ಅಂಕೆ ಮೀರಿದ ಕೋವಿಡ್ ಸೋಂಕು; ವಾಣಿಜ್ಯ ನಗರಿಯಲ್ಲಿ ಒಂದೇ ದಿನ 10,860 ಪ್ರಕರಣ
ದಿಲ್ಲಿ, ಮುಂಬಯಿಯಲ್ಲಿ ಕೋವಿಡ್ ಸ್ಫೋಟ
Team Udayavani, Jan 5, 2022, 6:15 AM IST
ಹೊಸದಿಲ್ಲಿ: ಕೊರೊನಾ 3ನೇ ಅಲೆಯ ಕಪಿಮುಷ್ಟಿಯಲ್ಲಿ ಸಿಲುಕಿರುವ ದಿಲ್ಲಿ ಮತ್ತು ಮುಂಬಯಿಯಲ್ಲಿ ಈಗ ಸೋಂಕು ಅಂಕೆ ಮೀರಿ ವ್ಯಾಪಿಸುತ್ತಿದೆ.
ಎರಡೂ ನಗರಗಳಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಮುಂಬಯಿಯಲ್ಲಿ ಮಂಗಳವಾರ ಒಂದೇ ದಿನ 10,860 ಕೋವಿಡ್ ಕೇಸುಗಳು ಪತ್ತೆಯಾಗಿದ್ದು, ಸೋಮವಾರಕ್ಕೆ ಹೋಲಿಸಿದರೆ ಶೇ. 34.37ರಷ್ಟು ಹೆಚ್ಚಳವಾದಂತಾಗಿದೆ. ದೈನಂದಿನ ಪ್ರಕರಣ 20 ಸಾವಿರ ದಾಟಿದ್ದೇ ಆದಲ್ಲಿ, ಮುಂಬಯಿ ಯಲ್ಲಿ ಲಾಕ್‌ಡೌನ್ ಹೇರಲಾಗುವುದು ಎಂದು ಮೇಯರ್ ಕಿಶೋರಿ ಪಡೆ°àಕರ್ ಹೇಳಿದ್ದಾರೆ.
ದಿಲ್ಲಿಯಲ್ಲಿ ಮಂಗಳವಾರ 5,481 ಕೇಸು ಪತ್ತೆಯಾಗಿದೆ. ಸೋಂಕಿನ ಪ್ರಸರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದಿಲ್ಲಿ ಸರಕಾರ ಮಂಗಳವಾರ ವೀಕೆಂಡ್ ಕರ್ಫ್ಯೂ ಘೋಷಣೆ ಮಾಡಿದೆ. 50ಕ್ಕಿಂತ ಹೆಚ್ಚು ಹಾಸಿಗೆಗಳಿರುವ ಎಲ್ಲ ಖಾಸಗಿ ಆಸ್ಪತ್ರೆಗಳು ಶೇ.40ರಷ್ಟು ಬೆಡ್‌ಗಳನ್ನು ಕೊರೊನಾ ರೋಗಿಗಳಿಗೆ ಮೀಸಲಿಡುವಂತೆ ಸರಕಾರ ಸೂಚಿಸಿದೆ.
ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಸುಮಾರು 50 ಮಂದಿ ವೈದ್ಯರು ಐಸೋಲೇಟ್ ಆಗಿದ್ದಾರೆ. ಇವರ ಪೈಕಿ ಕೆಲವರಿಗೆ ಸೋಂಕು ದೃಢಪಟ್ಟಿದ್ದರೆ, ಇನ್ನು ಕೆಲವರಲ್ಲಿ ಸೋಂಕಿನ ಲಕ್ಷಣಗಳು ಗೋಚರಿಸಿವೆ. ಏಮ್ಸ್ ಮಾತ್ರವಲ್ಲದೇ, ಸಫªರ್‌ಜಂಗ್ ಆಸ್ಪತ್ರೆಯ 23 ವೈದ್ಯ ರಿಗೂ ಕೊರೊನಾ ಪಾಸಿಟಿವ್ ಆಗಿದೆ. ಐಐಟಿ ಕಾನ್ಪು ರದಲ್ಲೂ 60 ಮಂದಿಗೆ ಸೋಂಕು ದೃಢಪಟ್ಟಿದೆ.
