ರಂಗಾಯಣದಲ್ಲಿ 8 ದಿನ ದಸರಾ ರಂಗೋತ್ಸವ
ಅ.7ರಿಂದ 14ರವರೆಗೆ 8 ದಿನ 8 ನಾಟಕ ಪ್ರದರ್ಶನ ಹಣ ನೀಡದಿದ್ದರೂ ರಂಗೋತ್ಸವ ಸಂಘಟಿಸುತ್ತೇವೆ-ಅಡ್ಡಂಡ ಕಾರ್ಯಪ್ಪ
Team Udayavani, Oct 5, 2021, 4:14 PM IST
ಮೈಸೂರು: ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ರಂಗಾಯಣ ಸಜ್ಜುಗೊಂಡಿದ್ದು, ಅ.7ರಿಂದ 14ರವರೆಗೆ 8 ದಿನಗಳ ಕಾಲ ರಂಗಾಯಣದಲ್ಲಿ ದಸರಾ ರಂಗೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.
ರಂಗಾಯಣದ ಆವರಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕೊರೊನಾ ಸಾಂಕ್ರಾಮಿಕ ರೋಗದಿಂದ ಕಳೆದ ವರ್ಷ ನವರಾತ್ರಿ ರಂಗೋತ್ಸವಕ್ಕೆ ಅನುಮತಿ ಸಿಗಲಿಲ್ಲ. ಈ ಬಾರಿರಂಗೋತ್ಸವಕ್ಕೆ ಅವಕಾಶ ಸಿಕ್ಕಿದ್ದು, ಅ.7ರಿಂದ 14ರ ವರೆಗೆ 8 ದಿನಗಳ ಕಾಲ ರಂಗಾಯಣದಲ್ಲಿ ದಸರಾರಂಗೋತ್ಸವ ನಡೆಯ ಲಿದ್ದು, 8 ನಾಟಕಗಳುಪ್ರದರ್ಶನಗೊಳ್ಳಲಿವೆ ಎಂದರು.
ಪ್ರತಿ ದಸರಾದಲ್ಲಿ ರಂಗಾಯಣಕ್ಕೆ ನವರಾತ್ರಿ ರಂಗೋತ್ಸವಕ್ಕೆ 10 ಲಕ್ಷ ರೂ. ಅನುದಾನ ನೀಡಲಾಗುತ್ತಿತ್ತು. ಈ ವರ್ಷ ಅನುದಾನಕ್ಕೆ ಮನವಿ ಮಾಡಿದ್ದೇವೆ. ಜಿಲ್ಲಾಡಳಿತದಿಂದ ಯಾವುದೇ ಉತ್ತರ ಬಂದಿಲ್ಲ. ಆದರೂ 8 ದಿನಗಳ ದಸರಾ ರಂಗೋತ್ಸವ ಸಂಘಟಿಸುತ್ತಿದೇವೆ ಎಂದರು.
ದಸರಾ ರಂಗ ಗೌರವ: 6 ದಶಕಗಳಿಂದ ನಟಿಯಾಗಿನಿರ್ದೇಶಕಿಯಾಗಿ ಸಂಘಟಕರಾಗಿ ಆಧುನಿಕ ರಂಗ
ಭೂಮಿ ಕಟ್ಟಿ ಬೆಳೆಸಿದ ರಾಮೇಶ್ವರಿ ವರ್ಮ ಅವರಿಗೆಈ ವರ್ಷ ದಸರಾ ರಂಗ ಗೌರವ ನೀಡಲಾಗುತ್ತಿದೆ. ಅ. 7ರಂದು ಸಂಜೆ 6 ಗಂಟೆಗೆ ದಸರಾ ರಂಗೋತ್ಸವವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ರಾಮೇಶ್ವರಿ ವರ್ಮ ಉದ್ಘಾಟಿಸಲಿದ್ದು, ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ್ ಜವಳಿ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡಸಿ.ಕಾರ್ಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಭಾಗವಹಿಸಲಿದ್ದಾರೆ ಎಂದರು.
