ಪ್ರವಾಸಿಗರಿಗಾಗಿ ರೈಲು ಕೋಚ್ ಕೆಫೆಟೇರಿಯಾ
Team Udayavani, Jun 23, 2020, 5:12 AM IST
ಮೈಸೂರು: ನವೀಕೃತಗೊಂಡ ನಗರದ ರೈಲ್ವೆ ವಸ್ತು ಸಂಗ್ರಹಾಲಯಕ್ಕೆ ಹಳೆಯ ರೈಲ್ವೆ ಬೋಗಿಯೊಂದನ್ನು ಕೆಫೆಟೇರಿಯಾ ಆಗಿ ವಿಶಿಷ್ಟ ರೀತಿಯಲ್ಲಿ ಪರಿವರ್ತಿಸಲಾಗಿದೆ. ವಸ್ತು ಸಂಗ್ರಹಾಲಯಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ರೈಲು ಬೋಗಿ ಯೊಂದನ್ನು ರೆಸ್ಟೋರೆಂಟ್ ಆಗಿ ಪರಿವರ್ತಿಸಿದೆ.
ನವೀಕೃತ ಬೋಗಿಯಲ್ಲಿ ಸೃಷ್ಟಿಸಿರುವ ವಾತಾವರಣ, ಪಾರಂಪರಿಕ ಬೋಗಿ ಮತ್ತು ರೈಲುಗಾಡಿಗಳಿಗೆ ಸಮಕಾಲೀನ ಕಲೆ, ಬಹು ಮಾಧ್ಯಮ, ವಿಡಿಯೋ ಮತ್ತು ಧ್ವನಿ ಅಳವಡಿಸಿದೆ. ಪ್ರವಾಸಿಗರಿಗಾಗಿ ರೈಲು ಕೋಚ್ ಕೆಫೆಟೇರಿಯಾ ಸಿದ್ಧವಾಗಿದೆ. ರೈಲ್ವೆ ಸಂಗ್ರಹಾಲಯದ ಹಲವು ಹೊಸ ವೈಶಿಷ್ಟಗಳಲ್ಲಿ ಕೋಚ್ ರೆಸ್ಟೋರೆಂಟ್ ಒಂದಾಗಿದೆ. ಹಳೆಯ ಉಗಿ ಲೋಕೋಮೋಟಿವ್ಗಳು, ಪುರಾತ ನ ಹೆಂಚಿನ ಹೊದಿಕೆ ಶೈಲಿಯಲ್ಲಿ ರೆಸ್ಟೋರೆಂಟ್ ನಿರ್ಮಿಸಲಾಗಿದೆ.
ಇದು ದಾರಿ ಪಕ್ಕದ ರೈಲ್ವೆ ನಿಲ್ದಾಣದ ಮತ್ತು ಲೆವೆಲ್ ಕ್ರಾಸಿಂಗ್ ಗೇಟ್ಗಳ ಭಾವನೆಯೊಂದಿಗೆ, ಹಸಿರು ಸುರಂಗಮಾರ್ಗ, ಆಂಫಿ ಥಿಯೇಟರ್, ಹೊರಾಂ ಗಣ ಪ್ರದರ್ಶನ ಅದ್ಭುತ ಅನುಭವ ನೀಡಲಿದೆ. ಕೋಚ್ ರೆಸ್ಟೋರೆಂಟ್ನಲ್ಲಿ ಒಂದು ಬಾರಿಗೆ 3ರಿಂದ 4 ಕುಟುಂಬಗಳಿಗೆ ಆತಿಥ್ಯ ವಹಿಸಬಲ್ಲದು. ಶುಚಿ, ರುಚಿ, ಆರೋಗ್ಯಕರ ತಿಂಡಿ, ಲಘು ಉಪಾಹಾರ ಮತ್ತು ಕಾಫಿ ಮತ್ತು ಚಹಾ ಸವಿಯಲು ಉತ್ತಮ ವಾತಾವರಣ ಕಲ್ಪಿಸಲಾಗಿದೆ.
ಕೋಚ್ ರೆಸ್ಟೋರೆಂಟ್ ಉದ್ಘಾಟನೆ: ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣ ಗರ್ಗ್ ಕೋಚ್ ರೆಸ್ಟೋರೆಂಟನ್ನು ಸೋಮ ವಾರ ಉದ್ಘಾಟಿಸಿದರು. ಈ ಕೋಚ್ ರೆಸ್ಟೋರೆಂಟ್ ಎಸ್ ಡಬ್ಲ್ಯುಆರ್ಡಬ್ಲ್ಯುಡಬ್ಲ್ಯುಒ ಪದಾಧಿಕಾರಿಗಳ ಆಶ್ರಯದಲ್ಲಿ ಲಾಭ ರಹಿತ-ನಷ್ಟವಿಲ್ಲದ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಈ ಸಂದರ್ಭದಲ್ಲಿ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.