Shankarpura ಸಾಲ್ಮರ ಕೃಷ್ಣವೇಣಿ ಆಶ್ರಯಧಾಮ, ಆಯುರ್ವೇದ ಆಸ್ಪತ್ರೆ ಉದ್ಘಾಟನೆ
Team Udayavani, Jul 16, 2024, 12:29 AM IST
ಉಡುಪಿ: ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಶಂಕರಪುರ ಸಾಲ್ಮರದಲ್ಲಿ ನೂತನವಾಗಿ ನಿರ್ಮಿಸಿರುವ ಕೃಷ್ಣವೇಣಿ ಆಶ್ರಯಧಾಮ ಹಾಗೂ ಕೃಷ್ಣವೇಣಿ ಆಯುರ್ವೇದ ಆಸ್ಪತ್ರೆಯ ಉದ್ಘಾಟನೆ ಸೋಮವಾರ ನಡೆಯಿತು.
ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಕಟ್ಟಡವನ್ನು ಉದ್ಘಾಟಿಸಿ, ಆಶ್ರಯಧಾಮ ವಿದೇಶಿಯರ ಕಲ್ಪನೆಯಾದರೂ ಪ್ರಸ್ತುತ ನಮ್ಮ ದೇಶಕ್ಕೂ ಇದರ ಆವಶ್ಯಕತೆ ಎದುರಾಗಿದೆ.
ತಂದೆ ಮಾಡಿದ ಕಸುಬನ್ನೇ ಮಕ್ಕಳು ಮುಂದುವರಿಸಿಕೊಂಡು ಬರುತ್ತಿದ್ದರು. ಆದರೆ ಪ್ರಸ್ತುತ ಮಕ್ಕಳು ಉದ್ಯೋಗ ನಿಮಿತ್ತ ಬೇರೆ ಬೇರೆ ಕಡೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಹಿರಿಯರಿಗೆ ಬೇಕಾದ ಎಲ್ಲ ವ್ಯವಸ್ಥೆಗಳು ಇರುವುದಿಲ್ಲ.
ಆದುದರಿಂದ ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಆಶ್ರಯಧಾಮ ಅನಿರ್ವಾಯವಾಗಿದೆ. ಆಶ್ರಯಧಾಮದ ಸ್ಥಾಪನೆಯು ಸಮಾಜಸೇವೆಯೊಂದಿಗೆ ದೇವರ ಕಾರ್ಯವನ್ನೂ ಮಾಡಿದಂತಾಗಿದೆ ಎಂದು ಆಶೀ ರ್ವ ಚನ ನೀಡಿದರು.
ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಹರಿದಾಸ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತ ನಾಡಿ, ಮನೆಯಿಂದ ಹೊರ ಬಿದ್ದವರು ಮಾತ್ರ ಆಶ್ರಮದಲ್ಲಿ ಇರಬೇಕು ಎಂದೇನೂ ಇಲ್ಲ. ಆದರೆ ತನ್ನ ಏಕಾಂಗಿ ಜೀವನದ ಮಧ್ಯದಲ್ಲೂ ಸಾಧನೆ ಮಾಡುತ್ತೇವೆ ಎನ್ನುವ ಕನಸು ಕಾಣುವವರಿಗೆ ಈ ಆಶ್ರಯಧಾಮ ಒಂದು ನೆಲ ಅಥವಾ ತಳಗಟ್ಟು ಆಗುತ್ತದೆ. ಅವರ ಬದುಕಿಗೆ ಒಂದು ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಈ ಆಶ್ರಯಧಾಮವನ್ನು ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್ ಸ್ಥಾಪಿಸಿದೆ.
ಪ್ರಾಯ ತನ್ನ ಮಿತಿಯನ್ನು ಮೀರಿದಾಗಲೂ ಬದುಕಿನ ಜೀವನೋತ್ಸಾಹಗಳಿಗೆ ಈ ಆಶ್ರಯಧಾಮ ಶಕ್ತಿಯನ್ನು ಕೊಡಬಹುದು. ಸಾಮಾನ್ಯವಾಗಿ ಬದುಕಿನಲ್ಲಿ ನೋವುಂಡು ಬಂದ ಜನರಿಗೆ ಆಶ್ರಯ ನೀಡಿ ಆತ್ಮಶಕ್ತಿಯನ್ನು ತುಂಬುತ್ತದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ನಿಟ್ಟೆ ಎನ್‌ಎಂಎಎಂಐಟಿ ಕಾಲೇಜಿನ ಪ್ರಾಂಶುಪಾಲ ಡಾ| ನಿರಂಜನ್ ಎನ್. ಚಿಪ್ಳೂಣರ್, ಕುರ್ಕಾಲು ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಪೂಜಾರಿ, ಇನ್ನಂಜೆ ಗ್ರಾ.ಪಂ. ಅಧ್ಯಕ್ಷೆ ಮಾಲಿನಿ ಶೆಟ್ಟಿ, ಕಟಪಾಡಿ ಗ್ರಾ.ಪಂ. ಅಧ್ಯಕ್ಷೆ ಪ್ರಭಾ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಮುಖ್ಯ ವೈದ್ಯಾಧಿಕಾರಿ ಡಾ| ಕೆ.ಲಕ್ಷ್ಮೀಶ್ ಉಪಾಧ್ಯಾಯ, ಅಮರನಾಥ್ ಭಟ್, ಗುರುರಾಜ್ ಭಟ್ ಉಪಸ್ಥಿತರಿದ್ದರು.
ಕೃಷ್ಣವೇಣಿ ಆಯುರ್ವೇದ ಆಸ್ಪತ್ರೆಯ ಸಿಇಒ ಡಾ| ಐ. ರಮೇಶ್ ಮಿತ್ತಂತಾಯ ನಿರೂಪಿಸಿ, ಪದ್ಮನಾಭ ಭಟ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
2025ಕ್ಕೆ 25 ಆಪ್ತ ಸಲಹೆಗಳು: ಸಣ್ಣ ಪುಟ್ಟ ಸಂಗತಿಗಳನ್ನು ಆಸ್ವಾದಿಸೋಣ…
Bengaluru: ಮಾಜಿ ಕಾರ್ಪೋರೇಟರ್ ರೇಖಾ ಹತ್ಯೆ; 8 ಮಂದಿಗೆ ಜೀವಾವಧಿ ಶಿಕ್ಷೆ
Gold Fraud Case: ಐಶ್ವರ್ಯ ಗೌಡ ದಂಪತಿಗೆ ಹೈಕೋರ್ಟ್‌ನಿಂದ ಜಾಮೀನು
Aishwarya Gowda Case: ಇನ್ನೊಂದು ಚಿನ್ನದಂಗಡಿಗೆ ವಂಚಿಸಿದ್ದ ಐಶ್ವರ್ಯ ಗ್ಯಾಂಗ್
Sabarimala; ಯಾತ್ರಿಗಳಿಗೆ ಅರಣ್ಯ ಮಾರ್ಗದ ವಿಶೇಷ ಪಾಸ್ ತಾತ್ಕಾಲಿಕ ಸ್ಥಗಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.