ದಸರಾ ರಂಗೋತ್ಸವ: ಅ.7ರಂದು ಸಂಜೆ 6.30ಕ್ಕೆ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಶಿವಮೊಗ್ಗ ರಂಗಯಣ ತಂಡದಿಂದ ಡಾ.ಬೇಲೂರು ರಘುನಂದನ್ ರಚನೆಯ ಕೃಷ್ಣಮೂರ್ತಿ ಕವತ್ತಾರ್‌ನಿರ್ದೇಶನದಲ್ಲಿ ಮೂಡಿಬಂದಿರುವ ಹತ್ಯಾಕಾಂಡ (ವಿದುರಾಶ್ವಥದ ವೀರಗಾಥೆ), ಅ.8ರಂದು ಶಿವಮೊಗ್ಗ ರಂಗಾಯಣ ತಂಡದಿಂದ ಕೆ.ವಿ.ಸುಬ್ಬಣ್ಣ ರಚನೆಯ, ಬಿ.ಆರ್.ವೆಂಕಟರಮಣ ಐತಾಳ ನಿರ್ದೇಶನದ ಚಾಣಕ್ಯ ನಾಟಕ ಪ್ರದರ್ಶನವಾಗಲಿದೆ. ಅ. 9 ಮತ್ತು 10ರಂದು ರಂಗಾಯಣದ ಭೂಮಿಗೀತದಲ್ಲಿ ಡಾ.ಎಸ್.ಎಲ್.ಭೈರಪ್ಪ ಅವರ ಮಹಾರಂಗ ಪ್ರಯೋಗ ಪರ್ವ ನಾಟಕ ಪ್ರದರ್ಶನವಾಗಲಿದೆ.
ಅ.11 ಮತ್ತು 12ರಂದು ಸಂಜೆ 6.30ಕ್ಕೆ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಎಸ್.ರಾಮನಾಥ ರಚನೆ, ಆರ್.ಸಿ.ಧನಂಜಯ ನಿರ್ದೇಶನದ ಸೂತ್ರಧಾರ ನಾಟಕ ಪ್ರದರ್ಶನವಾಗಲಿದೆ. ಸಂವಿಧಾನದಆಶಯ ಪರಿಚಯಿಸುವ ನಾಟಕವಾಗಿದ್ದು, ಇದರಲ್ಲಿ ಪರಿಶಿಷ್ಟ ಜಾತಿ ಕಲಾವಿದರು ನಟಿಸುತ್ತಿದ್ದಾರೆ ಎಂದರು.
ಅ.13 ಮತ್ತು 14ರಂದು ಭೂಮಿಗೀತ ರಂಗ ಮಂದಿರದಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ, ವೈದೇಹಿ ರಚನೆಯ, ಬಿ.ವಿ.ಕಾರಂತ ನಿರ್ದೇಶನದ ಮೂಕನ ಮಕ್ಕಳು ನಾಟಕವನ್ನು ರಂಗಾಯಣದಕಿರಿಯ ರೆಪರ್ಟರಿ ತಂಡ ಪ್ರದರ್ಶಿಸಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಇದ್ದರು.
ಪರ್ವ ಶೋಗೆ 48 ಸಾವಿರ ವೆಚ್ಚ, ಆದಾಯ 28 ಸಾವಿರ;-
ಮೈಸೂರು: ಖ್ಯಾತ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರ ಪರ್ವ ಕಾದಂಬರಿ ಮಹಾರಂಗ ಪ್ರಯೋಗ 14 ಪ್ರದರ್ಶನ ಪೂರ್ಣಗೊಂಡಿದ್ದು, 4481ಕ್ಕೂ ಹೆಚ್ಚು ರಂಗಾಸಕ್ತರು ವೀಕ್ಷಿಸಿದ್ದಾರೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.