ದಿಲ್ಲಿಯಲ್ಲಿ ವೀಕೆಂಡ್ ಕರ್ಫ್ಯೂ: ಹೆಚ್ಚುತ್ತಿರುವ ಸೋಂಕಿಗೆ ಕಡಿವಾಣ ಹಾಕಲು ಸಾಧ್ಯವಾಗದ ಕಾರಣ ದಿಲ್ಲಿ ಮತ್ತೆ ವೀಕೆಂಡ್ ಕರ್ಫ್ಯೂ ಮೊರೆಹೋಗಿದೆ. ಮಂಗಳವಾರ ಈ ಕುರಿತು ಘೋಷಿಸಿರುವ ಡಿಸಿಎಂ ಮನೀಶ್ ಸಿಸೋಡಿಯಾ, “ಶನಿವಾರ ಹಾಗೂ ರವಿವಾರ ಸಂಪೂರ್ಣವಾಗಿ ಕರ್ಫ್ಯೂ ಹೇರಲಾಗುತ್ತದೆ. ಉಳಿದ ದಿನಗಳಲ್ಲಿ ಅತ್ಯಾವಶ್ಯಕ ಸೇವೆಗಳನ್ನು ಹೊರತುಪಡಿಸಿ ಇತರೆ ಸರಕಾರಿ ಸಿಬಂದಿ ವರ್ಕ್ ಫ್ರಂ ಹೋಂ ಮಾಡಬೇಕು, ಖಾಸಗಿ ಕಚೇರಿಗಳು ಶೇ.50ರ ಆಸನ ಭರ್ತಿಯೊಂದಿಗೆ ಕಾರ್ಯನಿರ್ವಹಿಸಬೇಕು. ಬಸ್ ಮತ್ತು ಮೆಟ್ರೋಗಳು ಶೇ.100ರ ಆಸನ ಭರ್ತಿಯೊಂದಿಗೆ ಸಂಚರಿಸಬಹುದು’ ಎಂದಿದ್ದಾರೆ. ಒಮಿಕ್ರಾನ್‌ನ ತೀವ್ರತೆಯು ಅಲ್ಪಪ್ರಮಾಣದ್ದಾಗಿರುವ ಕಾರಣ, ಹೆಚ್ಚು ಆತಂಕ ಪಡಬೇಕಾಗಿಲ್ಲ ಎಂದೂ ಅವರು ಹೇಳಿದ್ದಾರೆ.
ಕೇಜ್ರಿ, ತಿವಾರಿಗೂ ಸೋಂಕು: ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್, ದಿಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮನೋಜ್ ತಿವಾರಿ ಅವರಿಗೆ ಸೋಂಕು ದೃಢಪಟ್ಟಿದೆ. ಕೇಜ್ರಿವಾಲ್ ಅವರು ಮನೆಯಲ್ಲೇ ಐಸೋಲೇಟ್ ಆಗಿದ್ದಾರೆ. ಕಾಂಗ್ರೆಸ್ ನಾಯಕ ರಣದೀಪ್ ಸುಜೇìವಾಲ ಅವರೂ ತಮ್ಮ ಪರೀಕ್ಷಾ ವರದಿ ಪಾಸಿಟಿವ್ ಬಂದಿರುವುದಾಗಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಕೋವಿಡ್ ಹೆಚ್ಚಳ : ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ, ಬೆಂಗಳೂರಿನಲ್ಲಿ 2 ವಾರ ಶಾಲೆ ಬಂದ್
2 ಸಾವಿರದ ಸನಿಹಕ್ಕೆ ಒಮಿಕ್ರಾನ್ ಕೇಸು: ದೇಶದ 23 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈವರೆಗೆ ಒಟ್ಟಾರೆ 1,892 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 766 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇದೇ ವೇಳೆ, 24 ಗಂಟೆಗಳ ಅವಧಿಯಲ್ಲಿ 37,379 ಮಂದಿಗೆ ಸೋಂಕು ದೃಢಪಟ್ಟಿದ್ದು, 124 ಮಂದಿ ಸಾವಿಗೀಡಾಗಿದ್ದಾರೆ.
