ಹುಡುಕಿದ್ದು 1, ಕಾಣಿಸಿದ್ದು3 ಹುಲಿ, ಕಳ್ಳಬೇಟೆಯೂ ನಿರಂತರ

ಆರೋಪಿಯನ್ನು ದಸ್ತಗಿರಿ ಮಾಡಿದ್ದು, ಉಳಿದ ಆರೋಪಿಗಳಿಗೆ ಬಲೆ ಬೀಸಲಾಗಿದೆ

Team Udayavani, Sep 13, 2021, 6:02 PM IST

ಹುಡುಕಿದ್ದು 1, ಕಾಣಿಸಿದ್ದು3 ಹುಲಿ, ಕಳ್ಳಬೇಟೆಯೂ ನಿರಂತರ

ಹುಣಸೂರು: 3 ದಿನಗಳ ಹಿಂದೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಅಯ್ಯನಕೆರೆ ಹಾಡಿಯ ಆದಿವಾಸಿ ಯುವಕ ಗಣೇಶ್‌ನನ್ನು ಕೊಂದ ಹುಲಿರಾಯನ ಪತ್ತೆಗೆ ಒಂದೆಡೆ ಕೂಂಬಿಂಗ್‌ ಆರಂಭಿಸಿದ್ದರೆ, ಮತ್ತೂಂದೆಡೆ ಕಳ್ಳಬೇಟೆ, ಕ್ಯಾಮರಾ ಕಳ್ಳತನವೂ ನಡೆದಿದೆ. ಈ ನಡುವೆ ಭಯವಿಲ್ಲದ ಜನರು ಜಾನುವಾರುಗಳನ್ನು ಇನ್ನೂ ಕಾಡಿಗೆ ಬಿಡುತ್ತಿರುವುದು ಆತಂಕಕಾರಿ.

ಯುವಕನನ್ನು ಬಲಿ ಪಡೆದ ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಅನುಮತಿ ಯೊಂದಿಗೆ ನಾಗರಹೊಳೆ ಮುಖ್ಯಸ್ಥ ಮಹೇಶ್‌ ಕುಮಾರ್‌ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ, ಹುಣಸೂರು ವಲಯದ ನೇರಳಕುಪ್ಪೆ ಬಿ.ಹಾಡಿ ಬಳಿ ಬೇಸ್‌ ಕ್ಯಾಂಪ್‌ ತೆರೆದಿದೆ. ಸೆ.9ರಿಂದಲೇ ಹುಲಿ ಸೆರೆಗೆ ತಾಂತ್ರಿಕ ತಂಡ, ಟ್ರ್ಯಾಕಿಂಗ್‌ ತಂಡ, ಅರವಳಿಕೆ ಚುಚ್ಚು ಮದ್ದು ನೀಡುವ ತಂಡ, ಆರ್‌ಆರ್‌ಟಿ ಹಾಗೂ ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಪ್ರಚಾರ ತಂಡ ವನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಹುಣಸೂರು ವಲಯದ ಬೇಸ್‌ ಕ್ಯಾಂಪ್‌ನಲ್ಲಿ ಮೇಟಿಕುಪ್ಪೆ ಎಸಿಎಫ್‌ ಮಹದೇವ್‌, ಆರ್‌ಎಫ್‌ಒ ಹನುಮಂತರಾಜು ಅವರೊಂದಿಗೆ ಜಂಟಿ ಸುದ್ದಿ ಗೋಷ್ಠಿಯಲ್ಲಿ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ ಅವರು ಘಟನೆ ನಡೆದ ರಾತ್ರಿಯೇ ಹುಲಿ ಸೆರೆಗಾಗಿ ಬೋನ್‌ ಹಾಗೂ ಟ್ರ್ಯಾಪಿಂಗ್‌ ಕ್ಯಾಮರಾ ಅಳವಡಿಸಲಾಗಿತ್ತು. ಘಟನಾ ಸ್ಥಳದಿಂದ ಸುಮಾರು 50ಮೀ.ದೂರದಲ್ಲಿ ಒಂದು ಹುಲಿ ಛಾಯಾಚಿತ್ರ ಸೆರೆಯಾಗಿತ್ತು. ಸ್ಥಳದಲ್ಲಿ ಅಟ್ಟಣೆ ನಿರ್ಮಿಸಿ, ಪಕ್ಕ ದಲ್ಲೇ ಮತ್ತೂಂದು ಕೇಜ್‌ ಇಟ್ಟು ಸುತ್ತಮುತ್ತಲಿನಲ್ಲಿ ಸುಮಾರು 40ಟ್ರ್ಯಾಪಿಂಗ್‌ ಕ್ಯಾಮರಾ ಅಳವಡಿಸಿ. ಅಟ್ಟಣೆ ಮೇಲೆ ಪಶುವೈದ್ಯಾಧಿಕಾರಿ ಡಾ.ರಮೇಶ್‌ ಮತ್ತವರ ತಂಡ ಹುಲಿ ಚಲನವಲನದ ಬಗ್ಗೆ ನಿಗಾ ವಹಿಸಿದ್ದರೂ ಮತ್ತೆ ಹುಲಿ ಪತ್ತೆಯಾಗಲಿಲ್ಲ ಎಂದರು.

