Hunsur: ಹೊಸರಾಮನಹಳ್ಳಿಯ ಈರಣ್ಯೇಶ್ವರ ಜಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗಿ
ಕಂಬದಯ್ಯನಿಗೆ ಬಾಳೆಗೊನೆ ಸಮರ್ಪಿಸಿ ಧನ್ಯತಾಭಾವ ಮೆರೆದ ಭಕ್ತರು
Team Udayavani, Jan 12, 2024, 12:05 PM IST
ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿಯ ಹೊಸರಾಮನಹಳ್ಳಿಯಲ್ಲಿ ನಾಲ್ಕು ದಿನಗಳ ಕಾಲ ವಿಶಿಷ್ಟವಾಗಿ ಆಚರಿಸುವ ಸುತ್ತಮುತ್ತಲ ಗ್ರಾಮಸ್ಥರ ಆರಾಧ್ಯದೈವ ಈರಣ್ಣೇಶ್ವರ ಸ್ವಾಮಿಯ ಹಬ್ಬ ವಿಜೃಂಭಣೆಯಿಂದ ಜರುಗಿತು. ಭಕ್ತರು ನೂರಾರು ಬಾಳೆಗೊನೆ ಸಮರ್ಪಿಸಿ ಧನ್ಯತಾ ಭಾವ ಮೆರೆದರು.
ಬಿಳಿಕೆರೆ-ಕೆ.ಆರ್.ನಗರ ಹೆದ್ದಾರಿಯ ಮುಖ್ಯ ರಸ್ತೆ ಪಕ್ಕದಲ್ಲೇ ಇರುವ ತಾಲೂಕಿನ ಹೊಸರಾಮೇನಹಳ್ಳಿಯ ಈರಣ್ಣೇಶ್ವರಸ್ವಾಮಿ ದೇವಾಲಯದ ಬಳಿ ಮುಂಬಾಗದ ಆವರಣದಲ್ಲಿ ಒಂಭತ್ತು ಬನ್ನೀ ಮರದ ಕಂಬಗಳ ನಡುವೆ ನಿಂತಿರುವ ಶೂಲದಯ್ಯ ಎನ್ನುವ ಹೆಸರಿನಿಂದಲೂ ಕರೆಯಿಸಿಕೊಳ್ಳುವ ಈರಣ್ಣೇಶ್ವರಿಗೆ ನಾಲ್ಕು ದಿನಗಳ ಕಾಲ ಸಂಪ್ರದಾಯಬದ್ಧವಾಗಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಬಾಳೆಗೊನೆ ಸಮರ್ಪಣೆ: ಭಕ್ತರು ತಮ್ಮ ಸಂಕಷ್ಟಗಳನ್ನು ಪರಿಹರಿಸಬೇಕೆಂದು ದೇವರಲ್ಲಿ ಕೋರಿಕೊಳ್ಳುವ ಹರಕೆ ಈಡೇರಿಕೆಗಾಗಿ ಬಾಳೆಗೊನೆ ಕಟ್ಟುತ್ತಾರೆ. ಉತ್ಸವಕ್ಕೂ ಮುನ್ನಾ ದಿನ ಬನ್ನಿ ಮರದಿಂದ ತಯಾರಿಸಿರುವ ಕಂಬಗಳಿಗೆ ಕಟ್ಟುವ ಬಾಳೆಗೊನೆಯನ್ನು ಮೂರು ದಿನದ ನಂತರ ತೆಗೆದು ಪ್ರಸಾದವನ್ನಾಗಿ ಸ್ವೀಕರಿಸಿದರು. ಹಬ್ಬಕ್ಕಾಗಮಿಸಿದ್ದ ನೆಂಟರು ಕೊನೆ ದಿನ ಬಾಡೂಟ ಪ್ರಸಾದ ಸವಿದರು.
