ಹುಣಸೂರು:1.25 ಕೆ.ಜಿ ಅಕ್ರಮ ಗಾಂಜಾ ವಶ;ನಾಲ್ವರ ಬಂಧನ, ಒರ್ವ ಪರಾರಿ
Team Udayavani, Mar 5, 2022, 11:23 AM IST
ಹುಣಸೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ಕು ಮಂದಿ ಗಾಂಜಾ ಮಾರಾಟ, ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಗ್ರಾಮಾಂತರ ಠಾಣೆ ಪೊಲೀಸರು ಅವರಿಂದ 1.25 ಕೆ.ಜಿ. ಒಣಗಿದ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಹನಗೋಡು ಬಳಿಯ ದೇವರಾಜಕಾಲೋನಿ ಗೇಟ್ ಹಾಗೂ ಕಟ್ಟೆಮಳಲವಾಡಿಯಲ್ಲಿ ಘಟನೆ ನಡೆದಿದ್ದು, ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿಯ ಸೈಯದ್ ಯೂನೂಸ್, ಮಂಗಳೂರು ಮಾಳ ಹಾಡಿಯ ಮಹದೇವ, ಕೆ.ಆರ್.ನಗರ ಟೌನಿನ ಈಶ್ವರ ನಗರದ ಕಿರಣ್ ಹಾಗೂ ಅಭಿಷೇಕ್ ಬಂಧಿತರು. ಒರ್ವ ಆರೋಪಿ ಪರಾರಿಯಾಗಿದ್ದಾನೆ.
ಹುಣಸೂರು ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಚಿಕ್ಕಸ್ವಾಮಿರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ದೇವರಾಜ ಕಾಲೋನಿ ಗೇಟ್ ಹಾಗೂ ಹನಗೋಡು ರಸ್ತೆ ಹಲಗಪ್ಪರವರ ಜಮೀನಿನ ಬಳಿ.ವ್ಯಕ್ತಿಯೋರ್ವ ಆಟೋದಲ್ಲಿ ಒಣ ಗಾಂಜಾ ಸೊಪ್ಪನ್ನು ತಂದು ಮಾರಾಟ ಮಾಡುತ್ತಿರುವುದಾಗಿ ಬಾತ್ಮೀದಾರರಿಂದ ಬಂದ ಮಾಹಿತಿಯ ಮೇರೆಗೆ ದಾಳಿ ನಡೆಸಿದ ವೇಳೆ ಪಂಚವಳ್ಳಿಯ ಸೈಯದ್‌ಯೂನೂಸ್, ಮಂಗಳೂರುಮಾಳ ಹಾಡಿಯ ಮಹದೇವನನ್ನು ವಶಕ್ಕೆ ಪಡೆದು ಆಟೋ ತಪಾಸಣೆ ನಡೆಸಿದ ವೇಳೆ ಬ್ಯಾಗಿನಲ್ಲಿ ೧ಕೆ.ಜಿ ೧೦೦ಗ್ರಾಂನಷ್ಟು ಒಣ ಗಾಂಜಾ ಸೊಪ್ಪು ಪತ್ತೆಯಾಯಿತು. ಇವರು ಮಂಗಳೂರು ಮಾಳ ಹಾಡಿಯ ಮಹದೇವನಿಗೆ ಮಾರಾಟ ಮಾಡುತ್ತಿದ್ದುದ್ದಾಗಿ ತಿಳಿಸಿದ್ದರಿಂದ ಆತನನ್ನು ಕೂಡ ಬಂಧಿಸಲಾಯಿತು.
ಕಟ್ಟೆಮಳಲವಾಡಿಯಲ್ಲಿ ನಡೆದಿರುವ ಮತ್ತೊಂದು ಪ್ರಕರಣದಲ್ಲಿ ಎಸ್.ಐ.ಜಮೀರ್‌ಅಹಮದ್‌ರಿಗೆ ಬಂದ ಮಾಹಿತಿ ಮೇರೆಗೆ ಕಟ್ಟೆಮಳಲವಾಡಿ ಪಶುಆಸ್ಪತ್ರೆಯ ಆವರಣದಲ್ಲಿ ದಾಳಿ ನಡೆಸಿದ ವೇಲೆ ಕೆ.ಆರ್.ನಗರ ಟೌನಿನ ಕಿರಣ್ ಹಾಗೂ ಅಭಿಷೇಕ್ ಸಿಕ್ಕಿಬಿದ್ದಿದ್ದಾರೆ. ಇವರನ್ನು ತಪಾಸಣೆ ನಡೆಸಿದ ವೇಳೆ ೮೦ಗ್ರಾಂ ನಷ್ಟು ಒಣಗಿದ ಗಾಂಜಾ ಸಿಕ್ಕಿದ್ದು, ಮತ್ತೊರ್ವ ಆರೋಪಿ ಪರಾರಿಯಾಗಿದ್ದಾನೆ. ನಾಲ್ಕರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲಲ್ಲಿ ಗಾಂಜಾ ಕಮಟು
ಹುಣಸೂರು ನಗರ ದಿನೇದಿನೇ ಬೆಳೆಯುತ್ತಿದ್ದು, ಹೊರವಲಯದಲ್ಲಿ ಹೊಸ ಬಡಾವಣೆ, ಪಂಪ್ ಹೌಸ್ ಬಳಿಯ ಸ್ಮಶಾನ, ಒಂಟೆಪಾಳ್ಯ ಬೋರೆ ಬಡಾವಣೆಯ ಪಾರ್ಕ್, ನಲ್ಲೂರು ಪಾಲ ಚಾನಲ್ ಬಳಿಯಲ್ಲಿ ಹಗಲು ವೇಳೆಯೇ ಗಾಂಜಾ ಸೇದುವ ಯುವಕರ ದಂಡೇ ಬೀಡು ಬಿಟ್ಟು ಗಾಂಜಾ ಸೇರುತ್ತಿದ್ದರೂ ಕಾನೂನು ಸುವ್ಯವಸ್ಥೆ ಕಾಪಾಡ ಬೇಕಾದವರು ಕೈಚೆಲ್ಲಿ ಕುಳಿತಿದ್ದರಿಂದಾಗಿ ಅಕ್ಕಪಕ್ಕದ ಊರುಗಳಿಂದ ಗಾಂಜಾ ಮಾರುವವರು ನಿರಂತರವಾಗಿ ಗಾಂಜಾ ಮಾರಾಟ ಮಾಡಿ ಕ್ಷಣಮಾತ್ರದಲ್ಲಿ ನಾಪತ್ತೆಯಾಗಿ ಬಿಡುತ್ತಾರೆ. ಇನ್ನು ನಗರದ ರಂಗನಾಥ ಬಡಾವಣೆ, ಪೌರಕಾರ್ಮಿಕರ ಕಾಲೋನಿ ಸುತ್ತಮುತ್ತಲ ಅಂಗಡಿಗಳಲ್ಲಿ ಮುಂಜಾನೆ ಮದ್ಯ ಮಾರಾಟ ಮಾಡುವವ ಸಂಕ್ಯೆಯೇ ಕಮ್ಮಿ ಇಲ್ಲ. ಮಾಹಿತಿ ನೀಡುವ ಜನರನ್ನು ಟಾರ್ಗೇಟ್ ಮಾಡುವ ಪುಂಡರ ಸಂಖ್ಯೆಯೂ ದಿನೇದಿನೇ ಹೆಚ್ಚಾಗುತ್ತಿದ್ದು, ಹಿರಿಯ ಪೊಲೀಸ್ ಅಕಾರಿಗಳು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.