4 ತಂಡ: ಹುಲಿ ಹೆಚ್ಚೆ ಗುರುತು ಮತ್ತು ಮಲದ ಆಧಾರದ ಮೇಲೆ ಹುಲಿ ಹೋದ ಕಡೆಗಳಲ್ಲೆಲ್ಲಾ ಒಟ್ಟು70 ಕ್ಯಾಮರಾ ಅಳವಡಿಸಲಾಗಿತ್ತು. ಈ ವೇಳೆ 7 ಕಡೆ ಹುಲಿಗಳ ಛಾಯಾಚಿತ್ರ ಸೆರೆಯಾಗಿದ್ದವು. ಆದರೆ ಘಟನೆ ನಡೆದ ದಿನ ಕಾಣಿಸಿಕೊಂಡಿದ್ದ ಹುಲಿ ಬೆನ್ನಮೇಲೆ ಗಾಯವಾಗಿತ್ತು. ಆ ನಂತರ ದಲ್ಲಿ ಸಿಕ್ಕ ಹುಲಿಗಳ ಛಾಯಾಚಿತ್ರ ಪರಿಶೀಲಿಸಿದ ವೇಳೆ, ಇವು ಬೇರೆ 3 ಹುಲಿಗಳಾಗಿವೆ. ಇದೀಗ ಕಾರ್ಯಾ ಚರಣೆ ಮುಂದುವರಿದಿದೆ. ಅಲ್ಲದೆ ಹಾಸನದಿಂದ ಅರವಳಿಕೆ ತಜ್ಞ ವೆಂಕಟೇಶ ಅವರನ್ನೂಕರೆಸಲಾಗಿದೆ ಎಂದರು.

ಜಗ್ಗದ ಜನ- ಕಾಡಿನತ್ತ ದನಗಳು: ಹುಲಿ ದಾಳಿಯಿಂದ ಗಣೇಶ ಸಾವಿನಘಟನೆಸಂಭವಿಸಿದ್ದರೂ ಅಕ್ಕಪಕ್ಕದ ಹಳ್ಳಿಯ ಜನ ಅರಣ್ಯದಲ್ಲಿ ಜಾನುವಾರು ಮೇಯಲು ಬಿಟ್ಟಿರುವುದು, ಸೌದೆ ತರು ತ್ತಿರುವುದು ಅಲ್ಲದೇ ಕಾಡಿನಲ್ಲಿ ಅಡ್ಡಾಡುತ್ತಿರುವುದು ಕಂಡು ಬಂದಿದೆ. ಕಳ್ಳಬೇಟೆ ಹಾಗೂ ಕ್ಯಾಮರಾ ಕಳ್ಳತನವೂ ನಡೆದಿದ್ದು, ಹುಲಿ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಗ್ರಾಮಸ್ಥರು ಸಹಕಾರ ನೀಡಿ: ಹಳ್ಳಿಗಳಲ್ಲಿ ಕಾಡಿಗೆ ಯಾರೂ ಬರಬಾರದು, ಜಾನುವಾರುಗಳನ್ನು ಬಿಡ ಬಾರದೆಂದು ಪ್ರಚಾರ ಮಾಡುತ್ತಿ ದ್ದರೂ ಜನ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ನಮಗೂ, ಇಲಾಖೆ ಸಿಬ್ಬಂದಿಗೂ ನೋವುಂಟಾಗಿದೆ. ಕಾರ್ಯಾಚರಣೆ ನಿಲ್ಲಿಸಿ ಪೆಟ್ರೋಲಿಂಗ್‌ ಕಡೆಗೆ ಗಮನಹರಿಸುವಂ ತಾಗಿದೆ ಎಂದು ಸತೀಶ್‌ ತಿಳಿಸಿದರು.

