ಈಡೇರದ ಇಸಾಕ್ ಕನ್ನಡ ಗ್ರಂಥಾಲಯದ ಕನಸು
ಗ್ರಂಥಾಲಯ ನಿರ್ಮಾಣಕ್ಕೆ ಸಂಗ್ರಹವಾದ ದೇಣಿಗೆಯೂ ವಾಪಾಸ್ ಸ್ಥಳೀಯ ಸಂಘ-ಸಂಸ್ಥೆಗಳೂ ನಿರ್ಲಕ್ಷ್ಯ
Team Udayavani, Nov 1, 2021, 11:43 AM IST
ಮೈಸೂರು: ಕನ್ನಡ ಭಾಷಿಕರು ಕಡಿಮೆ ಇರುವ ಸ್ಥಳದಲ್ಲಿ ಗ್ರಂಥಾಲಯವೊಂದನ್ನು ಕಟ್ಟಿ ಕನ್ನಡ ಭಾಷಾ ಪ್ರೇಮ ಹಂಚುತ್ತಿರುವ ಸಯ್ಯದ್ ಇಸಾಕ್ ಅವರ ಕನಸು 6 ತಿಂಗಳಾದರು ಕನಸಾಗಿಯೇ ಉಳಿದಿದ್ದು, ಹೊಸ ಗ್ರಂಥಲಯ ನಿರ್ಮಾಣಕ್ಕೆ ಸ್ಥಳೀಯ ಸಂಸ್ಥೆ ಮತ್ತು ಗ್ರಂಥಾಲಯ ಇಲಾಖೆಯೇ ಅಡ್ಡಿಯಾಗಿವೆ.
ಕನ್ನಡ ಭಾಷೆ ಎಂದರೆ ಮೂಗು ಮುರಿಯುವ ಈ ಕಾಲದಲ್ಲಿ ಕನ್ನಡ ಭಾಷಿಕರು ವಿರಳವಾಗಿರುವ ಮೈಸೂರಿನ ರಾಜೀವನಗರದ 2ನೇ ಹಂತದಲ್ಲಿ ಕನ್ನಡ ಭಾಷಾ ಜ್ಞಾನ ಬೆಳೆಸಲು, ಅಕ್ಷರ ಪ್ರೀತಿ ಮೂಡಿಸಲು ಕಳೆದ ಹತ್ತಾರು ವರ್ಷಗಳಿಂದ ಖಾಲಿ ಜಾಗದಲ್ಲಿ ಗುಡಿ ಸಲು ಹಾಕಿ ಸ್ವಂತ ಖರ್ಚಿನಲ್ಲೇ ಸಣ್ಣದೊಂದು ಗ್ರಂಥಾ ಲಯ ನಡೆಸುತ್ತಿದ್ದ ಸಯ್ಯದ್ ಇಸಾಕ್‌ರ ಗ್ರಂಥಾಲಯಕ್ಕೆ ಕಿಡಿಗೇಡಿಗಳು ಏಪ್ರಿಲ್ 09ರಂದು ಮಧ್ಯರಾತ್ರಿ ಬೆಂಕಿಯಿಟ್ಟು 11 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಭಸ್ಮಮಾಡಿ ಗ್ರಂಥಾಲಯವನ್ನು ನಾಶ ಮಾಡಿದ್ದರು.
