ರೈತರ ಹಿತವೇ ಕಾರ್ಖಾನೆ ಖಾಸಗೀಕರಣ ಉದ್ದೇಶ
Team Udayavani, Jun 9, 2020, 5:59 AM IST
ಮೈಸೂರು: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಖಾಸಗೀಕರಣವಾದರೆ ಅಭಿವೃದಿಟಛಿ ಮತ್ತು ಜನರ ಸಮಸ್ಯೆ ಬಗೆಹರಿಯುತ್ತದೆ ಎಂದು ಜಿಲ್ಲಾ ಸಚಿವ ಸೋಮಶೇಖರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರಾಣಿ ಕಂಪನಿಯವರಿಗೆ ಸಾಕಷ್ಟು ಅನುಭವ ವಿದೆ. ಸಾಲ ಮರುಪಾವತಿಗೆ ಸಿದ್ಧರಿದ್ದಾರೆ. ಈ ಕುರಿತು ಕಾರ್ಮಿಕ ಇಲಾಖೆ ಸಚಿವರು ಕೂಡ ಭೇಟಿಯಾಗಿ ಮಾತನಾಡುತ್ತಾರೆ. ಟೆಂಡರ್‌ನಲ್ಲಿ ಯಾರು ಪಾಲ್ಗೊಂಡಿರುತ್ತಾರೋ ಅವರಿಗೆ ವಹಿಸಲಾಗಿದೆ. ಕಾರ್ಖಾನೆ, ರೈತರು, ನೌಕರರ ಹಿತದೃಷ್ಟಿಯೇ ನಮ್ಮೆಲ್ಲರ ಉದ್ದೇಶ ಎಂದು ಹೇಳಿದರು.
ರೈತರ ಹಿತ ಮುಖ್ಯ: ಸಂಸದೆ ಸುಮಲತಾ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ 2 ಸಕ್ಕರೆ ಕಾರ್ಖಾನೆ ಮುಚ್ಚಿದೆ. ಕಬ್ಬು ಕಟಾವಿಗೆ ಬಂದಾಗ ಸಮಸ್ಯೆ ಉದ್ಬವ ವಾಗುತ್ತದೆ. ರೈತರಿಗೆ ಅನುಕೂಲವಾಗಬೇಕೆಂಬುದೇ ನನ್ನ ಉದ್ದೇಶ. ಜನಹಿತಕ್ಕಾಗಿ ಮಾಡುವ ವಿಷಯದಲ್ಲಿ ರಾಜಕೀಯ ಮಾಡಬಾರದು. ಸಕ್ಕರೆ ಸಚಿವರೊಂದಿಗೂ ಮಾತು ಕತೆ ನಡೆಸಿದ್ದೆ. ಮೈಷುಗರ್ ಕಾರ್ಖಾನೆಯನ್ನು ಸರ್ಕಾರ ನಡೆಸಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದ್ದಾರೆ. ಮೈಷುಗರ್‌ನಲ್ಲಿ ಏನೇನು ಅಕ್ರಮವಾಗಿದೆ ಎಂಬುದನ್ನು ನೋಡಬೇಕು. 420 ಕೋಟಿ ಹೂಡಿದರೂ ಪ್ರತಿಫಲ ಸಿಗಲಿಲ್ಲ. ಇದನ್ನು ಇತಿಹಾಸ ಎಂದು ಮುಚ್ಚಿಡಬೇಕಾ? ಅಥವಾ ರೈತರಿಗೆ ಅನುಕೂಲವಾಗುವಂತೆ ಮತ್ತೆ ಚಾಲನೆ ಮಾಡಬೇಕಾ ಎಂಬುದು ಮುಖ್ಯ ಎಂದು ಹೇಳಿದರು.
ವಿರೋಧದ ಉದ್ದೇಶವೇನು?: ಪಿಎಸ್‌ಎಸ್‌ಕೆ ಕಾರ್ಖಾನೆ ಆಕ್ಟೋಬರ್‌ನಲ್ಲಿ ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಅಷ್ಟರಲ್ಲಿ ಆರಂಭಿಸಿದರೆ ಒಳ್ಳೆಯದು. ಮೈಷುಗರ್ ವಿಷಯದಲ್ಲಿ ಖಾಸಗಿಯವರಿಗೆ ಕೊಡಲು ಸರ್ಕಾರ ಮುಂದಾ ದಾಗ, ಪ್ರತಿ ಪಕ್ಷದವರು ವಿರೋಧಿಸಿದರು. ಒಎನ್ ಡಿಎಂ ಕೊಡೋಣ ಎಂದ ಮೇಲೆ ಅದಕ್ಕೂ ವಿರೋಧ ಮಾಡುವುದಾದರೆ, ಅದರಲ್ಲಿ ನಿಮ್ಮ ಉದ್ದೇಶವೇ ನು? ರೈತರಿಗೆ ಮತ್ತು ಜನರಿಗೆ ಅನುಕೂಲವಾಗುವುದು ಬೇಡವೇ? ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.