ನಗರದಲ್ಲಿ ವಾಹನ ದಟ್ಟನೆ ಕಡಿಮೆ ಮಾಡಲು ನಾಗರಿಕರು ಯಾವ ಕ್ರಮಗಳನ್ನು ಅನುಸರಿಸಬಹುದು ?
Team Udayavani, Sep 8, 2019, 4:52 PM IST
ಮಣಿಪಾಲ: ನಗರದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ನಾಗರಿಕರಾದ ನಾವೇ ಸ್ವಯಂಪ್ರೇರಿತರಾಗಿ ಯಾವ ಕ್ರಮಗಳನ್ನು ಅನುಸರಿಸಬಹುದು? ಎಂದು ಉದಯವಾಣಿ ತನ್ನ ಓದುಗರಿಗೆ ಕೇಳಿತ್ತು. ಅತ್ಯುತ್ತಮವೆನಿಸಿದ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ.
ಸೈಮನ್ ಫರ್ನಾಂಡಿಸ್: ಆದಷ್ಟು ಸಾರ್ವಜನಿಕ ಸಾರಿಗೆ ಉಪಯೋಗ ಮಾಡುವುದಕ್ಕೆ ಮೊದಲ ಆದ್ಯತೆ. ಸ್ವಂತ ವಾಹನ ಉಪಯೋಗಿಸುವವರು ಶಿಸ್ತುಬದ್ದವಾಗಿ ವಾಹನ ಚಲಾಯಿಸುವುದು.
ಶ್ರೀನಿವಾಸ್ ಜಿ ಶ್ರೀನಿವಾಸ್:
ಮೊದಲು ಮನೆಯಲ್ಲಿರುವ ಎಲ್ಲಾ ಸದಸ್ಯರಿಗೂ ಒಂದೊಂದು ಕಾರು ಬೈಕು ತಗೊಳ್ಳೋ ಷೋಕಿ ಬಿಡಿ ಮನೆಯ ಹತ್ತಿರ ಇರುವ ಅಂಗಡಿಗೆ ಹೋಗಿ ದಿನ ಬಳಕೆಯ ವಸ್ತುಗಳನ್ನು ತೆಗೆದುಕೊಂಡು ಬರುವುದನ್ನು ಅಬ್ಯಾಸ ಮಾಡಿಕೊಳ್ಳಿ ಮನೆಯ ಹತ್ತಿರದ ದೇವಸ್ಥಾನಕ್ಕೆ ಆದಷ್ಟು ನಡೆದುಕೊಂಡು ಹೋಗುವುದನ್ನು ಅಬ್ಯಾಸ ಮಾಡಿಕೊಳ್ಳಿ ರಸ್ತೆಯಲ್ಲಿ ಹೋಗುವಾಗ ಆದಷ್ಟು ಮಟ್ಟಿಗೆ ನಿಮ್ಮಸೈಡಿನಲ್ಲಿ ಗಾಡಿಯನ್ನು ನಿಲ್ಲಿಸಿ ಯದ್ವಾ ತದ್ವಾ ನಿಲ್ಲಿಸುವ ಕೆಟ್ಟಚಾಳಿಯನ್ನು ಬಿಟ್ಟರೆ ಎಲ್ಲವೂ ಸರಿಹೋಗುತ್ತದೆ.
ರಾಮ್ ಪ್ರಸಾದ್ ಬಿಎನ್: ಕಾರು ಗಳನ್ನು ಮನೆಯ ಮುಂದೆ ನಿಲ್ಲಿಸಲು ಅನುಮತಿ ಕೊಡಕೂಡದು.ನಿಲ್ಲಿಸಿದರೆ ದಂಡ ವಿಧಿಸಬೇಕು.ಆಗ ಯಾರ ಮನೆಯಲ್ಲಿ ಕಾರು ನಿಲ್ಲಿಸಲು ಅನುಕೂಲ ಇದೆಯೋ ವರುಮಾತ್ರ ಕಾರು ಕೊಳ್ಳುತ್ತಾರೆ.ಈ ಕ್ರಮದಿಂದ ವಾಹನಗಳ ಒತ್ತಡ ಕಡಿಮೆ ಆಗಬಹುದು.