ಆಕಾಶ ತೋರಿ ಪಾತಾಳಕ್ಕಿಸಿವೆ ಆಶ್ವಾಸನೆಗಳು: ಕನ್ನಡ ಪುಸ್ತಕದ ಮನೆಗೆ ಕೊಳ್ಳಿಯಿಟ್ಟು ಐದಾರು ತಿಂಗಳು ಕಳೆದರೂ ಸುಟ್ಟು ಕರಕಲಾದ ಪುಸ್ತಕಗಳ ಬೂದಿ ಎದುರಲ್ಲೇ ಒಂದಿಷ್ಟು ದಿನ ಪತ್ರಿಕೆ, ಪುಸ್ತಕವನ್ನಿಟ್ಟು ತನ್ನ ಕಾಯಕ ಮುಂದುವರೆಸಿರುವ ಆಕ್ಷರ ಪ್ರೇಮಿ ಸಯ್ಯದ್ ಇಸಾಕ್‌ರ ಕನಸು ಇಂದಿಗೂ ಸಾಕಾರಗೊಂ ಡಿಲ್ಲ. ಲಕ್ಷಾಂತರ ಪುಸ್ತಕ ನೀಡುವ, ಕಟ್ಟಡ ಕಟ್ಟಿಸಿ ಕೊಡುವ ಅನೇಕಾರು ಮಂದಿಯ ತೋರ್ಪಡಿಕೆಯ ಆಶ್ವಾಸನೆಗಳು ಇಸಾಕ್‌ರನ್ನು ಆಕಾಶ ತೋರಿ ಪಾತಾಳಕ್ಕಿಸಿವೆ.
ದೇಣಿಗೆಯೂ ವಾಪಾಸ್: ಗ್ರಂಥಾಲಯ ಬೆಂಕಿಗಾ ಹುತಿಯಾದ ನಂತರ ಕುಗ್ಗಿಹೋಗಿದ್ದ ಇಸಾಕ್, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದರು. ಘಟನೆಯಿಂದ ಮರುಗಿದ ಕೆಲವರು ಇಸಾಕ್ ಅವರಿಗೆ ನೆರವಾಗಲು ಸಾರ್ವಜನಿಕ ನಿಧಿ ಸ್ಥಾಪಿಸಿ, ದೇಣಿಗೆ ಸಂಗ್ರಹಿಸುವ ಅಭಿಯಾನವನ್ನೂ ಆರಂಭಿಸಿದರು. ಇದಕ್ಕೆ ರಾಜ್ಯ ಸೇರಿದಂತೆ ನೆರೆ ರಾಜ್ಯ ಹಾಗೂ ವಿದೇಶಗಳಿಂದಲೂ ಸಾವಿರಾರು ಮಂದಿ ದೇಣಿಗೆ ನೀಡಿದ್ದರು.
ಈ ನಿಧಿಯಲ್ಲಿ ಬರೊಬ್ಬರಿ 32 ಲಕ್ಷ ರೂ. ದೇಣಿಗೆ ಸಂಗ್ರಹವೂ ಆಗಿತ್ತು. ಈ ವಿಚಾರ ತಿಳಿದ ಇಸಾಕ್ ಕೂಡ ತನ್ನ ಹೊಸ ಗ್ರಂಥಾಲಯ ಕನಸು ಸಾಕಾರಗೊಳ್ಳುವ ಇರಾದೆಯಲ್ಲಿದ್ದರು. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಗ್ರಂಥಾಲಯಕ್ಕೆ ಬೆಂಕಿ ಇಟ್ಟ ಘಟನೆ ಚರ್ಚೆಗೆ ಗ್ರಾಸವಾದಾಗ ಸರ್ಕಾರ ನಿವೇಶನದೊಂದಿಗೆ ಗ್ರಂಥಾಲಯ ಕಟ್ಟಡವನ್ನು ಕಟ್ಟಿಸಿಕೊಡುವುದಾಗಿ ಘೋಷಿಸಿತು. ಅಲ್ಲಿಯವರೆಗೆ ಸುಮ್ಮನಿದ್ದ ಸಾರ್ವಜನಿಕ ನಿಧಿಗೆ ದೇಣಿಗೆ ನೀಡಿದ್ದ ಮಂದಿ ಭಿನ್ನರಾಗ ತೆಗೆದರು. ಇದರಿಂದ ವಿಚಲಿತರಾದ ಸಾರ್ವಜನಿಕ ನಿಧಿ ಸ್ಥಾಪಕರು ಮರುದಿನವೇ ಸಂಗ್ರಹವಾದ ಹಣವನ್ನು ಅವರವರ ಖಾತೆಗೆ ಮರು ಜಮೆ ಮಾಡಿದರು.
