ಹುಣಸೂರು: ಬಾಲಕನ ಅಪಹರಣ ಹಾಗೂ ಕೊಲೆಗೆ ಸಂಬಂಧ ಪ್ರತಿಭಟನೆ
Team Udayavani, Nov 6, 2021, 9:21 AM IST
ಹುಣಸೂರು: ಹುಣಸೂರು ತಾಲೂಕಿನ ಹನಗೋಡಿನಲ್ಲಿ ನಡೆದಿದ್ದ ಬಾಲಕನ ಅಪಹರಣ ಹಾಗೂ ಕೊಲೆಗೆ ಸಂಬಂಧಪಟ್ಟಂತೆ ಇಂದು ಹನಗೋಡಿನಲ್ಲಿ ವರ್ತಕರ ಸಂಘ ಅಂಗಡಿ ಮುಂಗಟ್ಟಗಳನ್ನು ಮುಚ್ಚಿ ಶಾಂತಿಯುತ ಪ್ರತಿಭಟನೆ ನಡೆಯುತ್ತಿದ್ದಾರೆ. ಇವರ ಜೊತೆಗೆ ಹನಗೋಡು ಸುತ್ತ ಮುತ್ತಲ ಗ್ರಾಮಸ್ಥರು ಹಾಗೂ ಎಲ್ಲಾ ಮುಖಂಡರುಗಳು ಕೈ ಜೋಡಿಸಿದ್ದಾರೆ.
ಘಟನ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಕೊಲೆ ಮಾಡಿರುವ ಆರೋಪಿಗಳಿಗೆ ತಕ್ಕ ಶಿಕ್ಷೆಯನ್ನು ಪ್ರಕಟಿಸಬೇಕು ಹಾಗೂ ಈ ಭಾಗದಲ್ಲಿ ನಡೆಯುತ್ತಿರುವ ಆನ್ಲೈನ್ ಜೂಜು ಐಪಿಎಲ್ ದಂದೆಯನ್ನು ಕೂಡಲೇ ನಿಲ್ಲಿಸಬೇಕು. ದಂದೆ ನಡೆಸುತ್ತಿವವರನ್ನು ತಕ್ಷಣವೇ ಬಂಧಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೂಡಲೆ ಇದಕ್ಕೆ ಉತ್ತರವನ್ನು ಜಿಲ್ಲಾಡಳಿತ ನೀಡುವವರೆಗೂ ಶವಸಂಸ್ಕಾರ ನಡೆಸುವುದಿಲ್ಲ ಎಂದು ಗ್ರಾಮಸ್ಥರು ಪಟ್ಟುಹಿಡಿದು ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದಾರೆ. ಪ್ರತಿಭಟನ ಕಾರನ್ನುದ್ದೇಶಿಸಿ ಮಾತನಾಡಿದ ಶಾಸಕ ಎಚ್ ಪಿ ಮಂಜುನಾಥ್ ಮಾತನಾಡಿ ಈಗಾಗಲೇ ತಾಲೂಕು ಆಡಳಿತ ಘಟನೆ ನಡೆದ 8 ಗಂಟೆಯೊಳಗೆ ಆರೋಪಿಗಳ ಹೆಡೆಮುರಿ ಕಟ್ಟಿ ಪ್ರಕರಣ ವನ್ನು ಭೇದಿಸಿದ್ದಾರೆ.
ಇದನ್ನೂ ಓದಿ:- ಚಿಕ್ಕವಯಸ್ಸಿನಲ್ಲೇ ದೊಡ್ಡ ಕಾರ್ಯದ ಮೂಲಕ ಮಾದರಿಯಾದ ಪೋರಿ ಭೈರವಿ
ಅದರೆ ದುರದೃಷ್ಟವಶಾತ್ ಮಗುವನ್ನು ಜೀವಂತವಾಗಿ ತರಲು ಸಾದ್ಯವಾಗಿಲ್ಲ. ಅದರೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲೆಬೇಕು. ಇದಕ್ಕೆ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲೇಬೇಕೆಂದು ಸ್ಥಳದಲ್ಲಿದ್ದ ಡಿವೈಎಸ್ ಪಿ ಯವರಿಗೆ ಒತ್ತಾಯ ಮಾಡಿದರು. ನೊಂದ ಕುಟುಂಬದವರ ನೋವಿನಲ್ಲಿ ನಾನು ಕೂಡ ಭಾಗಿಯಾಗಿದ್ದೇನೆ ಎಂದು ತಿಳಿಸಿದರು.
ಶಾಸಕ ಮಂಜುನಾಥ್ ರವರು ಪ್ರತಿಭಟನೆ ಗಾರರ ಮನವೊಲಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ಹಾಗೂ ಹನಗೋಡಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಾದ ಐಪಿಎಲ್ ದಂದೆ ಜೂಜು ಸೇರಿದಂತೆ ಇತರೆ ಅಕ್ರಮ ಕಡಿವಾಣ ಹಾಕಲು ಕ್ರಮ ಕೈಗೊಳ್ಲುವುದಾಗಿ ನೀಡಿದ ಭರವಸೆ ಮೇರೆಗೆ ಪ್ರತಿಭಟನೆಯನ್ನು ಕೈಬಿಡಲಾಯಿತು. ನಂತರ ಮಗುವಿನ ಅಂತ್ಯಕ್ರೀಯೆ ನಡೆಯುಲು ಅನುವು ಮಾಡಲಾಯಿತು.
Apmc ಅಧ್ಯಕ್ಷ ಸುಭಾಸ್, ಮಾಜಿ ಅದ್ಯಕ್ಷ ಕಿರಂಗೂರು ಬಸವರಾಜ್, ಜಿ.ಪಂ.ಮಾಜಿ ಸದಸ್ಯ ಕಟ್ಟನಾಯಕ, ಗ್ರಾ.ಪಂ.ಮಾಜಿ ಅದ್ಯಕ್ಷರಾದ ದಾ ರಾ ಮಹೇಶ್, ಗಣಪತಿ, ದೇವರಾಜ್, ಮಹೇಶ್ ಬಿಜೆಪಿ ಮುಖಂಡರಾದ ಮಂಜುನಾಥ್, ಸುರೇಶ್, ಜೆಡಿಎಸ್ ತಾ ಅದ್ಯಕ್ಷ ದೇವರಹಳ್ಳಿ ಸೋಮಶೇಖರ್, ಬಿಳಿಕೆರೆ ಪ್ರಸನ್ನ, ಗಾವಡಗೆರೆ ಮಠದ ನಟರಾಜ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಪುಟ್ಟ ಸಿದ್ದಶೆಟ್ಟಿ ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.