ಕ್ಯಾಮರಾಕಳ್ಳತನ
ಶುಕ್ರವಾರ ರಾತ್ರಿ4 ಟ್ರಾಪಿಂಗ್‌ ಕ್ಯಾಮರಾ ಕಳ್ಳತನ ಮಾಡಲಾಗಿದೆ. ಅಲ್ಲದೆ ಬೇಟೆಗಾರರು ಜಿಂಕೆಯನ್ನು ಭೇಟೆ ಯಾಡಿದ್ದು, ಗಂಭೀರವಾಗಿ ಪರಿಗಣಿಸಿದ್ದು, ಖಚಿತ ಮಾಹಿತಿ ಮೇರೆಗೆ ಹನ ಗೋಡಿಗೆ ಸಮೀಪದ ಶಿಂಡೇನಹಳ್ಳಿ ಸುಜೇಂದ್ರನ ಮನೆ ಮೇಲೆ ದಾಳಿ ಮಾಡಿ 2 ಕೆ.ಜಿ.ಜಿಂಕೆ ಮಾಂಸ ವಶಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿದ್ದು, ಉಳಿದ ಆರೋಪಿಗಳಿಗೆ ಬಲೆ ಬೀಸಲಾಗಿದೆ. ಅಲ್ಲದೆಕ್ಯಾಮರಾಕಳುವಿನ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ ಎಂದು
ಎಸಿಎಫ್ ಸತೀಶ್‌ ಹೇಳಿದರು.

ಗಾಯಗೊಂಡಿದ್ದ ಹಸು ಸಾವು
ಹುಣಸೂರು: ನಾಗರಹೊಳೆ ಉದ್ಯಾನದಂಚಿನ ಕಿಕ್ಕೇರಿಕಟ್ಟೆ ಅರಣ್ಯದಂಚಿನಲ್ಲಿ ಶನಿವಾರ ಹುಲಿ ದಾಳಿಯಿಂದ ಗಾಯಗೊಂಡಿದ್ದ ಹಸು ಚಿಕಿತ್ಸೆ ಫ‌ಲಿಸದೇ ಭಾನುವಾರ ಮೃತಪಟ್ಟಿದೆ. ತಾಲೂಕಿನ ಹನಗೋಡು ಹೋಬಳಿ ಕಿಕ್ಕೇರಿ ಕಟ್ಟೆಯ ಗಣೇಶ್‌ ತಮ್ಮ ಜಮೀನಿನಲ್ಲಿ ಜಾನುವಾರು ಗಳನ್ನು ಮೇಯಲು ಬಿಟ್ಟಿದ್ದ ವೇಳೆ ಹಸುವಿನ ಮೇಲೆ ಹಾಡಹಗಲೇ ಹುಲಿ ದಾಳಿ ನಡೆಸಿ ತೀವ್ರವಾಗಿಗಾಯಗೊಳಿಸಿತ್ತು.ಅರಣ್ಯಇಲಾಖೆ ಡಾ.ರಮೇಶ್‌ ಅವರೇ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಭಾನುವಾರ ಅಸುನೀಗಿದೆ. ಸ್ಥಳಕ್ಕೆ ಹುಣ ಸೂರು ವಲಯದ ಡಿಆರ್‌ಎಫ್‌ಒ ಸಿದ್ದರಾಜು, ಸಿಬ್ಬಂದಿ ಭೇಟಿ ನೀಡಿ ಮಹಜರ್‌ ನಡೆಸಿದರು.

ಅದೇ ಹುಲಿ ಅನುಮಾನ?: ಕಾಡಂಚಿನ ಗ್ರಾಮಗಳಲ್ಲಿ ಜಾನುವಾರುಗಳನ್ನು ಕೊಂದಿದ್ದ ಇತ್ತೀಚೆಗಷ್ಟೇ ಅಯ್ಯನಕೆರೆ ಹಾಡಿಯ ಗಣೇಶ್‌ ನನ್ನು ಕೊಂದ ಹುಲಿಯೇ ಪಕ್ಕದ ಕಿಕ್ಕೇರಿ ಕಟ್ಟೆ ಯಲ್ಲಿ ಹಸುವಿನ ಮೇಲೆ ದಾಳಿ ನಡೆಸಿರಬಹುದೆಂದು ಸಂಶಯಿಸಲಾಗಿದೆ.

ಟಾಪ್ ನ್ಯೂಸ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-hunsur

Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು

Mys-Udgiri-1

Mob Attack: ಉದಯಗಿರಿ ಪೊಲೀಸ್‌ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ

24

80 ಸಾವಿರ ಲಂಚ ಸ್ವೀಕರಿಸುವಾಗ ಸಬ್‌ ಇನ್ಸ್‌ಪೆಕ್ಟರ್‌ ಲೋಕ ಬಲೆಗೆ

11

Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್‌’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.