ಎರಡು ಚಿರತೆ ಸೆರೆ, ಸಲಗ ರಂಪಾಟ


Team Udayavani, Oct 24, 2021, 1:14 PM IST

ಆನೆ ದಾಳಿ

ಮೈಸೂರು:ಜನ ಜಾನುವಾರುಗಳನ್ನು ಭೀತಿಗೊಳಿಸಿದ್ದ ಎರಡು ಚಿರತೆಗಳು ಶನಿವಾರ ಪ್ರತ್ಯೇಕ ಸ್ಥಳಗಳಲ್ಲಿ ಸೆರೆ ಸಿಕ್ಕಿವೆ. ಎಚ್‌.ಡಿ.ಕೋಟೆ ತಾಲೂಕು ಚಂಗೌಡನಹಳ್ಳಿಯಲ್ಲಿ ಇರಿಸಿದ್ದ ಬೋನ್ನಲ್ಲಿ 5 ವರ್ಷದ ಗಂಡು ಚಿರತೆ ಬಂಧಿಯಾಗಿದೆ. ಇದೇ ವೇಳೆ

ನಂಜನಗೂಡು ತಾಲೂಕಿನ ಚಿಲಕ್ಕಹಳ್ಳಿಯಲ್ಲಿ ಆಹಾರ ಅರಿಸಿ ಬಂದ ಮತ್ತೂಂದು ಚಿರತೆ ಬೋನ್ನಲ್ಲಿ ಸೆರೆ ಸಿಕ್ಕಿದೆ. ನಡುವೆ, ನಾಗರಹೊಳೆ ಉದ್ಯಾನದಲ್ಲಿ ಸಲಗವೊಂದು ಸಿಕ್ಕಾಪಟ್ಟೆ ದಾಂಧಲೆ ನಡೆಸಿ ಜಮೀನಿನಲ್ಲಿ ಬೆಳೆಗಳನ್ನು ಧ್ವಂಸಗೊಳಿಸಿದೆ.

ಗ್ರಾಮಕ್ಕೆ ನುಗ್ಗಿ ಕೊಟ್ಟಿಗೆ ಹಾಗೂ ಮನೆಯ ಕಾಂಪೌಂಡ್‌, ಮೇಲ್ಚಾವಣಿ ಕೆಡವಿ ಹಾಕಿದೆ. ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ದಾಳಿ ನಡೆಸಿ ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿತು. ಕಡೆಗೆ ಸಲಗವನ್ನು ಕಾಡಿಗಟ್ಟುವಲ್ಲಿ ಅರಣ್ಯ ಸಿಬ್ಬಂದಿ ಹೈರಾಣಾದರು.

ಕೊಟ್ಟಿಗೆ, ಮನೆ ಕಾಂಪೌಂಡ್ಕೆಡವಿದ ಕಾಡಾನೆ

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ನಾಗಾಪುರ ಬಳಿ ಅಳವಡಿಸಿದ್ದ ರೈಲ್ವೆ ಕಂಬಿ ಬೇಲಿಯನ್ನೆ ಕೆಡವಿ ಹೊರ ದಾಟಿರುವ ಒಂಟಿ ಸಲಗವು ಭಾರತವಾಡಿ, ವೀರನಹೊಸಹಳ್ಳಿಯಲ್ಲಿ ಸಾಕಷ್ಟು ದಾಂಧಲೆ ನಡೆಸಿರುವ ಘಟನೆ ಶನಿವಾರ ಜರುಗಿದೆ. ಶನಿವಾರ ಮುಂಜಾನೆ ಉದ್ಯಾನದ ವೀರನಹೊಸಹಳ್ಳಿ ವಲಯದಂಚಿನ ನಾಗಾಪುರ ಪುನರ್ವಸತಿ ಕೇಂದ್ರದ ಬಳಿ ರೈಲ್ವೆ ಹಳಿ ಬೇಲಿಯನ್ನು ಕೆಡವಿ, ಪಕ್ಕದ ಭಾರತವಾಡಿ ಗ್ರಾಮಕ್ಕೆ ದಾಂಗುಡಿ ಇಟ್ಟ ಸಲಗವು ರೈತ ಗಿರೀಶ್‌ ಅವರ ತೋಟದಲ್ಲಿ ಸಾಕಷ್ಟು ಹಾನಿಗೊಳಿಸಿದೆ. ಇದಲ್ಲದೇ ಶಶಿಕಲಾ ರಾಮಣ್ಣ ಎಂಬುವವರ ಜಮೀನಿನಲ್ಲಿ ಶುಂಠಿ ಹಾಗೂ ಕುಂಬಳಕಾಯಿ ಬೆಳೆಗಳನ್ನು ತಿಂದು-ತುಳಿದು ಧ್ವಂಸಗೊಳಿಸಿದೆ.

