![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 2, 2020, 3:15 PM IST
ಸಾಂದರ್ಭಿಕ ಚಿತ್ರ
ಮೈಸೂರು: ದೇಶದಲ್ಲಿಯೇ ಹೆಚ್ಚು ಮತ್ತು ಗುಣಮಟ್ಟದ ವರ್ಜಿನೀಯ ತಂಬಾಕು ಉತ್ಪಾದಿಸುವ ರಾಜ್ಯದ ಮೈಸೂರು ಜಿಲ್ಲೆಯ ತಂಬಾಕು ಬೆಳೆಗಾರರಿಗೂ ಕೋವಿಡ್-19 ಬಿಸಿ ತಟ್ಟಿದೆ. ಬೆಳೆದ ಬೆಳೆಯನ್ನು ಮಾರಲಾಗದ ಹಾಗೂ ಈ ಬಾರಿ ತಂಬಾಕು ನಾಟಿ ಮಾಡಬೇಕೊ, ಬೇಡವೋ ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಳೆಗಾರರು ಸಿಲುಕಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಕೆ.ಆರ್.ನಗರ, ಎಚ್.ಡಿ. ಕೋಟೆ ತಾಲೂಕುಗಳಲ್ಲಿ ಶೇ.80ರಷ್ಟು ರೈತರು ತಂಬಾಕು ಬೆಳೆಯನ್ನೇ ಆಶ್ರಯಿಸಿದ್ದಾರೆ. 2019-20ನೇ ಸಾಲಿನಲ್ಲಿ ಬೆಳೆದ ಬೆಳೆಯನ್ನು ಸೆಪ್ಟೆಂಬರ್‌ನಿಂದ ಏಪ್ರಿಲ್‌ವರೆಗೆ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕಿತ್ತು. ಆದರೆ, ಲಾಕ್‌ಡೌನ್ ಪರಿಣಾಮ ಮಾ.23ರಿಂದ ತಂಬಾಕು ಮಾರುಕಟ್ಟೆಯೇ ತೆರೆದಿಲ್ಲ. ಇದರಿಂದ ರೈತರು ಮತ್ತೆ ಮಾರುಕಟ್ಟೆ ಆರಂಭವಾಗುವುದೇ ಎಂಬ ಆತಂಕದ ಸ್ಥಿತಿಯಲ್ಲಿದ್ದಾರೆ.
3 ಮಿಲಿಯನ್ ಬಾಕಿ: ಜಿಲ್ಲೆಯಲ್ಲಿ 3 ಮಿಲಿಯನ್ ಕೆ.ಜಿ. ಹೆಚ್ಚಿನಷ್ಟು ತಂಬಾಕು ಮಾರಾಟವಾಗದೆ ಉಳಿದಿದೆ. ಪರಿಣಾಮ ನಿಗದಿತ ಸಮಯಕ್ಕೆ ತಂಬಾಕು ಮಾರಾಟ ಮಾಡದೆ, ಹೆಚ್ಚು ದಿನಗಳ ಕಾಲ ಹಾಗೆ ಉಳಿಸಿಕೊಂಡರೆ ಅದು ತನ್ನ ಗುಣಮಟ್ಟ ಕಳೆದುಕೊಳ್ಳಲಿದೆ. ಮಾ.23, 24, 25ರಂದು ಮಾರುಕಟ್ಟೆ ದಿನ ಘೊಷಣೆಯಾದವರು ತಮ್ಮ ತಂಬಾಕನ್ನು ಹದ ಮಾಡಿಟ್ಟುಕೊಂಡಿದ್ದರು. ಇದ್ದಕ್ಕಿದ್ದಂತೆ ಲಾಕ್‌ಡೌನ್ ಜಾರಿಯಾದ ಹಿನ್ನೆಲೆ ಶೇ.45ರಷ್ಟು ಹದ ಮಾಡಿದ್ದ ತಂಬಾಕು ಪಿಂಡಿಯಲ್ಲೆ (ಬೇಲ್) ಉಳಿದಿದ್ದರಿಂದ ಗುಣಮಟ್ಟ ಕಳೆದುಕೊಂಡಿದೆ. ಜೊತೆಗೆ ಸಾಕಷ್ಟು ರೈತರ ಉತ್ಪನ್ನ ಹಾಳಾಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ. ಸರ್ಕಾರ ಮೇ ಮೊದಲ ವಾರದಲ್ಲಿ ಮಾರುಕಟ್ಟೆ ಆರಂಭಿಸಿದರೆ ರೈತರು ತಮ್ಮಲ್ಲಿ ಉಳಿದಿರುವ ತಂಬಾಕನ್ನು ಮಾರಾಟ ಮಾಡಿ, ಹೇಗೊ ನಷ್ಟ ಸರಿದೂಗಿಸಿಕೊಳ್ಳುವ ಧಾವಂತದಲ್ಲಿದ್ದಾರೆ. ಮಾರುಕಟ್ಟೆ ತೆರೆಯುವುದು ಮತ್ತಷ್ಟು ದಿನ ತಡವಾದರೆ ಮತ್ತಷ್ಟು ನಷ್ಟ ಅನುಭವಿಸುವಂತಾಗಿದೆ.