ಕಂಬದಯ್ಯ: ಗುಡಿಯ ಮುಂಬಾಗ ನಿರ್ಮಿಸಿರುವ ದೇವರ ಚಾವಡಿಯಲ್ಲಿ ದೊಡ್ಡ 9 ಬನ್ನಿಮರಗಳನ್ನು ಕಡಿದು ತಂದು ನೆಡುತ್ತಾರೆ. ಹಾಗಾಗಿ ಕಂಬದಯ್ಯನೆಂದೂ ಕರೆಯುತ್ತಾರೆ. ಈ ಮರದಲ್ಲಿ ಹರಕೆ ಹೊತ್ತವರು ತಂದ ನೂರಾರು ಬಾಳೆಗೊನೆಗಳನ್ನು ನೇತು ಹಾಕಲಾಗುತ್ತದೆ. ನಾಲ್ಕು ದಿನಗಳ ನಂತರ ಈ ಬಾಳೆಕಾಯಿಗಳು ಮಾಗಿದ್ದರೂ ಸಹ ಯಾವೊಂದು ಪಕ್ಷಿಯೂ ಬಾಳೆಗೊನೆಯನ್ನು ತಿನ್ನಲು ಬರದಿರುವುದು ಇಲ್ಲಿನ ದೇವರ ವೈಶಿಷ್ಟ್ಯ. ಹಬ್ಬದ ನಂತರ ಬಾಳೆಗೊನೆ ಪಡೆಯುವಾಗ ತಾವು ಯಾವ ಗೊನೆ ಹರಕೆಗಾಗಿ ಕಟ್ಟುತ್ತಾರೋ ಅದೇ ಗೊನೆಯನ್ನೇ ವಾಪಾಸ್ ಸಿಗುವುದು ಮತ್ತೊಂದು ವಿಶೇಷ.
ಈರಣ್ಣಸ್ವಾಮಿ ಗುಡಿಯ ಸುತ್ತ ಐದು ಗ್ರಾಮದೇವತೆ ಗುಡಿಗಳಿದ್ದು, ಇದರಲ್ಲಿ ಚೌಡೇಶ್ವರಿ, ಚಿಕ್ಮಮ್ಮತಾಯಿ, ಚಿಕ್ಕಮ್ಮ, ದಂಡಮ್ಮ, ಮಂಚಮ್ಮ ದೇವಾಲಯಗಳನ್ನೂ ದೀಪಾಲಂಕಾರಗಳಿAದ ಸಿಂಗರಿಸಿ ಪೂಜೆ ಸಲ್ಲಿಸಿದರು.
ದೀಪೋತ್ಸವ: ರಾತ್ರಿ ಒಂಭತ್ತು ಕಂಬದಯ್ಯನಿಗೆ ಮಣ್ಣಿನ ಹಣತೆಯಲ್ಲಿ ಎಳ್ಳೇಣ್ಣೆ ದೀಪ ಹಚ್ಚಿ ದೀಪೋತ್ಸವ ನೆರವೇರಿದರು. ಈ ವೇಳೆ ಸ್ಥಳೀಯ ಜಾನಪದ ಕಲಾತಂಡಗಳ ಗುಡ್ಡರ ಕುಣಿತ, ಮಾರಿ ಕುಣಿತ ಮುಂತಾದ ಕಲಾತಂಡಗಳು ಪ್ರದರ್ಶನ ನೀಡಿದ ನಂತರ ಮಾರನೆಯ ಮುಂಜಾನೆ ಹರಕೆಗೆ ಕಟ್ಟಿದ್ಚ ಬಾಳೆಗೊನೆಗಳನ್ನು ಕೆಳಗಿಳಿಸಿ ಜಾತ್ರೆಗಾಗಮಿಸಿದ್ದ ಭಕ್ತರಿಗೆ ವಿತರಿಸಿದರು.
ಹಬ್ಬಕ್ಕೆಂದು ದೂರದ ಉರುಗಳಿಂದ ಬಂದಿದ್ದ ನೆಂಟರಿಗೆ ಗ್ರಾಮದ ಮನೆಮನೆಗಳಲ್ಲಿ ಹಬ್ಬದ ಅಡುಗೆ ತಯಾರಿಸಿ ಉಣಬಡಿಸಿದರು.
ಶಾಸಕ ಜಿ.ಡಿ.ಹರೀಶ್‌ಗೌಡ ಸೇರಿದಂತೆ ಹಲವಾರು ಮುಖಂಡರು ಹಬ್ಬದಲ್ಲಿ ಬಾಗವಹಿಸಿ, ಈರಣ್ಣೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.