24 ಗಂಟೆಗಳಲ್ಲಿ 10 ಲಕ್ಷ ಮಂದಿಗೆ ಸೋಂಕು: ಅಮೆರಿಕದಲ್ಲಿ ಪ್ರತೀ ದಿನವೂ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಾಖಲೆ ನಿರ್ಮಾಣವಾಗುತ್ತಿದೆ. ಸೋಮವಾರ ಒಂದೇ ದಿನ 10 ಲಕ್ಷ ಮಂದಿಗೆ ಸೋಂಕು ದೃಢಪಟ್ಟಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 5.61 ಕೋಟಿ ದಾಟಿದೆ. ಈವರೆಗೆ ಸೋಂಕಿಗೆ 8.27 ಲಕ್ಷ ಮಂದಿ ಬಲಿಯಾದಂತಾಗಿದೆ.
ನೆದರ್‌ಲ್ಯಾಂಡ್‌ನಲ್ಲಿ ಪ್ರತಿಭಟನೆ: ಪ್ರತಿಭಟನೆಗಳಿಗೆ ಸರಕಾರ ನಿಷೇಧ ಹೇರಿದ್ದರೂ ಕೋವಿಡ್ ನಿರ್ಬಂಧಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನೆದರ್‌ಲ್ಯಾಂಡ್‌ನಲ್ಲಿ ಸಾವಿರಾರು ಮಂದಿ ಬೀದಿಗಿಳಿದಿದ್ದಾರೆ. ಆ್ಯಮ್‌ಸ್ಟರ್‌ಡ್ಯಾಂ ನಲ್ಲಿ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಘರ್ಷಣೆಯೂ ನಡೆದಿದೆ.
ನಿರ್ಬಂಧಗಳೇನು?
-ಪಂಜಾಬ್ ರಾ 10ರಿಂದ ಬೆ.5ರ ವರೆಗೆ ರಾತ್ರಿ ಕರ್ಫ್ಯೂ. ಶಾಲೆ-ಕಾಲೇಜು ಮುಚ್ಚಲು ಆದೇಶ. ಶೇ.50ರ ಆಸನ ಭರ್ತಿಯೊಂದಿಗೆ ಸಿನೆಮಾ ಮಂದಿರ ಕಾರ್ಯನಿರ್ವಹಿಸಲು ಅವಕಾಶ
– ಬಿಹಾರ ರಾತ್ರಿ 10ರಿಂದ ಬೆಳಗ್ಗೆ 5 ರವರೆಗೆ ನೈಟ್ ಕರ್ಫ್ಯೂ
-ಛತ್ತೀಸ್‌ಗಢ ಮೆರವಣಿಗೆ, ರ್ಯಾಲಿ, ಸಾರ್ವಜನಿಕ ಸಭೆ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮ ಗಳಿಗೆ ನಿರ್ಬಂಧ. ಪಾಸಿಟಿವಿಟಿ ದರ ಶೇ.4ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಅಂಗನವಾಡಿ ಕೇಂದ್ರ, ಲೈಬ್ರರಿ, ಈಜುಕೊಳ, ಮಾಲ್, ಸಿನೆಮಾ ಬಂದ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
Vavar Mosque: ಶಬರಿಮಲೆ ಯಾತ್ರಿಗಳು ವಾವರ ಮಸೀದಿಗೆ ಹೋಗಬಾರದು: ಬಿಜೆಪಿ ಶಾಸಕ
Viral: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 16ರ ಬಾಲಕನ ಜತೆ ಮನೆ ಬಿಟ್ಟು ಓಡಿದ 10ರ ಬಾಲಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.