ಸ್ಪಷ್ಟ ಮಾಹಿತಿಯೇ ಇಲ್ಲ: ಜಿಲ್ಲೆಯಲ್ಲಿ ಈಗಾಗಲೇ 2020-21 ಸಾಲಿನ ತಂಬಾಕು ನಾಟಿ ಕಾರ್ಯ ಆರಂಭವಾಗಿದೆ. ಈ ನಡುವೆ ರೈತರು ಎಷ್ಟು ಪ್ರಮಾಣದಲ್ಲಿ ತಂಬಾಕು ಉತ್ಪಾದಿಸಬೇಕು ಎಂಬ ಸ್ಪಷ್ಟ ಮಾಹಿತಿಯೂ ಇಲ್ಲವಾಗಿದೆ. ಕಳೆದ ಬಾರಿ ಬೆಳದ ಬೆಳೆ ಮಾರಾಟ ಮಾಡಲಾಗದ ಸ್ಥಿತಿ ಒಂದೆಡೆಯಾದರೆ, ಈ ಬಾರಿ ತಂಬಾಕು ಎಷ್ಟು ಪ್ರಮಾಣದಲ್ಲಿ ಬೆಳೆಯಬೇಕು ಅಥವಾ ಮತ್ತೆ ಮಾರುಕಟ್ಟೆ ಪುನಾರಂಭವಾಗಲಿದೆಯೇ ಎಂಬ ಆತಂಕ, ಗೊಂದಲ ನಿರ್ಮಾಣವಾಗಿದೆ.
88 ದಶಲಕ್ಷ ಕೆ.ಜಿ. ಬೆಳೆಗೆ ಅನುಮತಿ: ರಾಜ್ಯದಲ್ಲಿ 2020-21 ನೇ ಸಾಲಿನಲ್ಲಿ 88 ದಶಲಕ್ಷ ಕೆ.ಜಿ. ತಂಬಾಕು ಬೆಳೆಯಲು ತಂಬಾಕು ಮಂಡಳಿ ಅನುಮತಿ ನೀಡಿದೆ. ಈ ಹಿಂದೆ 99 ದಶಲಕ್ಷ ಕೆ.ಜಿ. ಹೊಗೆಸೊಪ್ಪು ಬೆಳೆಯಲು ಅನುಮತಿ ನೀಡಿಲಾಗಿತ್ತು. ಆದರೆ, ಆಂಧ್ರದ ಗುಂಟೂರಿನಲ್ಲಿ ನಡೆದ ತಂಬಾಕು ಮಂಡಳಿ ತುರ್ತು ಸಭೆಯಲ್ಲಿ 99 ದಶಲಕ್ಷದಿಂದ 88 ದಶಲಕ್ಷ ಕೆ.ಜಿ.ಗೆ ಇಳಿಸಲಾಗಿದೆ. ಲೈಸೆನ್ಸ್ ಹೊಂದಿದ ಪ್ರತಿ ರೈತನಿಗೂ ಈ ಹಿಂದೆ 1750 ಕೆ.ಜಿ. ಬೆಳೆಯುವಂತೆ ಅನುಮತಿ ನೀಡಲಾಗಿತ್ತು. ಆದರೆ, ಈ ಬಾರಿ 250 ಕೆ.ಜಿ. ಕಡಿತಗೊಳಿಸಲಾಗಿದೆ.
ಜಿಲ್ಲೆಯಲ್ಲಿ ಕೋವಿಡ್ 19 ಭೀತಿಯಿಂದ ತಂಬಾಕು ಹರಾಜಿಗೆ ಸಮಸ್ಯೆಯಾಗಿದ್ದು, ಲಾಕ್‌ಡೌನ್ ತೆರವು ಮಾಡಿದ ನಂತರ ತಂಬಾಕು ಹರಾಜು ಮಾರುಕಟ್ಟೆ ಪುನಾರಂಭವಾಗಲಿದೆ. ಪಿರಿಯಾಪಟ್ಟಣದಲ್ಲೇ ಎರಡೂವರೆ ಮಿಲಿಯನ್ ಕೆ.ಜಿ.ಯಷ್ಟು ತಂಬಾಕು ಮಾರಾಟವಾಗದೆ ಉಳಿದಿದೆ. ಇದೊಂದು ಕಾರಣಕ್ಕೆ ರೈತರು ಭಯಪಡುವ ಅಗತ್ಯವಿಲ್ಲ. ನಿಮ್ಮ ಜೊತೆ ತಂಬಾಕು ಮಂಡಳಿ ಹಾಗೂ ಸರ್ಕಾರವಿದೆ.
ಪ್ರತಾಪ್ ಸಿಂಹ, ಸಂಸದ
●ಸತೀಶ್ ದೇಪುರ
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.