ಶೀಘ್ರದಲ್ಲೇ ಕೋವಿಡ್ ಮುಕ್ತ
Team Udayavani, Apr 30, 2020, 3:17 PM IST
ನಂಜನಗೂಡು: ಶೀಘ್ರದಲ್ಲಿಯೇ ನಂಜನಗೂಡು ಕೋವಿಡ್ ದಿಂದ ಮುಕ್ತ ವಾಗಲಿದೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು. ಬುಧವಾರ ಶಾಸಕ ಹರ್ಷ ವರ್ಧನ ಅವರೊಂದಿಗೆ ತಾಲೂಕು ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ನಂಜನಗೂಡಲ್ಲಿ ಕೊರೊನಾ ಮುಕ್ತವಾಗಲು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಇದಕ್ಕಾಗಿ ಶ್ರಮಿಸುತ್ತಿರುವ ಜಿಲ್ಲೆ, ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಹೆಚ್ಚು ಪಾಸಿಟಿವ್ ಇದ್ದ ತಾಲೂಕಿನಲ್ಲಿ ಕೊರೊನಾ ಮುಕ್ತ ಮಾಡುವುದು ಅತ್ಯಂತ ಪ್ರಯಾಸದ ಕೆಲಸವಾಗಿದೆ. ಇನ್ನು ಕೆಲವೇ ದಿನಗಳ ಕಾಲ ನಾವು ಇದನ್ನು ಮುಂದುವರಿಸಿದರೆ ನಮ್ಮ ಶ್ರಮ ಸಾರ್ಥಕವಾಗಲಿದೆ ಎಂದು ಸಚಿವ ಸೋಮಶೇಖರ ಹೇಳಿದರು.
ಶಾಸಕ ಹರ್ಷವರ್ಧನ್ ಹಾಗೂ ತಹಶೀಲ್ದಾರ ಮಹೇಶಕುಮಾರ ಅವರಿಂದ ತಾಲೂಕಿನ ಶೀಘ್ರದಲ್ಲೇ ಕೋವಿಡ್ ಮುಕ್ತದ ಸಂಪೂರ್ಣ ವಿವರವನ್ನು ಪಡೆದು ಕೊಂಡರು. ಸಭೆಯಲ್ಲಿ ಜಿಲ್ಲಾಧಿಕಾರಿ ಅಭಿರಾಂಶಂಕರ್, ಪೊಲೀಸ್ ವರಿಷ್ಠಾಧಿಕಾರಿ ರಿಷ್ವತ, ಸಿಇಒ ಪ್ರಶಾಂತ ಮಿಶ್ರಾ, ತಾಪಂ ಇಒ ಕೃಷ್ಣರಾಜ ಅರಸು, ಅಧ್ಯಕ್ಷ ಬಿ.ಎಸ್. ಮಹದೇವಪ್ಪ, ನಗರಸಭಾ ಆಯುಕ್ತ ಕರಿ ಬಸವಯ್ಯ ಸೇರಿದಂತೆ ತಾಲೂಕು ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.