ಇದನ್ನು ಕಂಡ ರೈತರು ಸಲಗವನ್ನು ಬೆದರಿಸುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತ ಸಲಗವು, ವೀರನಹೊಸಳ್ಳಿ ಗ್ರಾಮದತ್ತ ತೆರಳಿ ಗ್ರಾಮದ ಚೌಡಮ್ಮ ಅವರಿಗೆ ಸೇರಿದ ಕೊಟ್ಟಿಗೆ ಮತ್ತು ಮನೆಯ ಕಾಂಪೌಂಡ್‌, ಮೇಲ್ಛಾವಣಿ ಕೆಡವಿ ಹಾಕಿ, ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ವೀರನಹೊಸಹಳ್ಳಿಯ ಅರಣ್ಯ ಇಲಾಖೆ ಸಿಬ್ಬಂದಿ ವಸತಿಗೃಹದ ಕಾಂಪೌಂಡ್‌ ಮತ್ತು ಗೇಟ್‌ ಮುರಿದು ಹಾಕಿದೆ. ಉದ್ಯಾನದಿಂದ ಒಟ್ಟು 9 ಆನೆಗಳ ಹಿಂಡು ನಾಗಾಪುರ ಕೇಂದ್ರದ ಬಳಿ ಮುರಿದಿದ್ದ ರೈಲ್ವೆ ಹಳಿ ಬೇಲಿ ದಾಟಿ ಹೊರಬಂದಿದ್ದವು.

ತಕ್ಷಣವೇ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಉದ್ಯಾನ ಸೇರಿಸುವಲ್ಲಿ ಯಶಸ್ವಿಯಾದರೂ ಒಂದು ಸಲಗ ಮಾತ್ರ ತಪ್ಪಿಸಿಕೊಂಡು ನಾಗಾಪುರ ಶಾಲೆ ಬಳಿಯ ವುಡ್‌ಲಾಟ್‌ ಸೇರಿಕೊಂಡಿತ್ತು. ನಂತರ ಎಲ್ಲೆಡೆ ಅವಾಂತರ ಸೃಷ್ಟಿಸಿ, ಹಾನಿ ಮಾಡಿದ್ದ ಸಲಗವನ್ನು ಕೊನೆಗೆ ಗ್ರಾಮಸ್ಥರ ಸಹಕಾರದೊಂದಿಗೆ ಉದ್ಯಾನ ಸೇರಿಸುವಲ್ಲಿ ಯಶಸ್ವಿಯಾಗಿ ನಿಟ್ಟುಸಿರು ಬಿಟ್ಟರು.

ವಿಷಯ ತಿಳಿದು ಹೆಚ್ಚಿನ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪಟಾಕಿ ಸಿಡಿಸಿ, ಅಕ್ಕಪಕ್ಕದ ಗ್ರಾಮಸ್ಥರ ನೆರವಿನಿಂದ ಸಲಗವನ್ನು ವೀರನಹೊಸಳ್ಳಿ ಮುಖ್ಯದ್ವಾರದ ಮೂಲಕ ಕಾಡಿಗೆ ಅಟ್ಟಲಾಯಿತು. ಕಾರ್ಯಾಚರಣೆಯಲ್ಲಿ ವೀರನಹೊಸಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ವೀರನಹೊಸಳ್ಳಿ ವಲಯ ಅರಣ್ಯಾಧಿಕಾರಿ ನಮನ್‌ ನಾರಾಯಣ ನಾಯಕ್‌, ಡಿಆರ್‌ಎಫ್‌ಒಗಳಾದ ಚಂದ್ರೇಶ್‌. ದ್ವಾರಕನಾಥ್‌ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಬೋನ್ನಲ್ಲಿ ಬಂಧಿಯಾದ ಗಂಡು ಚಿರತೆ

