ಚಾಮುಂಡಿಬೆಟ್ಟ ಹಸಿರೀಕರಣಕ್ಕೆ ನರೇಗಾ ಬಳಸಿ
Team Udayavani, Jun 17, 2020, 5:47 AM IST
ಮೈಸೂರು: ಮೈಸೂರು ಹಸಿರೀಕರಣ ಗೊಳಿಸುವ ನಿಟ್ಟಿನಲ್ಲಿ ಚಾಮುಂಡಿ ಬೆಟ್ಟದಲ್ಲಿ ಲಕ್ಷ ಗಿಡ ನೆಡಲು ಅರಣ್ಯ ಇಲಾಖೆ ಜತೆಗೆ ನರೇಗಾ ಯೋಜನೆಯನ್ನೂ ಬಳಸಿ ಕೊಳ್ಳು ವಂತೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಸೂಚಿಸಿದರು. ಚಾಮುಂಡಿ ಬೆಟ್ಟದಲ್ಲಿ 1 ಲಕ್ಷ ಗಿಡ ನೆಡುವ ಹಾಗೂ 3 ವರ್ಷ ನಿರ್ವಹಣೆ ಮಾಡುವ ಬಗ್ಗೆ ಚಾಮುಂಡಿ ಬೆಟ್ಟದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನರೇಗಾ ಯೋಜನೆಯ ಜಾರ್ಬ್ಕಾರ್ಡ್‌ದಾರರಿಗೆ ಗುಂಡಿಗಳನ್ನು ತೆಗೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು. ಈ ಮೂಲಕ ಉದ್ಯೋಗದ ಜೊತೆಗೆ ಹಸಿರೀಕರಣಕ್ಕೂ ಅನುಕೂಲವಾಗಲಿದೆ ಎಂದು ತಿಳಿಸಿದರು.
ಶ್ರಮ ವ್ಯರ್ಥವಾಗದಿರಲಿ: ಗಿಡಗಳನ್ನು ನೆಟ್ಟ ಮೇಲೆ ಅವುಗಳ ನಿರ್ವಹಣೆ, ನೀರಿನ ವ್ಯವಸ್ಥೆಯನ್ನೂ ಸಮರ್ಪಕವಾಗಿ ಕಲ್ಪಿಸಬೇಕು. ಪ್ರಸಕ್ತ ವರ್ಷದಲ್ಲಿ ಹೆಚ್ಚಿನ ಸಿದಟಛಿತೆ ಮಾಡಿಕೊಳ್ಳದಿದ್ದರಿಂದ ಸಮತಟ್ಟು ಪ್ರದೇಶ ಹಾಗೂ ಅವಕಾಶ ಇರುವ ಜಾಗದಲ್ಲಿ ಗಿಡ ನೆಡಬೇಕು. ಜೊತೆಗೆ ನೆಟ್ಟ ಗಿಡಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಮುಂದಿನ ವರ್ಷದಲ್ಲಿ ಸಂಪೂರ್ಣ ಯೋಜನೆಗಳೊಂದಿಗೆ ಹಾಗೂ ಸಿದತೆಗಳೊಂದಿಗೆ ಗಿಡ ನೆಡಬೇಕಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ನೀರು ಮರು ಬಳಕೆಯಾಗಲಿ: ಈಗ ನೀರಿನ ಬಳಕೆ ಆದ ಮೇಲೆ ಅದನ್ನು ರೀಸೈಕಲ್ ಮಾಡುವುದು ಹಾಗೂ ಎಲ್ಲ ಗಿಡಗಳಿಗೆ ಆ ನೀರನ್ನು ಬಳಕೆ ಮಾಡುವ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಕೇಳಿ ಪಡೆದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಮೈಸೂರಿನ ಹೊರವಲಯದಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ಕೈಗೊಂಡ ತ್ಯಾಜ್ಯ ನೀರು ಪುನರ್ ಬಳಕೆ ತಂತ್ರಜ್ಞಾನದ ಮಾದರಿಯಲ್ಲಿ ಚಾಮುಂಡಿ ಬೆಟ್ಟದಲ್ಲಿ ನಿರ್ವಹಣೆ ಮಾಡಬಹುದಾಗಿದೆ. ಈ ಮೂಲಕ ನೀರಿನ ವ್ಯವಸ್ಥೆ ಮಾಡಿದರೆ ಇಡೀ ಚಾಮುಂಡಿ ಬೆಟ್ಟದಲ್ಲಿ ನೆಡುವ ಗಿಡಗಳಿಗೆ ಯಾವುದೇ ಕಾರಣಕ್ಕೂ ಬೇಸಿಗೆಯಲ್ಲೂ ನೀರಿನ ಕೊರತೆಯಾಗುವುದಿಲ್ಲ ಎಂದರು.
ದೈವೀ ವನಕ್ಕೆ ಭೇಟಿ: ಚಾಮುಂಡೇಶ್ವರಿ ಬೆಟ್ಟದ ತಪ್ಪಲಿನಲ್ಲಿ ಇರುವ ಚಾಮುಂಡೇಶ್ವರಿ ದೈವೀ ವನಕ್ಕೆ ಸಹಕಾರ ಮತ್ತು ಸಚಿವರಿಬ್ಬರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಭೆಯಲ್ಲಿ ಶಾಸಕರಾದ ರಾಮದಾಸ್, ದೇವೇಗೌಡ, ನಾಗೇಂದ್ರ, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಬೆಟ್ಟದಲ್ಲಿ ನೀಲಗಿರಿ ತೆರವುಗೊಳಿಸಲು ತೀರ್ಮಾನ: ಚಾಮುಂಡೇಶ್ವರಿ ಬೆಟ್ಟದಲ್ಲಿರುವ 310 ಹೆಕ್ಟೇರ್ ಪ್ರದೇಶದಲ್ಲಿರುವ ನೀಲಗಿರಿ ಗಿಡಗಳನ್ನು ಸಂಪೂರ್ಣ ಕಿತ್ತುಹಾಕಲು ನಿರ್ಧರಿಸಲಾಗಿದೆ ಎಂದು ಅರಣ್ಯ ಇಲಾಖೆ ಸಚಿವ ಆನಂದ್ ಸಿಂಗ್ ಹೇಳಿದರು. ಆ ಜಾಗದಲ್ಲಿ ಹಣ್ಣಿನ ಗಿಡಗಳಾದ ಸೀತಾಫಲ ಸೇರಿದಂತೆ ಇನ್ನಿತರ ಜಾತಿ ಸಸಿಗಳನ್ನು ನೆಡುವ ತೀರ್ಮಾನಕ್ಕೆ ಬರಲಾಗಿದೆ. ಹೀಗಾಗಿ ಸದ್ಯಕ್ಕೆ ಈ ಪ್ರದೇಶದಲ್ಲಿ ಸಾಂಕೇತಿಕವಾಗಿ ಸ್ವಲ್ಪ ಗಿಡಗಳನ್ನು ನೆಟ್ಟು, ರೂಪುರೇಷೆಗಳನ್ನು ಸಿದಟಛಿಪಡಿಸಿಕೊಂಡು ನರೇಗಾ ಯೋಜನೆಯಡಿ ಗುಂಡಿಗಳನ್ನು ತೆಗೆಯುವುದು ಸೇರಿದಂತೆ ನಿರ್ವಹಣೆ ಮಾಡುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.