ಇದನ್ನೂ ಓದಿ:- ಯುಪಿ ರೈತರ ಚಿತಾಭಸ್ಮ ಕೃಷ್ಣಾ ನದಿಯಲ್ಲಿ ವಿಸರ್ಜನೆ
ಇಷ್ಟೆಲ್ಲ ಘಟನೆ ನಡೆದು ಹೋಗಿದ್ದು ಏಪ್ರಿಲ್ ತಿಂಗಳಲ್ಲೇ. ಆದರೆ, ಸರ್ಕಾರ ನೀಡಿದ ಭರವಸೆ ಇನ್ನೂ ಈಡೇರಿಲ್ಲ. ನೂರಾರು ಮಂದಿ ಸಾಹಿತ್ಯಾಸಕ್ತರು, ಪುಸ್ತಕ ಪ್ರೇಮಿಗಳ ಓದಿನ ದಾಹ ನೀಗಿಸುವ ಇಸಾಕ್ ಕೆಲಸವೂ ನಿಂತಿಲ್ಲ.
ಮುಡಾದಿಂದ ನಿವೇಶನ: ಜನತೆಗೆ ಓದಿನ ದಾಹ ನೀಗಿಸುತ್ತಾ, ಅಕ್ಷರ ಪೀತಿ ಹಂಚುವ ಸಲುವಾಗಿ ನಡೆಸುತ್ತಿದ್ದ ಗ್ರಂಥಾಲಯಕ್ಕೆ ಬೆಂಕಿ ಬಿದ್ದ ಸುದ್ದಿಗೆ ಮರುಗಿದ ಸರ್ಕಾರ ಗ್ರಂಥಾಲಯಕ್ಕೆ ಬೇಕಾಗುವ ನಿವೇಶನ ಹಾಗೂ ಕಟ್ಟಡ ಕಟ್ಟಿಕೊಡುವ ಭರವಸೆ ನೀಡಿತ್ತು. ಅದರಂತೆ ಮುಡಾ ಅಧ್ಯಕ್ಷರ ಮುತು ವರ್ಜಿಯಿಂದ ಗ್ರಂಥಾಲಯ ಸುಟ್ಟು ಕರಕಲಾದ ಸ್ಥಳವಾದ ಮೂಲೆ ನಿವೇಶನವನ್ನು ಸಯ್ಯದ್ ಇಸಾಕ್ ಅವರಿಗೆ ಗ್ರಂಥಾಲಯ ನಡೆಸುವುದಕ್ಕಾಗಿ ನೀಡಿದೆ. ಆದರೆ, ಕಟ್ಟಡ ನಿರ್ಮಿಸಿಕೊಡುವ ಜವಾಬ್ದಾರಿ ಹೊತ್ತ ಪಾಲಿಕೆ ಮತ್ತು ಗ್ರಂಥಾಲಯ ಇಲಾಖೆ ಮೌನಕ್ಕೆ ಶರಣಾಗಿವೆ ಎಂದು ಇಸಾಕ್ ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಹಿಂದಿನ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು ಮತ್ತು ಗ್ರಂಥಾಲಯ ಅಧಿಕಾರಿಗಳು ಭೇಟಿ ನೀಡಿ ಹೊಸ ಕಟ್ಟಡ ಮಾಡಿಕೊಡುತ್ತೇವೆ ಎಂದು ಹೇಳಿ ಹೋದರು. ಆದರೆ, ಆರು ತಿಂಗಳಾದರು ಇತ್ತ ಯಾರೂ ಬಂದಿಲ್ಲ. ಈ ಬಗ್ಗೆ ಗ್ರಂಥಾಲಯ ಅಧಿಕಾರಿಗಳನ್ನು ವಿಚಾರಿಸಿದರೆ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಂದಿಲ್ಲ. ಪಾಲಿಕೆ ಅಧಿಕಾರಿಗಳನ್ನು ವಿಚಾರಿಸಿ ಎನ್ನುತ್ತಾರೆ.
