ವ್ಯಾಪಾರಿಗಳ ಬದುಕು ಕಸಿದ ಕೋವಿಡ್

ನಗರದ 6 ಸಾವಿರಕ್ಕೂ ಹೆಚ್ಚು ವ್ಯಾಪಾರಿಗಳ ಜೀವನ ಅತಂತ್ರ; 15 ಕೋಟಿ ರೂ. ನಷ್ಟ

Team Udayavani, Apr 23, 2020, 4:01 PM IST

ವ್ಯಾಪಾರಿಗಳ ಬದುಕು ಕಸಿದ ಕೋವಿಡ್

ಸಾಂದರ್ಭಿಕ ಚಿತ್ರ

ಮೈಸೂರು: ಮಹಾಮಾರಿ ಕೋವಿಡ್ ವೈರಸ್‌ನಿಂದಾಗಿ ಬೀದಿ ಬದಿ ವ್ಯಾಪಾರ ನಂಬಿ ಜೀವನ ನಡೆಸುತ್ತಿದ್ದ ಸಾವಿರಾರು ಬಡ ವ್ಯಾಪಾರಿಗಳ ಬದುಕು ಅತಂತ್ರವಾಗಿದೆ. ಕೋವಿಡ್ ವೈರಸ್‌ ಹರಡುವುದನ್ನು ತಡೆಯುವ ಉದ್ದೇಶದಿಂದ ಲಾಕ್‌ಡೌನ್‌ ಜಾರಿಮಾಡಿರುವುದು ಹಾಗೂ ಕೇಂದ್ರ, ರಾಜ್ಯ ಸರ್ಕಾರ ಎಲ್ಲೆಡೆ ಬೀದಿ ಬದಿ ವ್ಯಾಪಾರ ನಿಷೇಧಿಸಿರುವ ಪರಿಣಾಮ ಲಕ್ಷಾಂತರ ಬೀದಿ ಬದಿ ವ್ಯಾಪಾರಿಗಳು ದುಡಿಮೆಯಿಲ್ಲದೆ, ನಿತ್ಯ ಜೀವನ ನಡೆಸಲು ಪರದಾಡುವಂತಾಗಿದೆ.

ವ್ಯಾಪಾರವಿಲ್ಲದೆ ಕಂಗಾಲು: ನಗರದಲ್ಲಿ 6 ಸಾವಿರಕ್ಕೂ ಹೆಚ್ಚಿನ ಬೀದಿ ವ್ಯಾಪಾರಿಗಳು ರಸ್ತೆ ಬದಿಯಲ್ಲಿ ವಿವಿಧ ವ್ಯಾಪಾರ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದು, ಇದರಲ್ಲಿ 4 ಸಾವಿರ ವ್ಯಾಪಾರಿಗಳು ಬೀದಿ ಬದಿ ಆಹಾರ ಮಾರಾಟ ಮಾಡುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ನಗರದ ಎಲ್ಲ ಬೀದಿ ಬದಿ ಆಹಾರ ಮಾರಾಟವನ್ನು ನಗರಪಾಲಿಕೆ ಅಧಿಕಾರಿಗಳು ನಿಲ್ಲಿಸಿದ್ದಾರೆ. ಇನ್ನು ತರಕಾರಿ ವ್ಯಾಪಾರವೂ ನಿಗಧಿತ ಸ್ಥಳದಲ್ಲಿ ನಡೆಯುತ್ತಿದ್ದರೂ, ವ್ಯಾಪಾರವಿಲ್ಲದೆ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಪರಿಣಾಮ ಕಳೆದ ಒಂದು ತಿಂಗಳಿಂದ ಯಾವುದೇ ವ್ಯಾಪಾರ, ವಹಿವಾಟು ಇಲ್ಲದೆ ಬದಿ ವ್ಯಾಪಾರ ನಂಬಿ ಜೀವನ ಸಾಗಿಸುತ್ತಿರುವವರ ಕುಟುಂಬ ತೊಂದರೆ ಅನುಭವಿಸುತ್ತಿದ್ದಾರೆ.

ಎಲ್ಲಾ ಅಂಗಡಿಗಳು ಬಂದ್‌: ನಗರದಲ್ಲಿ ಎರಡನೇ ಕೊರೊನಾ ಪ್ರಕರಣದ ಪತ್ತೆಯಾದ ಮಾರ್ಚ್‌ ಎರಡನೇ ವಾರದಿಂದಲೇ ನಗರದ ಬಹುತೇಕ ಭಾಗದ ಬೀದಿ ವ್ಯಾಪಾರ ಬಂದ್‌ ಆಗಿದ್ದವು. ಇನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಲಾಕ್‌ಡೌನ್‌ ಘೋಷಿಸಿದ ನಂತರ ಎಲ್ಲ ಬೀದಿ ಬದಿ ವ್ಯಾಪಾರ ಬಂದ್‌ ಆಗಿದ್ದು, ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸಾವಿರಾರು ಕುಟುಂಬಗಳು  ಪರದಾಡುವಂತಾಗಿವೆ.