ಗಣೇಶ್ ಪ್ರಸಾದ್ ಎನ್: ಟ್ರಾಫಿಕ್ ಸಮಸ್ಯೆಗೆ ವಾಹನಗಳ ಉತ್ಪಾದನೆ ಮೇಲೆ ಕಡಿವಾಣ ಹಾಕಿದ್ರೆ ಸಲ್ಲದು, ಮತ್ತು ಎಲ್ಲಾ ವಾಹನ ಚಾಲಕರು ನಿಯಮ ಪಾಲನೆ ಮಾಡಿದರು ವಾಹನದ ಸಂಖ್ಯೆ ಹೆಚ್ಚು ಇದ್ದರೆ ಟ್ರಾಫಿಕ್ ಆಗಿಯೇ ಆಗುತ್ತೆ.ಅದಕ್ಕೆ ಕೆಲವು ಪ್ರದೇಶದ ಅಥವಾ ಕೆಲ ಸಮಯಕ್ಕೆ ನಿಗದಿತ ವಾಹನಗಳ ಬಳಕೆಗೆ ಅನುವು ಮಾಡಿದ್ರೆ (ನಿಗದಿತ ಪ್ರಮಾಣದಲ್ಲಿ) ಸಾಧ್ಯವಿದೆ. ಹಾಗೆಯೇ Gps ಮೂಲಕ family car ಗಳನ್ನು ಟ್ಯಾಗ್ ಮಾಡಿ ಅಂತಹ ಕಾರುಗಳು ಒಂದೇ ಮಾರ್ಗದಲ್ಲಿ ಚಲಿಸುತ್ತಿರುವಾಗ ಒಂದೇ ಅಥವಾ ಪ್ರಯಾಣಿಕರ ಸಂಖ್ರೆ ಆಧರಿಸಿ ಅನುಮತಿ ನೀಡಬೇಕು. ಮತ್ತು ಸಾರ್ವಜನಿಕ ವಾಹನಗಳಿಗೆ ಪ್ರೋತ್ಸಾಹ ನೀಡಬೇಕು. ಅತೀ ಹೆಚ್ಚು ಟ್ರಾಫಿಕ್ ಇರುವ ಕಡೆ ಬ್ರಿಡ್ಗೆಗಳನ್ನು ನಿರ್ಮಾಣ ಮಾಡಿದ್ರೆ ಅಡೆ ತಡೆಗಳನ್ನು ನಿವಾರಿಸಬಹುದು.
ವಿನೋದ್ ಕುಮಾರ್ ಸಿ ಎಂ : ಸಾರ್ವಜನಿಕ ಸಾರಿಗೆಯನ್ನು ಬಳಸುವುದು ಮತ್ತು ಹತ್ತಿರವಿರುವ ಜಾಗಗಳಿಗೆ ನಡೆದುಕೊಂಡು ಹೋಗುವುದು.
ಪ್ರದೀಪ್ ಗೌಡ: ಸಾಫ್ಟ್ ವೇರ್ ಫೀಲ್ಡ್ ನಲ್ಲಿ ಕೆಲಸ ಮಾಡೋರು ಸ್ವಂತ ಕಾರ್ ಮನೇಲಿ ಬಿಟ್ಟು ಪೀಕ್ ಅಪ್ and ಡ್ರಾಪ್ ಕೊಡುವ ಕಂಪೆನಿ ವೆಹಿಕಲ್ ಬಳಕೆ ಮಾಡ್ಕೋಬೇಕು ಸ್ವಲ್ಪ ನಾದ್ರೂ ದಟ್ಟಣೆ ಕಡಿಮೆ ಆಗುತ್ತೆ ಕೆಲವರು ಒಂದು xuv ಕಾರ್ ನಲ್ಲಿ ಒಬ್ಬರೇ ಕೆಲಸಕ್ಕೆ ಬರ್ತರೆ.
ರಾಜೀತ್ ಕಲಪ್ಪ: ಪ್ರತಿಯೊಬ್ಬರೂ ಸಾರಿಗೆಯ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿದಲ್ಲಿ ಯಾವುದೇ ಉಪಾಯ ಅಗತ್ಯವಿಲ್ಲ, , ಒಂದು ವೇಳೆ ಸೀರೀಸ್ ವಾಹನ ಚಾಲನೆ ಅಥವಾ ಒಂದು ಮನೆಗೆ ಒಂದೇ ಕಾರು ಅಥವಾ ಇನ್ಯಾವುದೇ ನಿಯಮಗಳನ್ನು ಜಾರಿಗೆ ತಂದರೂ ಸಂಚಾರಿ ನಿಯಮಗಳು ಪಾಲನೆಯಾಗದಿದ್ದಲ್ಲಿ ಎಲ್ಲವೂ ನೀರಲ್ಲಿ ಸೀಗೇಕಾಯಿ ತೊಳೆದಂತೆ.
ರಾಜಣ್ಣ ವಿಷ್ಣು: ಕಾರ್ ಗಳನ್ನ ಕೊಳ್ಳೋರಿಲ್ಲ, ಆದರೆ ಸರ್ಕಾರವೇ ಕಾರ್ ಉತ್ಪಾದಕರಿಗೆ ಉತ್ತೇಜನ ಕೊಡ್ತಾ ಇದೆ. ಎಲ್ಲಿದೆ ಸ್ವಾಮಿ ಕಾರ್ ನಿಲ್ಲಿಸೋಕೆ ಜಾಗ, ಕಾರ್ ಓಡಿಸೋಕೆ ರಸ್ತೆ. ಇನ್ನು ಎಷ್ಟು ಕಾರ್ ಕೊಳ್ಳಬೇಕು ಜನ. ವಾಯುಮಾಲಿನ್ಯ ಹದಗೆಟ್ಟಿದೆ, ಪೆಟ್ರೋಲ್ ಡೀಸೆಲ್ ರೇಟ್ ಜಾಸ್ತಿ ಆಗಿದೆ. ಇನ್ನೂ ಕಾರ್ ಮಾರಾಟ ಆಗಬೇಕಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.