ನನ್ನ ಗ್ರಂಥಾಲಯ ಕನಸು ಈಡೇರುವವರೆಗೂ ಇಲ್ಲೇ ರಸ್ತೆ ಬದಿಯಲ್ಲೇ ತತ್ಕಾಲಿಕವಾಗಿ ಗ್ರಂಥಾಲಯ ಸೇವೆ ಮುಂದುವರಿಸುತ್ತೇನೆ ಎಂದು ಸಯ್ಯದ್ ಇಸಾಕ್ ಪತ್ರಿಕೆಗೆ ತಿಳಿಸಿದರು.
ಇಲಾಖೆ ಹೇಳುವುದೇನು?: ಗ್ರಂಥಾಲಯ ಸುಟ್ಟುಹೋದ ಸ್ಥಳವನ್ನು ಮುಡಾ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸಿದೆ. ಇಲಾಖೆಯಿಂದ ಗ್ರಂಥಾಲಯ ನಿರ್ಮಿಸಿ ಕಟ್ಟದ ಒಂದು ಕೊಠಡಿಯಲ್ಲಿ ಇಸಾಕ್ ಅವರು ತಮ್ಮ ಪುಸ್ತಕ ಮತ್ತು ಪತ್ರಿಕೆಗಳನ್ನು ಇಡಬಹುದು.
ಮತ್ತೊಂದು ಭಾಗದಲ್ಲಿ ನಮ್ಮ ಇಲಾಖೆ ಗ್ರಂಥಾಲಯ ಕಾರ್ಯನಿರ್ವಹಿಸಲಿದೆ. ಜೊತೆಗೆ ಇಸಾಕ್ ಅವರ ಮನೆಯ ಒಬ್ಬ ಸದಸ್ಯರಿಗೆ ತಾತ್ಕಾಲಿಕ ಕೆಲಸ ನೀಡಲಾಗುವುದು. ಕಟ್ಟಡ ನಿರ್ಮಾಣಕ್ಕೆ 25ರಿಂದ 30 ಲಕ್ಷ ರೂ. ಯೋಜನೆ ರೂಪಿಸಲಾಗಿದ್ದು, ಆಯುಕ್ತರು ಒಪ್ಪಿಗೆ ಸೂಚಿಸಿ ಅನುದಾನ ಬಿಡುಗಡೆ ಮಾಡಿದರೆ, ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಗ್ರಂಥಾಲಯ ಅಧಿಕಾರಿಗಳು ಹೇಳುತ್ತಾರೆ.
“ಆದಷ್ಟು ಬೇಗ ಸರ್ಕಾರ ಇಲ್ಲೊಂದು ಗ್ರಂಥಾಲಯ ನಿರ್ಮಾಣ ಮಾಡಬೇಕು. ಇಲ್ಲಿಗೆ ಸ್ಥಳೀಯ ಜನರು ಬಂದು ಪತ್ರಿಕೆ, ಪುಸ್ತಕ ಓದುವಂತಾಗಬೇಕು. ಇಲ್ಲವಾದರೆ ಬಹಳಷ್ಟು ಜನ ಈ ಜಾಗವನ್ನು, ಓದುವುದನ್ನು ಮರೆತು ಹೋಗ್ತಾರೆ. ಪತ್ರಿಕೆ ನೋಡುವ ಹವ್ಯಾಸವು ಕಣ್ಮರೆಯಾಗುತ್ತದೆ.” – ಸಯ್ಯದ್ ಇಸಾಕ್, ಸಾರ್ವಜನಿಕ ಗ್ರಂಥಾಲಯ
– ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.