಟ ಖಾಸಗಿ ಶಾಲೆಗಳು ಈ ವರ್ಷದ ಶುಲ್ಕ ಹೆಚ್ಚಿಸದಂತೆ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.
ಹೆಚ್ಚುವರಿ ಶುಲ್ಕ ಪಡೆಯಲ್ಲ: ಪ್ರಸ್ತುತ ವರ್ಷದಲ್ಲಿ ಹೆಚ್ಚುವರಿ ಶುಲ್ಕ ಪಡೆಯುವುದನ್ನೂ ಒಕ್ಕೂಟ ವಿರೋಧಿಸುತ್ತದೆ. ಸರ್ಕಾರಿ ಶಾಲೆಯ ಒಂದು ವಿದ್ಯಾರ್ಥಿಗೆ ಸರಕಾರ ವಾರ್ಷಿಕವಾಗಿ 50 ಸಾವಿರ ರೂ. ವೆಚ್ಚ ಮಾಡುತ್ತದೆ. ಆದರೆ, ಖಾಸಗಿ ಶಾಲೆ ವಿದ್ಯಾರ್ಥಿಗಳಿಗೆ ಎಲ್ಲವೂ ಆಯಾ ಸಂಸ್ಥೆಯೇ ನೋಡಿಕೊಳ್ಳಬೇಕು. ಹಾಗಾಗಿ ಹೆಚ್ಚುವರಿ ಶುಲ್ಕ ಕಡಿತಗೊಳಿಸಿ ದರೂ ನಿಗದಿಪಡಿಸಿರುವ ಶುಲ್ಕದ ಮೊತ್ತ ಇಳಿಕೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಆನ್‌ಲೈನ್ ಶಿಕ್ಷಣ ರದ್ಧತಿಗೆ ಸ್ವಾಗತ: ಚಿಕ್ಕ ವಯಸ್ಸಿನ ಮಕ್ಕಳು ಹೆಚ್ಚಾಗಿ ಮೊಬೈಲ್ ಮತ್ತು ಕಂಪ್ಯೂಟರ್ ನೋಡು ವುದರಿಂದ ಕಣ್ಣಿನ ದೃಷ್ಟಿ ಹಾಳಾಗುವುದು ಹಾಗೂ ನೆನಪಿನ ಶಕ್ತಿಯೂ ಕಳೆದು ಕೊಳ್ಳುವ ಸಾಧ್ಯತೆ ಇರುತ್ತವೆ. ಸರ್ಕಾರ ಆನ್‌ಲೈನ್ ತರಗತಿಗಳನ್ನು ನಿಷೇಧಿಸುತ್ತಿ ರುವುದು ಸ್ವಾಗತಾರ್ಹ ಎಂದರು.
ಪೋಷಕರಿಗೆ ತರಬೇತಿ: ಇನ್ನೂ ಶಾಲೆ ಆರಂಭವಾಗಲು ಎರಡು ತಿಂಗಳ ಅವಧಿ ಇರುವುದ ರಿಂದ ಮಕ್ಕಳ ಬೌದಿಕ ಮತ್ತು ಮಾನಸಿಕ ಅಸಮತೋಲನ ನೀಗಿ ಸಲು ಶಿಕ್ಷಕರು ಮತ್ತು ವಿದ್ಯಾರ್ಥಿ ಪೋಷಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ, ಮಕ್ಕಳಿಗೆ ಮನೆಯಲ್ಲೇ ಹೇಗೆ ಮತ್ತು ದಿನಕ್ಕೆ ಯಾವ ಅಧ್ಯಾಯ ಮಾಡಬೇಕು ಎಂದು ಪೋಷಕರಿಗೆ ತಿಳಿಸಿ ಕೊಡಲಿದ್ದೇವೆ. ನಂತರ ಪೋಷಕರು ತಮ್ಮ ಮಕ್ಕಳಿಗೆ ನಾವು ಹೇಳಿ ಕೊಡುವ ಪಾಠ ಮಾಡಲಿದ್ದಾರೆ ಎಂದು ಸುಧಾಕರ್ ಶಟ್ಟಿ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹೊಸ ವರ್ಷಾಚರಣೆ: ಕೇಕ್ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ
Hunsur: ಆಕಸ್ಮಿಕ ವಿದ್ಯುತ್ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ
Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ
Mysuru: ಕೆಆರ್‌ಎಸ್ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್
Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.