ಆಹಾರ ಮಾರಾಟ ಮಾಡುವ ವೇಳೆ ಹೆಚ್ಚು ಜನರು ಜಮಾಯಿಸುವುದರಿಂದ ಕೋವಿಡ್ ಹರಡಬಹುದು ಎಂಬ ನೆಪವೊಡ್ಡಿರುವ ಅಧಿಕಾರಿಗಳು ಲಾಕ್‌ಡೌನ್‌ ಘೋಷಣೆಗೂ ಒಂದು ವಾರದ ಮೊದಲೆ ಬೀದಿ ಬದಿ, ರಸ್ತೆ ಇಕ್ಕೆಲ, ಪಾದಚಾರಿ ಮಾರ್ಗ, ಮಾರುಕಟ್ಟೆ, ಬಸ್‌ ನಿಲ್ದಾಣಗಳ ಬಳಿ ವ್ಯಾಪಾರ ಮಾಡುತ್ತಿದ್ದ ತಿಂಡಿ-ತಿನಿಸು, ಟೀ ಅಂಗಡಿ, ಗೋಬಿ, ಪಾನೀಪುರಿ, ಚಾಟ್ಸ್‌, ಬಿಡಿ ಹಣ್ಣು ಮಾರಾಟ ಸೇರಿದಂತೆ ಮತ್ತಿತರ ಅಂಗಡಿಗಳ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದರು.

ವ್ಯಾಪಾರ ಕುಟುಂಬಕ್ಕೆ ಆಧಾರ: ಮೈಸೂರು ನಗರದಲ್ಲಿ ಪ್ರತಿನಿತ್ಯ ಬೀದಿ ಬದಿ ವ್ಯಾಪಾರದಲ್ಲೇ ಕನಿಷ್ಠ 30ರಿಂದ 50 ಲಕ್ಷ ರೂ. ವ್ಯಾಪಾರ ವಹಿವಾಟು ನಡೆಯುತ್ತದೆ. ಪ್ರತಿ ವ್ಯಾಪಾರಿಯೂ ನಿತ್ಯ ಕನಿಷ್ಠ 500 ರೂ.ನಿಂದ ಎರಡು ಸಾವಿರದವರೆಗೂ ಸಂಪಾದನೆ ಮಾಡುತ್ತಾರೆ. ಇದೇ ಅವರ ಕುಟುಂಬಕ್ಕೆ ಆಧಾರ ಮತ್ತು ಆದಾಯ ಮೂಲವಾಗಿದೆ. ಆದರೆ ಲಾಕ್‌ಡೌನ್‌ ಪರಿಣಾಮ ವ್ಯಾಪಾರಿಗಳು ಕಣ್ಣು ಬಾಯಿ ಬಿಡುವಂತಾಗಿದೆ. ಒಟ್ಟಾರೆ ಒಂದು ತಿಂಗಳಲ್ಲಿ ಬಿದಿ ಬದಿ ವ್ಯಾಪರದಲ್ಲಿ ಒಟ್ಟಾರೆ 10ರಿಂದ 15 ಕೋಟಿ ರೂ. ನಷ್ಟ ಉಂಟಾಗಿದೆ.

ಕಳೆದ 20 ವರ್ಷಗಳಿಂದ ಬೆಳಗ್ಗೆ ಮತ್ತು ಸಂಜೆ ಎರಡು ತಾಸು ಫ‌ುಟ್‌ಪಾತ್‌ ಮೇಲೆ ವ್ಯಾಪಾರ ಮಾಡುತ್ತಿದ್ದೆ. ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ. ಬದಲಿಗೆ ಜನರಿಗೂ ಕಡಿಮೆ, ಸುಲಭವಾಗಿ ತರಕಾರಿಗಳು ಸಿಗುತ್ತಿದ್ದವು. ಕೋವಿಡ್ ಮಹಾಮಾರಿ ನಮ್ಮ ಹೊಟ್ಟೆ ಮೇಲೆ ತಣ್ಣೀರು ಬಟ್ಟೆಯಾಕಿದೆ.
● ನಂಜುಂಡ, ಬೀದಿಬದಿ ವ್ಯಾಪಾರಿ

ಸತೀಶ್‌ ದೇಪುರ

ಟಾಪ್ ನ್ಯೂಸ್

Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು

Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು

World Rapid Chess: ಕಡೆಗೂ ಅರ್ಜುನ್‌ ಎರಿಗೈಸಿಗೆ ಅಮೆರಿಕ ವೀಸಾ

World Rapid Chess: ಕಡೆಗೂ ಅರ್ಜುನ್‌ ಎರಿಗೈಸಿಗೆ ಅಮೆರಿಕ ವೀಸಾ

Women’s ODI: ಹರ್ಲೀನ್ ಶತಕ; ವಿಂಡೀಸ್‌ ವಿರುದ್ಧ ಭಾರತಕ್ಕೆ 2-0 ಸರಣಿ ಜಯ

Women’s ODI: ಹರ್ಲೀನ್ ಶತಕ; ವಿಂಡೀಸ್‌ ವಿರುದ್ಧ ಭಾರತಕ್ಕೆ 2-0 ಸರಣಿ ಜಯ

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

Bhalla,-VK-Singh-Gov.

New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-hunsur

Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

22-hunsur

Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು

Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು

World Rapid Chess: ಕಡೆಗೂ ಅರ್ಜುನ್‌ ಎರಿಗೈಸಿಗೆ ಅಮೆರಿಕ ವೀಸಾ

World Rapid Chess: ಕಡೆಗೂ ಅರ್ಜುನ್‌ ಎರಿಗೈಸಿಗೆ ಅಮೆರಿಕ ವೀಸಾ

Women’s ODI: ಹರ್ಲೀನ್ ಶತಕ; ವಿಂಡೀಸ್‌ ವಿರುದ್ಧ ಭಾರತಕ್ಕೆ 2-0 ಸರಣಿ ಜಯ

Women’s ODI: ಹರ್ಲೀನ್ ಶತಕ; ವಿಂಡೀಸ್‌ ವಿರುದ್ಧ ಭಾರತಕ್ಕೆ 2-0 ಸರಣಿ ಜಯ

k

Udupi: ʼಭಾರತೀಯ ಸಂಸ್ಕೃತಿ, ಭಗವದ್ಗೀತೆʼ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.