ರಾಜ್ಯ ಸರ್ಕಾರ ಪರ್ವ ನಾಟಕ ಸಿದ್ಧತೆಗೆ 50 ಲಕ್ಷ ರೂ. ಅನುದಾನ ನೀಡಿತು. ಈ ಅನುದಾನದಲ್ಲಿ ಶೇ. 65ರಷ್ಟು ಹಣವನ್ನು ಕಲಾವಿದರ ಸಂಭಾವನೆಗೆ ನೀಡಲಾಗಿದೆ. ರಂಗ ಸಜ್ಜಿಕೆ ನಿರ್ಮಾಣ, ಪ್ರಸಾಧನ, ಪರಿಕರ, ಪ್ರಚಾರ ಸಾಮಗ್ರಿ ಎಲ್ಲ ಸೇರಿ ಒಟ್ಟು 58 ಲಕ್ಷ ರೂ. ವೆಚ್ಚ ಮಾಡಲಾಗಿದೆ. ರಾಜ್ಯ ಸರ್ಕಾರ ಪ್ರತಿ ವರ್ಷ ರಂಗಾಯಣಕ್ಕೆ 3 ಕೋಟಿ ರೂ. ಅನುದಾನನೀಡುತ್ತಿತ್ತು. ಕಳೆದ ವರ್ಷ 60 ಲಕ್ಷ ರೂ. ಮಾತ್ರ ನೀಡಿತು. ಈ ಹಣದಲ್ಲಿಯೇ ಪರ್ವ ನಾಟಕಕ್ಕೆ 8 ಲಕ್ಷ ರೂ. ಬಳಸಿಕೊಳ್ಳಲಾಗಿದೆ. 30 ಕಲಾವಿದರಿಗೆ 18ಸಾವಿರದಂತೆ ಮಾಸಿಕ ವೇತನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:- ನವರಾತ್ರಿ; ದೇವಿ ದೇಗುಲಗಳಲ್ಲಿ ಭರದ ಸಿದ್ಧತೆ
ಪರ್ವ ಒಂದು ಶೋಗೆ 48 ಸಾವಿರ ರೂ. ವೆಚ್ಚವಾಗುತ್ತದೆ. ಸರಾಸರಿ ಪ್ರೇಕ್ಷಕರಿಂದ 25 ಸಾವಿರ ರೂ. ಆದಾಯ ಬರುತ್ತಿದೆ. 23 ಸಾವಿರ ರೂ. ಕೊರತೆಇದೆ. ಈ ಹಣವನ್ನು ರಂಗಾಯಣ ಭರಿಸುತ್ತಿದೆ. ನಾಲ್ವರು ಕಲಾವಿದರು ನಿವೃತ್ತರಾಗಿದ್ದಾರೆ. ಅವರಿಗೂ ಸಂಭಾವನೆ ನೀಡುತ್ತಿದ್ದೇವೆ ಎಂದು ತಿಳಿಸಿದರು. ಪರ್ವ ನಾಟಕ ರಂಗಪಠ್ಯ ರಚನೆ, ನಿರ್ದೇಶಿಸಿದ ಪ್ರಕಾಶ್ ಬೆಳವಾಡಿ ಅವರು ಸಂಭಾವನೆ ಕೇಳಲಿಲ್ಲ.
ಆದರೆ 1.5 ಲಕ್ಷ ನೀಡಲು ನಿರ್ಧರಿಸಿದೆವು. ಆ ಹಣವನ್ನು ಆಮ್ಲಜನಕದ ಸಿಲಿಂಡರ್ ಖರೀದಿಸಲು ಬೆಂಗಳೂರಿನ ರೋಟರಿ ಸಂಸ್ಥೆಗೆ ನೀಡಲು ಪ್ರಕಾಶ್ ಬೆಳವಾಡಿ ಹೇಳಿದರು. ಅವರ ಸಂಭಾವನೆ ಕೋವಿಡ್ ರೋಗಿಗಳಿಗೆ ಬಳಕೆಯಾಯಿತು. ಅಂತಾರಾಷ್ಟ್ರೀಯ ವಸ್ತ್ರ ವಿನ್ಯಾಸಕರಾದ ಪ್ರಸಾದ್ ಬಿದ್ದಪ್ಪ ಅವರಿಗೆ 95 ಸಾವಿ ರೂ. ನೀಡಿರುವುದಾಗಿ ಕಾರ್ಯಪ್ಪ ಮಾಹಿತಿ ನೀಡಿದರು.
ವಿಧಾನಸಭೆಯಲ್ಲಿ ಹಿಂದಿನ ಮುಖ್ಯಮಂತ್ರಿಗಳು ರಾಜ್ಯವ್ಯಾಪಿ ಪರ್ವ ನಾಟಕ ಪ್ರದರ್ಶನಕ್ಕೆ 1 ಕೋಟಿ ರೂ. ಅನುದಾನ ಕೊಡುವುದಾಗಿ ಪ್ರಕಟಿಸಿದ್ದರು.ಆದರೆ, ಇವರೆಗೂ ಹಣ ಬಿಡುಗಡೆಯಾಗಿಲ್ಲ. ಕೋವಿಡ್ ಪರಿಸ್ಥಿತಿ ನೋಡಿಕೊಂಡು ಹಣ ಬಿಡುಗಡೆ ಮಾಡಲಿದ್ದಾರೆ. ಹಣದ ಕೊರತೆಯಿಂದ ಕರ್ನಾಟಕಮಾತ್ರವಲ್ಲದೇ, ಬೇರೆ ಬೇರೆ ರಾಜ್ಯಗಳಲ್ಲಿ ನಾಟಕ ಪ್ರದರ್ಶನ ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
MUST WATCH
ಹೊಸ ಸೇರ್ಪಡೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.