ಎಚ್‌.ಡಿ.ಕೋಟೆ: ಆಹಾರ ಅರಸಿ ನಾಡಿಗೆ ಬಂದು ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದ್ದ ಸುಮಾರು 5 ವರ್ಷದ ಗಂಡು ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಬಂಧಿಯಾಗಿದೆ. ತಾಲೂಕಿನ ಚಂಗೌಡನಹಳ್ಳಿ ಗ್ರಾಮದಲ್ಲಿ ಪ್ರತ್ಯಕ್ಷಗೊಂಡು ಸಾಕುಪ್ರಾಣಿಗಳನ್ನು ಕೊಂದಿದ್ದ ಚಿರತೆ ಈ ಭಾಗದ ರೈತರು ಹಾಗೂ ಗ್ರಾಮಸ್ಥರಲ್ಲಿ ಭಯಭೀತಿ ಹುಟ್ಟಿಸಿತ್ತು. ಸಂಜೆ ವೇಳೆ ರೈತರು ತಮ್ಮ ಜಮೀನುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದರು.

ಚಿರತೆ ಉಪಟಳದಿಂದ ಹೈರಾಣಾಗಿದ್ದ ಗ್ರಾಮಸ್ಥರು ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು. ಜನರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದ ಹೊರವಲಯದಲ್ಲಿ ಬೋನಿರಿಸಿ ಚಿರತೆ ಸೆರೆಗೆ ತಂತ್ರ ರೂಪಿಸಿದ್ದರು. ಶುಕ್ರವಾರ ರಾತ್ರಿ ಅಹಾರ ಅರಸಿ ಬಂದ ಚಿರತೆ ಬೋನಿನಲ್ಲಿ ಸೆರೆಯಾಗಿದೆ.

ಚಿರತೆ ಸೆರೆಯಾದ ಸುದ್ದಿ ಶನಿವಾರ ಮುಂಜಾನೆ ತಿಳಿಯುತ್ತಿದ್ದಂತೆಯೇ ಚಿರತೆ ಕಣ್ತುಂಬಿಕೊಳ್ಳಲು ಚಂಗೌಡನಹಳ್ಳಿ ಆಸುಪಾಸಿನ ಗ್ರಾಮಗಳಿಂದ ಭಾರೀ ಸಂಖ್ಯೆಯಲ್ಲಿ ಜನರು ಧಾವಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಜನರನ್ನು ನಿಯಂತ್ರಿಸಿ, ಸೆರೆಯಾದ ಹುಲಿಯನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ. ಬಂಧಿಯಾದ ಚಿರತೆ ಜನರನ್ನು ಕಂಡು ಬೋನಿನಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಮೂಗು ಮತ್ತು ಮುಖಕ್ಕೆ ಕೊಂಚ ಗಾಯಗಳನ್ನು ಮಾಡಿಕೊಂಡಿದೆಯಾದರೂ ಚಿರತೆ ಆರೋಗ್ಯವಂತವಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿÊ

