1 ಎಕ್ಸ್ ಗ್ರೇಡ್ ರಬ್ಬರ್ ಕೆ.ಜಿ. 245 ರೂ.: ಜಾಗತಿಕ ಮಟ್ಟದಲ್ಲಿ ಇಳುವರಿ ಹೊಡೆತ
ರಬ್ಬರ್ ಧಾರಣೆ ಇನ್ನು 10 ವರ್ಷ ಸ್ಥಿರ ಸಾಧ್ಯತೆ
Team Udayavani, Aug 29, 2024, 7:20 AM IST
ಬೆಳ್ತಂಗಡಿ: ಮೂರು ತಿಂಗಳುಗಳಿಂದ ರಬ್ಬರ್ ದರ ಚೇತರಿಕೆ ಹಾದಿಯಲ್ಲಿದ್ದು, ಇನ್ನೂ 10 ವರ್ಷ ಧಾರಣೆ ಸ್ಥಿರವಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಎಪ್ರಿಲ್ ಆರಂಭದಲ್ಲಿ ಕೆ.ಜಿ.ಗೆ 195 ರೂ. ಇದ್ದ ಧಾರಣೆ, ಆ.28ಕ್ಕೆ 231 ರೂ. ತಲುಪಿದೆ. ಜಾಗತಿಕ ಮಟ್ಟದಲ್ಲಿ ರಬ್ಬರ್ ಇಳುವರಿ ಕೈಕೊಟ್ಟ ಪರಿಣಾಮ 1ಎಕ್ಸ್ ಗ್ರೇಡ್ ರಬ್ಬರ್ ಕೆ.ಜಿ. ಧಾರಣೆ 245 ರೂ. ತಲುಪಿದೆ.
ಎಪ್ರಿಲ್ ಅವಧಿಯಲ್ಲಿ ರಬ್ಬರ್ ದರ ಏರುಮುಖ ಕಂಡಿದ್ದು, ಎ.8ಕ್ಕೆ ಕೆ.ಜಿ. ಒಂದಕ್ಕೆ 1ಎಕ್ಸ್ ಗ್ರೇಡ್‌ಗೆ 195 ರೂ. ತಲುಪಿತ್ತು. ಬಳಿಕ 200 ರೂ. ಗಡಿ ದಾಟಿ ಪ್ರಸ್ತುತ 1ಎಕ್ಸ್-245 ಹಾಗೂ 3-230 ಆಸುಪಾಸಿನಲ್ಲಿದೆ. ಸ್ಥಳೀಯವಾಗಿ 1ಎಕ್ಸ್ ಬಹಳ ವಿರಳವಾಗಿದ್ದು, ದೊಡ್ಡ ದೊಡ್ಡ ಎಸ್ಟೇಟ್‌ನಲ್ಲಿ ಮಾತ್ರ ಬೆಳೆಯಲಾಗುತ್ತಿದೆ. ಉಳಿದಂತೆ ಸ್ಥಳೀಯವಾಗಿ 3-4 ಗ್ರೇಡ್ ರಬ್ಬರ್ ಬೆಳೆಯಲಾಗುತ್ತದೆ. ಒಟ್ಟು 70 ರೀತಿಯ ವಸ್ತುಗಳಿಗೆ ರಬ್ಬರ್ ಉಪಯೋಗಿಸಲಾಗುತ್ತಿದೆ.
ಆದರೂ 2021-22ರಲ್ಲಿ 120 ರೂ. ತಲುಪಿದ್ದ ರಬ್ಬರ್ ಧಾರಣೆ ಕ್ರಮೇಣ 150 ಗಡಿಯಲ್ಲೇ ಇದ್ದು, ಕೃಷಿಕರನ್ನು ರಬ್ಬರ್ ಬೆಳೆಯಿಂದಲೇ ವಿಮುಖಗೊಳಿಸುವಂತಿತ್ತು. ಪ್ರಸಕ್ತ ಉತ್ತಮ ಧಾರಣೆ ಕಂಡುಕೊಂಡ ಪರಿಣಾಮ ರಬ್ಬರ್ ಬೆಳೆಗಾರರು ಸಂತಸದಲ್ಲಿದ್ದಾರೆ. ಆದರೆ ಈ ಅವಧಿಯಲ್ಲಿ ರಬ್ಬರ್ ಇಳುವರಿ ಕಡಿಮೆ ಇರುವುದರಿಂದ, ಶೇಖರಿಸಿಟ್ಟ ಬೆಳೆಗಾರರು ಬಂಪರ್ ಲಾಭ ಗಳಿಸಿದ್ದಾರೆ.
