“ಗ್ರಾಮ ವಾಸ್ತವ್ಯದಿಂದ ಆಡಳಿತ ಚುರುಕು’ : ವೆಂಕಟೇಶ್ ನಾಯಕ್
Team Udayavani, Feb 21, 2021, 3:39 AM IST
ಬಳ್ಕುಂಜೆ: ಫೆಬ್ರವರಿಯಿಂದ ಪ್ರತೀ ತಿಂಗಳ 3ನೇ ಶನಿವಾರ ರಾಜ್ಯಾದ್ಯಂತ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಲಿದೆ. ಇದರಿಂದ ಸಹಜವಾಗಿ ಆಡಳಿತ ವ್ಯವಸ್ಥೆ ಚುರುಕುಗೊಳ್ಳುತ್ತದೆ. ಗ್ರಾಮ ವಾಸ್ತವ್ಯ ಎನ್ನುವುದು ಅಧಿಕಾರಿಗಳಿಗೆ ಹೊಸ ಅನುಭವ ಮತ್ತು ಬೆಳಗ್ಗೆಯಿಂದ ಸಂಜೆವರೆಗೆ ಜನರ ಜತೆಗಿದ್ದು ತಾಳ್ಮೆಯಿಂದ ಜನರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಹಾಗೂ ಕೆಲವು ಅರ್ಜಿಗಳ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗುವುದು ಎಂದು ಮೂಲ್ಕಿ ತಹಶೀಲ್ದಾರ್ ವೆಂಕಟೇಶ್ ನಾಯಕ್ ಹೇಳಿದರು.
ಶನಿವಾರ ಬಳ್ಕುಂಜೆ ಗ್ರಾ.ಪಂ. ವಠಾರದಲ್ಲಿ ನಡೆದ ದ.ಕ. ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ಮೂಲ್ಕಿ ತಾಲೂಕು ತಹಶೀಲ್ದಾರ್ ಗ್ರಾಮ ವ್ಯಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷಿ, ತೋಟಗಾರಿಕೆ, ಆರೋಗ್ಯ, ಆಹಾರ, ಸಮಾಜ ಕಲ್ಯಾಣ ಮತ್ತಿತರ ಇಲಾಖೆಗಳ ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದು, ಆಯಾ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಹಾಗೂ ಮಾಹಿತಿ ನೀಡಿದರು.
ಅರ್ಹ ಫಲಾನುಭವಿಗಳಿಗೆ ಈ ಸಂದರ್ಭ ಪಿಂಚಣಿ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭ ಬಳ್ಕುಂಜೆ ಗ್ರಾ.ಪಂ. ಅಧ್ಯಕ್ಷೆ ಮಮತಾ ಪೂಂಜಾ, ಉಪಾಧ್ಯಕ್ಷ ಆನಂದ, ಸರ್ವೇ ಸುಪರ್‌ವೈಸರ್ ರೂಪಕಲಾ ಶೆಟ್ಟಿ, ಮೂಲ್ಕಿ ಉಪ ತಹಶೀಲ್ದಾರ್ ಬಾಲಚಂದ್ರ, ಮೂಲ್ಕಿ ಸಹಾಯಕ ಕೃಷಿ ಅಧಿಕಾರಿ ಅಬ್ದುಲ್ ಬಶೀರ್, ಸರ್ವೆಯರ್ ಮಧುಕರ್, ಕಂದಾಯ ನಿರೀಕ್ಷಕ ಸಂತೋಷ್, ಗ್ರಾಮ ಲೆಕ್ಕಿಗರಾದ ಸುಜಿತ್, ಸುನಿಲ್ ಕುಮಾರ್, ನಾಡ ಕಚೇರಿ ಸಿಬಂದಿ ಉಪಸ್ಥಿತರಿದ್ದರು.
ವಿವಿಧ ಸಮಸ್ಯೆಗಳಿಗೆ ಪರಿಹಾರ
ಪೌತಿ ಖಾತೆ ಬದಲಾವಣೆ, 94ಸಿಸಿ ಅರ್ಜಿ ವಿಲೇವಾರಿ, ಪೈಕಿ ಪಹಣಿ ಒಟ್ಟುಗೂಡಿಸುವುದು, ಕಲಂ 3 ಮತ್ತು 9 ಸರಿಪಡಿಸುವುದು, ಪಿಎಂ ಕಿಸಾನ್ ಯೋಜನೆ ದಾಖಲು, ಮಾಸಾಶನ, ಪಿಂಚಣಿ ಮಂಜೂರಾತಿ ಆದೇಶ ಸಮಸ್ಯೆಗಳ ಪರಿಹಾರ, ಭೂ ದಾಖಲೆಗಳ ಸಮಸ್ಯೆ ಪರಿಹಾರ, ಮತದಾರರ ಪಟ್ಟಿ ಸೇರ್ಪಡೆ ತಿದ್ದುಪಡಿ ಇತರ ಬಗೆಯ ಯೋಜನೆ ಬಗ್ಗೆ ತಿಳಿವಳಿಕೆ ಸಮಸ್ಯೆಗೆ ಸೂಕ್ತ ಪರಿಹಾರ ಈ ಸಂದರ್ಭ ನೀಡಲಾಗುವುದು ಎಂದು ತಹಶೀಲ್ದಾರ್ ವೆಂಕಟೇಶ್ ನಾಯಕ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.