ಆಹಾರ ಅರಿಸಿ ಬಂದು ಬೋನ್ಗೆ ಬಿದ್ದ ಚಿರತೆ

ನಂಜನಗೂಡು: ತಾಲೂಕಿನ ಮಡುವಿನಹಳ್ಳಿ ಸಮೀಪ ಚಿಲಕ್ಕಹಳ್ಳಿ ಗ್ರಾಮದಲ್ಲಿ ಚಿರತೆ ಸೆರೆ ಸಿಕ್ಕಿದೆ. ಗ್ರಾಮದ ಗುರುಸ್ವಾಮಪ್ಪ ಅವರ ಜಮೀನಲ್ಲಿ ಶುಕ್ರವಾರ ತಡರಾತ್ರಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಶನಿವಾರ ಬೆಳಗಿನ ಜಾವ ಚಿರತೆ ಚೀರಾಟದ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಚಿಲಕಳ್ಳಿ ಗ್ರಾಮಸ್ಥರು ಜಮೀನಿಗೆ ಭೇಟಿ ನೀಡಿ ನೋಡಿದಾಗ ಬೋನ್‌ನಲ್ಲಿ ಚಿರತೆ ಬಂಧಿಯಾಗಿರುವುದು ತಿಳಿದು ಬಂದಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಅಗಮಿಸಿದ ಹೆಡಿಯಾಲ ವಲಯ ಅರಣ್ಯ ಅಧಿಕಾರಿಗಳಾದ ಎಚ್‌.ಎಂ. ಮಂಜುನಾಥ ಮತ್ತು ಉಪ ವಲಯ ಅರಣ್ಯ ಅಧಿಕಾರಿಗಳಾದ ಮಹಾಂತೇಶ್‌ ಕುಂಬಾರ ಮತ್ತು ರವಿ ಕರೋಳಿ, ಚಂಗೌಡನಹಳ್ಳಿ ಗ್ರಾಮದ ಅಮ್ಜದ್‌ ಶೇಖ್‌, ಅರಣ್ಯ ರಕ್ಷಕರು ಮತ್ತು ಸಿಬ್ಬಂದಿ ಬೋನ್‌ನಲ್ಲಿ ಬಂಧಿಯಾಗಿದ್ದ ಚಿರತೆಯನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟರು. ಭಾರೀ ಉಪಟಳ ನೀಡುತ್ತಿದ್ದ ಚಿರತೆ ಸೆರೆ ಸಿಕ್ಕಿದ್ದರಿಂದ ಈ ಭಾಗದ ಗ್ರಾಮಸ್ಥರು ನಿರಾಶರಾಗಿದ್ದಾರೆ.

ಟಾಪ್ ನ್ಯೂಸ್

KRS (2)

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ

cyber crime

Cyber ​​fraud ಬದಲಾಗಿದೆ: ನಮ್ಮವರೇ ಆಟಗಾರರು; ಆಡಿಸುವಾತ ಮಾತ್ರ ಬೇರೆ!

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ

bjp-congress

Contractor ಆತ್ಮಹ*ತ್ಯೆ: ರಾಜಕೀಯ ಜಟಾಪಟಿ

1-gite

Udupi: ಇಂದು ಗೀತೋತ್ಸವದ ಮಂಗಳ್ಳೋತ್ಸವ

gold

D.K.Suresh ಹೆಸರಲ್ಲಿ 14 ಕೆಜಿ ಚಿನ್ನ ವಂಚನೆ

1-hhh-shi

Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KRS (2)

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ

cyber crime

Cyber ​​fraud ಬದಲಾಗಿದೆ: ನಮ್ಮವರೇ ಆಟಗಾರರು; ಆಡಿಸುವಾತ ಮಾತ್ರ ಬೇರೆ!

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ

bjp-congress

Contractor ಆತ್ಮಹ*ತ್ಯೆ: ರಾಜಕೀಯ ಜಟಾಪಟಿ

1-gite

Udupi: ಇಂದು ಗೀತೋತ್ಸವದ ಮಂಗಳ್ಳೋತ್ಸವ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

KRS (2)

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ

cyber crime

Cyber ​​fraud ಬದಲಾಗಿದೆ: ನಮ್ಮವರೇ ಆಟಗಾರರು; ಆಡಿಸುವಾತ ಮಾತ್ರ ಬೇರೆ!

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ

bjp-congress

Contractor ಆತ್ಮಹ*ತ್ಯೆ: ರಾಜಕೀಯ ಜಟಾಪಟಿ

1-gite

Udupi: ಇಂದು ಗೀತೋತ್ಸವದ ಮಂಗಳ್ಳೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.