ಚೀನ, ಅಮೆರಿಕ ಮತ್ತು ಯುರೋಪ್‌ನಲ್ಲಿ ಉತ್ತಮ ಬೇಡಿಕೆ ವ್ಯಕ್ತವಾಗಿದ್ದು, ಅಷ್ಟು ರಬ್ಬರ್ ಪೂರೈಕೆಯಾಗುತ್ತಿಲ್ಲ.
ಇಳುವರಿ ಕುಸಿತ
ಈ ಬಾರಿ ಹವಾಮಾನ ವೈಪರೀತ್ಯದಿಂದ ಭಾರತದಲ್ಲಿ ರಬ್ಬರ್ ಬೆಳೆ ಇಳುವರಿ ಕೀÒಣಿಸಿತ್ತು. ರಬ್ಬರ್ ಬೆಳೆಯುವ ಇತರ ದೇಶಗಳಲ್ಲೂ ಇಳುವರಿ ಹೊಡೆತದಿಂದ ಧಾರಣೆ ಏರಿಕೆಯಾಗಿದೆ. ಪೂರ್ವ ಮುಂಗಾರು ನಿರೀಕ್ಷಿತ ಮಟ್ಟದಲ್ಲಿ ಬಾರದಿದ್ದರಿಂದ ರಬ್ಬರ್ ಟ್ಯಾಪಿಂಗ್ ವಿಳಂಬವಾಗಿತ್ತು. ಪ್ರಸಕ್ತ ಮುಂಗಾರು ಅವಧಿಯಲ್ಲಿ ಈಗಾಗಲೇ ಎಲ್ಲೆಡೆ ರಬ್ಬರ್ ಸುತ್ತ ಕಳೆ ತೆಗೆದು ಪ್ಲಾಸ್ಟಿಕ್ ಅಳವಡಿಸಿದ್ದಾರೆ.
6.30 ಕೋಟಿ ರೂ. ಲಾಭ
ಪ್ರಸ್ತುತ ರಬ್ಬರ್‌ಗೆ ಉತ್ತಮ ಬೇಡಿಕೆ ಇದ್ದು, ಉತ್ಪಾದನೆ ಕಡಿಮೆ ಇದೆ. ರಬ್ಬರ್ ಗಿಡಗಳನ್ನು ಕಡಿಯುವ ತಪ್ಪು³ ನಿರ್ಧಾರವನ್ನು ಕೃಷಿಕರು ಮಾಡಬಾರದು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಬ್ಬರ್‌ಗೆ ಬೇಡಿಕೆ ಏರಿಕೆ ಯಾಗುತ್ತಿದೆ. ಈ ವರ್ಷ ಬೆಲೆ ಏರಿಕೆಯಿಂದ ನಮ್ಮ ಸದಸ್ಯರಿಗೆ ಸುಮಾರು 6.30 ಕೋಟಿ ರೂ. ಲಾಭ ದೊರಕಿದೆ. ಮುಂದಿನ 10 ವರ್ಷದವರೆಗೆ ಈಗಿನ ಧಾರಣೆ ಸ್ಥಿರವಾಗಿರಲಿದೆ.
-ಶ್ರೀಧರ ಜಿ.ಭಿಡೆ, ಅಧ್ಯಕ್ಷರು,
ಉಜಿರೆ ರಬ್ಬರ್ ಸೊಸೈಟಿ
-ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.