ಗ್ರಾಮ ಪರಿಮಿತಿಯಲ್ಲಿ ಹುಲಿ ಹೆಜ್ಜೆ ಪತ್ತೆ :ಆತಂಕ
Team Udayavani, Nov 5, 2021, 11:19 AM IST
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ತಾಲೂಕಿನ ನೇರಳಕುಪ್ಪೆ ಗ್ರಾಮದ ಬಳಿಯ ತೋಟದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಹಲವೆಡೆ ಹೆಜ್ಜೆ ಸಹ ಪತ್ತೆಯಾಗಿದೆ. ಉದ್ಯಾನದ ಹುಣಸೂರು ವಲಯ ವ್ಯಾಪ್ತಿಯ ಕಚುವಿನಹಳ್ಳಿ ಶ್ರೇಣಿಯ ನೇರಳಕುಪ್ಪೆ ಗ್ರಾಮ ಪರಿಮಿತಿ ವ್ಯಾಪ್ತಿಯ ಹಂದಿಹಳ್ಳ ಅರಣ್ಯ ಪ್ರದೇಶದಿಂದ ಕೆ.ಜಿ.ಹಬ್ಬನಕುಪ್ಪೆಯ ತರಗನ್ ಮಾನಿನ ತೋಟಕ್ಕೆ ಹುಲಿ ದಾಟುವುದನ್ನು ತೋಟದ ಉಸ್ತುವಾರಿ ಜಯಣ್ಣ ಕಂಡಿದ್ದು, ಡಿಆರ್‌ಎಫ್‌ಒ ವೀರಭದ್ರಯ್ಯ ಅವರಿಗೆ ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಸ್ಥಳ ಮಹಜರು ಮಾಡಿ ಹೆಜ್ಜೆ ಜಾಡನ್ನು ಪರಿಶೀಲಿಸಿ ಹುಲಿ ದಾಟಿರುವುದನ್ನು ಖಚಿತಪಡಿಸಿದ್ದಾರೆ. ಗ್ರಾಮ ಪರಿಮಿತಿಯಲ್ಲಿ ಹುಲಿ ಹೆಜ್ಜೆ ಪತ್ತೆ: ನೇರಳಕುಪ್ಪೆ ಗ್ರಾಮ ಪರಿಮಿತಿಯಲ್ಲಿರುವ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದ ದಿ. ಮಾದೇ ಗೌಡರ ಜಮೀನಿನಲ್ಲಿ ಮಂಗಳವಾರ ಸಹ ರಾತ್ರಿ ಹುಲಿ ಓಡಾಟ ನಡೆಸಿರುವ ಜಾಡು ಪತ್ತೆಯಾಗಿದೆ.
ಇದನ್ನೂ ಓದಿ:- ಧರ್ಮಸ್ಥಳ: ಆದಿಶಂಕರಾಚಾರ್ಯರ ಪ್ರತಿಮೆ ಸಮರ್ಪಣೆ ಕಾರ್ಯಕ್ರಮ ನೇರ ಪ್ರಸಾರ ವೀಕ್ಷಣೆ
ಕಳೆದ ನಾಲ್ಕು ದಿನಗಳ ಹಿಂದಷ್ಟೆ ಕೆ.ಜಿ.ಹಬ್ಬನಕುಪ್ಪೆಯಲ್ಲಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದಿತ್ತು. ಇದೀಗ ಗ್ರಾಮ ವ್ಯಾಪ್ತಿಯಲ್ಲಿ ಹುಲಿ ಅಡ್ಡಾಡುತ್ತಿ ರುವುದು ಹಳ್ಳಿಗರು ಜಮೀನುಗಳಿಗೆ ತೆರಳಲು ಹೆದರುತ್ತಿದ್ದಾರೆ. ಗ್ರಾಮಸ್ಥರಿಗೆ ಎಚ್ಚರಿಕೆ: ಕಳೆದ ನಾಲ್ಕೈದು ದಿನಗಳಿಂದ ನೇರಳಕುಪ್ಪೆ ಆರಣ್ಯದಂಚಿನ ಪ್ರದೇಶದಲ್ಲಿ ಹುಲಿ ಓಡಾಡುತ್ತಿದ್ದು, ಈ ಭಾಗದ ರೈತರು, ದನಗಾಹಿಗಳು ಅರಣ್ಯದಂಚಿನಲ್ಲಿ ಜಾನುವಾರುಗಳನ್ನು ಬಿಡಬಾರದು ಹಾಗೂ ರಾತ್ರಿ ವೇಳೆ ಎಚ್ಚರಿಕೆಯಿಂದ ಓಡಾಡಬೇಕೆಂದು ಡಿಆರ್‌ಎಫ್‌ಒ ವೀರಭದ್ರಯ್ಯ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.